ಕನ್ನಡಪ್ರಭ ವಾರ್ತೆ ದಾಬಸ್‍ಪೇಟೆ
ಸೋಂಪುರ ಹೋಬಳಿಯ ಕೆರೆಗತ್ತಿಗನೂರು ಸಮೀಪದ ಸಮಾಧಾನ ಮಠದ ಶ್ರೀ ಗುರುದೇವಾ ಸೇವಾ ಸಂಸ್ಥೆ ಆವರಣದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮ ಆಯೋಜನೆ ಕುರಿತು ಮಾಹಿತಿ ನೀಡಿದರು.
ಕನ್ನಡದ ಮೊದಲ ಕವಯಿತ್ರಿಯಾದ ಅಕ್ಕಮಹಾದೇವಿಯವರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಮತ್ತು ಆಧ್ಯಾತ್ಮದ ವಿಚಾರವಾಗಿ ಪ್ರತಿ ತಿಂಗಳು ವಿಚಾರ ಗೋಷ್ಠಿ ನಡೆಸುತ್ತಿದ್ದು, ಮೌನ ತಪಸ್ವಿ ಜಡೆಯ ಶಾಂತಲಿಂಗ ಮಹಾ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಸಮಾಧಾನ ಮಠದಲ್ಲಿ ಸೆ.20 ರಂದು ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.ವಿಚಾರ ಗೋಷ್ಠಿಯ ಸಂಚಾಲಕಿ ಶೃತಿಮಹೇಶ್ ಮಾತನಾಡಿ, ಅಕ್ಕಮಹಾದೇವಿಯವರ ಆ ಕಾಲದ ಸಾಮಾಜಿಕ ಕಟ್ಟುಪಾಡುಗಳನ್ನು ಧೈರ್ಯದಿಂದ ಪ್ರಶ್ನಿಸಿ, ಮಹಿಳೆಯರೂ ಸಹ ಸ್ವತಂತ್ರ್ಯವಾಗಿ ಆಲೋಚಿಸುವ ಮತ್ತು ತಮ್ಮ ಜೀವನದ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಕ್ಕಿದೆ ಎಂಬ ಸಂದೇಶವನ್ನು ಸಾರಿದವರು, ಈ ನಿಟ್ಟಿನಲ್ಲಿ ವೀರಶೈವ ಸಾಹಿತ್ಯಕ್ಕೆ ಶಿವಶರಣೆ ಅಕ್ಕಮಹಾದೇವಿಯವರ ಸಾಂಸ್ಕೃತಿಕ ಕೊಡುಗೆಗಳು ವಿಷಯದ ಬಗ್ಗೆ ಉಪನ್ಯಾಸ ನೀಡಲಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು ಬ್ಯಾರಿ ಸಾಹಿತ್ಯ ಆಕಾಡೆಮಿ ಮಾಜಿ ಸದಸ್ಯೆ ಆಯಿಷಾ ಬಾನು ನೆರವೇರಿಸಲಿದ್ದು, ಹಿರಿಯ ಸಾಹಿತಿ ಡಾ.ಹೇಮಾ ಪಟ್ಟಣಶೆಟ್ಟಿ ವಿಷಯ ಮಂಡನೆ ಮಾಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಹೆಚ್ಚಿನ ಭಕ್ತಾದಿಗಳು ಆಗಮಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದ ಸಂಚಾಲಕರುಗಳಾದ ಕಮಲಮ್ಮ ,ಮಂಜುಳ ನಾಗರಾಜ್, ಗೌರಿ ಡೊಳ್ಳಿ, ಶ್ರೀದೇವಿ, ರಶ್ಮಿ, ಭಕ್ತಾದಿಗಳಾದ ಭೀಮಾಶಂಕರ್, ಲಿಂಗಣ್ಣ ಶೀಳಿ, ಮಾಧ್ಯಮ ಸಂಚಾಲಕ ಗಂಗಾಧರ್ ಭಾಗವಹಿಸಿದ್ದರು.
ಪೋಟೋ 1 : ಸೋಂಪುರ ಹೋಬಳಿಯ ಕೆರೆಗತ್ತಿಗನೂರು ಸಮೀಪದ ಸಮಾಧಾನ ಮಠದ ಶ್ರೀ ಗುರುದೇವಾ ಸೇವಾ ಸಂಸ್ಥೆ ಆವರಣದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಟಿಯಲ್ಲಿ ಕಾರ್ಯಕ್ರಮ ಆಯೋಜನೆ ಕುರಿತು ಮಾಹಿತಿ ನೀಡಿದರು.