ಯೋಗ ಕಲಿಯಿರಿ ಬೇರೆಯವರಿಗೂ ಕಲಿಸಿರಿ: ಕುಶಾಲ್

KannadaprabhaNewsNetwork |  
Published : Jun 23, 2026, 02:00 AM IST
21ಕೆಎಂಎನ್ ಡಿ17 | Kannada Prabha

ಸಾರಾಂಶ

ನಾವು ಆರೋಗ್ಯವಂತರಾಗಿ ಇರಬೇಕಾದರೆ ಪ್ರತಿದಿನ ಎಲ್ಲರೂ ಒಂದು ಗಂಟೆ ವ್ಯಾಯಾಮವನ್ನು ಮೀಸಲಿಡಬೇಕು. ಯೋಗ ಕಲಿತರೆ ರೋಗ ಬರುವುದಿಲ್ಲಯ ಯೋಗದಿಂದ ಅನೇಕ ರೋಗಗಳು ಬರುವುದನ್ನು ತಡೆಗಟ್ಟಬಹುದು.

ಹಲಗೂರು:

ಪ್ರಾಥಮಿಕ ಹಂತದಿಂದಲೇ ಮಕ್ಕಳು ಯೋಗಾಭ್ಯಾಸದ ಕಡೆ ಗಮನ ಹರಿಸಬೇಕು ಎಂದು ಕುಶಾಲ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ವಳಗೆರೆದೊಡ್ಡಿ ಗ್ರಾಮದ ಶ್ರೀಲೀಲಾ ನಾಗರಾಜಪ್ಪ ಎಜುಕೇಶನಲ್ ಟ್ರಸ್ಟ್‌ನ ವಿದ್ಯಾಧಾರೆ ಇಂಟರ್ ನ್ಯಾಷನಲ್ ಸ್ಕೂಲ್‌ನಿಂದ ಹಮ್ಮಿಕೊಂಡಿದ್ದ ಯೋಗ ದಿನಾಚರಣೆಯಲ್ಲಿ ನಿವೃತ್ತ ಶಿಕ್ಷಕ ಮಹಾದೇವ ಪ್ರಸಾದ್ ಪುತ್ರ ಕುಶಾಲ್ ವಿದ್ಯಾರ್ಥಿಗಳಿಗೆ ಸೂರ್ಯ ನಮಸ್ಕಾರ, ಪ್ರಾಣಾಯಾಮ ಮತ್ತು ಇತರೆ ಯೋಗಗಳನ್ನು ಹೇಳಿಕೊಟ್ಟರು.ನಾವು ಆರೋಗ್ಯವಂತರಾಗಿ ಇರಬೇಕಾದರೆ ಪ್ರತಿದಿನ ಎಲ್ಲರೂ ಒಂದು ಗಂಟೆ ವ್ಯಾಯಾಮವನ್ನು ಮೀಸಲಿಡಬೇಕು. ಯೋಗ ಕಲಿತರೆ ರೋಗ ಬರುವುದಿಲ್ಲಯ ಯೋಗದಿಂದ ಅನೇಕ ರೋಗಗಳು ಬರುವುದನ್ನು ತಡೆಗಟ್ಟಬಹುದು ಎಂದರು.

ನೀವು ಯೋಗವನ್ನು ಕಲಿತು ಬೇರೆಯವರಿಗೂ ಸಹ ನೀವು ಕಲಿತ ಯೋಗವನ್ನು ಹೇಳಿಕೊಡಬೇಕು. ರೋಗಗಳು ಬರದಂತೆ ತಡೆಗಟ್ಟಲು ಸಹಕಾರಿಯಾಗಬೇಕು. ವಿದ್ಯಾರ್ಥಿಗಳಿಗೆ ಯೋಗಾಭ್ಯಾಸದ ಭಂಗಿ ತೋರಿಸಿಕೊಟ್ಟು ದಿನನಿತ್ಯ ಶಾಲೆಗೆ ಬರುವುದಕ್ಕೂ ಮುಂಚೆ ಪ್ರಾಥಮಿಕ ಹಂತದಲ್ಲೇ ಯೋಗಾಭ್ಯಾಸ ಮಾಡಿ ಎಂದರು.

ಕಾರ್ಯಕ್ರಮದಲ್ಲಿ ಶಾಲೆ ಸಂಸ್ಥಾಪಕ ಎಚ್‌.ವಿ.ಅಶ್ವಿನ್ ಕುಮಾರ್, ಮೇಲ್ವಿಚಾರಕಿ ಎಚ್‌.ವಿ.ಶ್ವೇತಕುಮಾರಿ, ಪ್ರಿನ್ಸಿಪಾಲ್ ಸಂಧ್ಯಾರಾಣಿ, ಅಕ್ಷತಾ, ದೈಹಿಕ ಶಿಕ್ಷಕ ಸೂರಜ್ ಪ್ರಜಾಪತಿ ಸೇರಿದಂತೆ ಶಿಕ್ಷಕವೃಂದ ಇದ್ದರು. ಸ್ನೇಹ ವಿದ್ಯಾಸಂಸ್ಥೆ ಮಕ್ಕಳಿಂದ ಯೋಗಭ್ಯಾಸ

ಕೆ.ಎಂ.ದೊಡ್ಡಿ:ಸ್ನೇಹ ವಿದ್ಯಾ ಸಂಸ್ಥೆಯಲ್ಲಿ ವಿಶ್ವಯೋಗ ದಿನಾಚರಣೆ ಅಂಗವಾಗಿ ಮಕ್ಕಳು ಯೋಗಭ್ಯಾಸ ಮಾಡಿದರು.

ಈ ವೇಳೆ ಸಂಸ್ಥೆ ಸಂಸ್ಥಾಪಕ ದಾಸೇಗೌಡ ಮಾತನಾಡಿ, ಯೋಗದಿಂದ ಉತ್ತಮ ಆರೋಗ್ಯ ಲಭಿಸುವ ಜತೆಗೆ ಸದೃಢ ದೇಹ ಹೊಂದಲು ಸಾಧ್ಯ ಎಂದರು. ಸಂಸ್ಥೆ ಅಧ್ಯಕ್ಷೆ ಶಶಿಕಲಾ ದಾಸೇಗೌಡ, ಮುಖ್ಯ ಶಿಕ್ಷಕ ರವಿಶಂಕರ್, ಸಹ ಶಿಕ್ಷಕರಾದ ಸ್ವರೂಪ, ಶ್ವೇತ, ಮಮತಾ, ರೂಪಿಣಿ, ಸವಿತಾ, ಮಾಲಾ, ಉಷಾರಾಣಿ, ಸಹನ, ತೇಜಸ್ವಿನಿ, ರಶ್ಮಿ, ಕಲಾವತಿ, ರಂಜಿತಾ ಸೇರಿದಂತೆ ವಿದ್ಯಾರ್ಥಿಗಳು ಮತ್ತು ಬೋಧಕೇತರ ವರ್ಗದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಲಿಗಿ ಕ್ರಾಸ್ ಮೇಲ್ಸೇತುವೆ ಲೋಕಾರ್ಪಣೆ
ಅಡವಿಟ್ಟ ಚಿನ್ನ ಕೇಳಿದ್ದಕ್ಕೆ ಗುಂಡಿನ ದಾಳಿ