ಕಲಿಕೆ ಸರಳೀಕರಣಗೊಳಿಸಲು ಕಲಿಕಾಹಬ್ಬ ಪೂರಕ

KannadaprabhaNewsNetwork |  
Published : Mar 01, 2025, 01:02 AM IST
ಮಣ್ಣೇರಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚೊಳಚಗುಡ್ಡ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಉದ್ದೇಶಿಸಿ ಮಾತನಾಡಿದರು | Kannada Prabha

ಸಾರಾಂಶ

ಮಕ್ಕಳ ಕಲಿಕೆ ಸರಳೀಕರಣಗೊಳಿಸಲು ಹಾಗೂ ಕಲಿಕೆಯಲ್ಲಿ ಆಸಕ್ತಿ ಹೆಚ್ಚಿಸಲು ಎಫ್.ಎಲ್.ಎನ್ ಕಲಿಕೆ ಅನುಕೂಲವಾಗುತ್ತದೆ ಎಂದು ಶಿಕ್ಷಣ ಸಂಯೋಜಕ ಬಿ.ಟಿ.ಹಳ್ಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಾದಾಮಿ

ಮಕ್ಕಳ ಕಲಿಕೆ ಸರಳೀಕರಣಗೊಳಿಸಲು ಹಾಗೂ ಕಲಿಕೆಯಲ್ಲಿ ಆಸಕ್ತಿ ಹೆಚ್ಚಿಸಲು ಎಫ್.ಎಲ್.ಎನ್ ಕಲಿಕೆ ಅನುಕೂಲವಾಗುತ್ತದೆ ಎಂದು ಶಿಕ್ಷಣ ಸಂಯೋಜಕ ಬಿ.ಟಿ.ಹಳ್ಳಿ ಹೇಳಿದರು.

ತಾಲೂಕಿನ ಮಣ್ಣೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚೊಳಚಗುಡ್ಡ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬಉದ್ದೇಶಿಸಿ ಮಾತನಾಡಿದರು. ಗ್ರಾಪಂ ಸದಸ್ಯ ರಾಮನಗೌಡ ಅಯ್ಯನಗೌಡರ ಎಫ್.ಎಲ್.ಎನ್. ಕಲಿಕಾ ಹಬ್ಬದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಾರ್ಯಕ್ರಮ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಯೋಗ್ಯವಾಗಿದೆ ಎಂದರು.ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಕವಿತಾ ಚನಶೆಟ್ಟಿ, ಸರ್ಕಾರಿ ನೌಕರ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ಟಿ. ಪಟ್ಟಣಶೆಟ್ಟಿ ಹಾಗೂ ಸಂಪನ್ಮೂಲ ವ್ಯಕ್ತಿ ಸುರೇಶ ಬೊಂಭಲೆ ಮಾತನಾಡಿದರು. ಸಹಶಿಕ್ಷಕರಾದ ಎಚ್.ಎನ್. ನರಸಾಪುರ, ಜೆಡ್.ಕೆ. ಹುಸೇನ್ ಬಾಯಿ, ಬನಶಂಕರಿ ಮುಖ್ಯಶಿಕ್ಷಕಿ ಪಿ.ಎನ್. ಚಳಗೇರಿ, ಎಂ.ಪಿ. ಅಂಗಡಿ, ಎಸ್.ಎಚ್. ಪೂಜಾರ, ಎಚ್.ಎ. ತಾಳಿಕೋಟಿ ಅವರನ್ನು ಶಾಲೆ ವತಿಯಿಂದ ಗೌರವಿಸಲಾಯಿತು. ಇದೇ ವೇಳೆ ಕಾರ್ಯಕ್ರಮಕ್ಕೆ ಸಹಾಯ ಮಾಡಿದವರನ್ನು ಸನ್ಮಾನಿಸಲಾಯಿತು. ಅಕ್ಷರಬಂಡಿ ಮೆರವಣಿಗೆ: ಅಕ್ಷರ ಬಂಡಿ ಮಾಡಿ, ವಿವಿಧ ವ್ಯಕ್ತಿಗಳ ವೇಷಭೂಷಣ ತೊಟ್ಟ ವಿದ್ಯಾರ್ಥಿಗಳನ್ನು ಅಕ್ಷರ ಬಂಡಿಯಲ್ಲಿ ಕುಳ್ಳಿರಿಸಿ ಮೆರವಣಿಗೆ ಮಾಡಲಾಯಿತು. ಡೊಳ್ಳು ಕುಣಿತ, ಕರಡಿ ಮಜಲು,ಲೇಜಿಮ್‌ ವಿವಿಧ ಆಟ ಆಡುತ್ತ ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಎಸ್.ಬಿ.ಲಾಂಡೆ ಸ್ವಾಗತಿಸಿದರು. ಎಚ್.ಡಿ.ಕುರಿ ನಿರೂಪಿಸಿದರು. ಜವಳಗದ್ದಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರಿಂದ ಪುಣೆಗೆ ಹೊಸ ಹೈಸ್ಪೀಡ್‌ ರೈಲು ಘೋಷಣೆ?
ಬೆಂಗಳೂರು ಜನತೆಗೆ ಮತ್ತೊಂದು ಶಾಕ್ : ಮೆಟ್ರೋ ಟಿಕೆಟ್‌ ಮತ್ತೆ ಏರಿಕೆ? ಯಾವ ಮಾರ್ಗದಲ್ಲಿ ಎಷ್ಟು ಹೆಚ್ಚಳ?