ಕನ್ನಡಪ್ರಭ ವಾರ್ತೆ ಚಿಂತಾಮಣಿ
ತಾಲ್ಲೂಕಿನ ಕೆಂಚರ‍್ಲಹಳ್ಳಿಯ ಸಮುದಾಯ ಭವನದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಗ್ರಾಮ ಪಂಚಾಯತಿ ವತಿಯಿಂದ ಮಕ್ಕಳ ವಿಶೇಷ ಗ್ರಾಮಸಭೆಯಲ್ಲಿ ಮಾತನಾಡಿ, ಮಕ್ಕಳು ಪುಸ್ತಕ ಓದುವುದು, ರಾಮಾಯಣ, ಮಹಾಭಾರತ, ದಿನಪತ್ರಿಕೆಗಳನ್ನು ಓದುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು ಎಂದು ಹೇಳಿದರು.
ಉತ್ತಮ ಮಾರ್ಗದರ್ಶನ ನೀಡಿಮನೆಯೇ ಮೊದಲ ಪಾಠಶಾಲೆ, ತಂದೆ ತಾಯಿಗಳೇ ಮಕ್ಕಳ ಮೊದಲ ಗುರುಗಳಾಗಿದ್ದು, ಮಕ್ಕಳನ್ನು ಚಿಕ್ಕಂದ್ದಿನಲ್ಲೇ ಉತ್ತಮ ವಾತಾವರಣದಲ್ಲಿ ಬೆಳೆಸಿದಾಗ ಅವರು ಮುಂದಿನ ಜೀವನದಲ್ಲಿ ಮೌಲ್ಯಾಧಾರಿತ ಗುಣಗಳನ್ನು ಅಳವಡಿಸಿಕೊಂಡು ಭವಿಷ್ಯತ್ತಿನಲ್ಲಿ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುತ್ತಾರೆಂದರು.
ಮಾಜಿ ಗ್ರಾ.ಪಂ. ಅಧ್ಯಕ್ಷ ಬ್ಯಾಂಕ್ ಕೃಷ್ಣಾರೆಡ್ಡಿ ಮಾತನಾಡಿ, ನಮ್ಮ ಜಿಲ್ಲೆಯಲ್ಲಿ ಪೋಕ್ಸೋ ಪ್ರಕರಣಗಳ ಸಂಖ್ಯೆ ೬೧೧ ಆಗಿದ್ದು ಚಿಂತಾಮಣಿ ತಾಲ್ಲೂಕಿನಲ್ಲಿ ೩೭ ಪ್ರಕರಣಗಳಿವೆಂದು ಇವೆಲ್ಲವುಗಳಿಗೂ ಕಡಿವಾಣ ಹಾಕಬೇಕೆಂದರೆ ಹೆಣ್ಣು ಮಕ್ಕಳು ಭಯಭೀತಿಗೊಳಗಾಗದೇ ಧೈರ್ಯದಿಂದ ಪ್ರಶ್ನಿಸುವಂತಾಗಬೇಕು. ತುರ್ತು ಸಂದರ್ಭದಲ್ಲಿ ೧೦೯೮ ಸಂಖ್ಯೆಗೆ ಕರೆ ಮಾಡುವುದರ ಮೂಲಕ ಸಹಾಯ ಪಡೆಯಬೇಕು ಎಂದರು.