ದಲಿತರಿಗೆ ಅನ್ಯಾಯ ಆಗದಂತೆ ಕ್ರಮ ತೆಗೆದುಕೊಳ್ಳಲಾಗುವುದು. ಧರಣಿ ಕಾರ್ಯ ನ್ಯಾಯದ ಪರ ಧ್ವನಿ ಆಗಿದ್ದು ಧರಣಿ ಕೈ ಬಿಡುವಂತೆ ತಿಳಿಸಿದರು
ಕುಕನೂರು: ಕಾನೂನಾತ್ಮಕವಾಗಿ ದಾಖಲಾತಿ ಪರಿಶೀಲಿಸಿ ದಲಿತರಿಗೆ ಭೂಮಿ ಹಿಂದಿರುಗಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಹಸೀಲ್ದಾರ ಬಸವರಾಜ ಬೆಣ್ಣೆಶಿರೂರು ಭರವಸೆ ನೀಡಿದರು.
ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ಎದುರು ರಾಜ್ಯ ದಲಿತ ಸಂಘರ್ಷ ಸಮಿತಿ–ಅಂಬೇಡ್ಕರ್ ಧ್ವನಿ, ಚಂದ್ರಕಾಂತ ಎಸ್.ಕಾದ್ರೋಳ್ಳಿ ಬಣದವರು ತಾಲೂಕಿನ ಚಂಡೂರು ಗ್ರಾಮದಲ್ಲಿ ದಲಿತರ ಜಮೀನಿನಲ್ಲಿ ಸೋಲಾರ್ ಪ್ಯಾನಲ್ ಅಳವಡಿಕೆ ಕಾರ್ಯ ಆಗುತ್ತಿದ್ದು, ಅದನ್ನು ನಿಲ್ಲಿಸಿ ದಲಿತರಿಗೆ ಭೂಮಿ ವಾಪಸ್ ಮಾಡುವಂತೆ ಆಗ್ರಹಿಸಿ ಮಂಗಳವಾರ ಹಾಗೂ ಬುಧವಾರ ಹಮ್ಮಿಕೊಂಡಿದ್ದ ಅನಿರ್ಧಿಷ್ಟಾವಧಿ ಧರಣಿ ಸ್ಥಳಕ್ಕೆ ಬುಧವಾರ ಆಗಮಿಸಿ ಮಾತನಾಡಿದ ಅವರು, ದಲಿತರಿಗೆ ಅನ್ಯಾಯ ಆಗದಂತೆ ಕ್ರಮ ತೆಗೆದುಕೊಳ್ಳಲಾಗುವುದು. ಧರಣಿ ಕಾರ್ಯ ನ್ಯಾಯದ ಪರ ಧ್ವನಿ ಆಗಿದ್ದು ಧರಣಿ ಕೈ ಬಿಡುವಂತೆ ತಿಳಿಸಿದರು. ಅವರ ಮಾತಿನಂತೆ ಧರಣಿಕಾರರು ಕೈ ಬಿಟ್ಟರು.
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ–ಅಂಬೇಡ್ಕರ್ ಧ್ವನಿ, ಚಂದ್ರಕಾಂತ ಎಸ್.ಕಾದ್ರೋಳ್ಳಿ ಬಣದ ಜಿಲ್ಲಾಧ್ಯಕ್ಷ ನಿಂಗಪ್ಪ ಬೆಣಕಲ್ಲ, ಕಾರ್ಯದರ್ಶಿ ಕರಿಯಪ್ಪ ಡಿ ಮಣ್ಣಿನವರ, ಜಿಲ್ಲಾ ಪ್ರಧಾನ ಸಂಚಾಲಕ ಮೈಲಾಪ್ಪ ಮಾದಿನೂರು, ಕುಕನೂರು ತಾಲೂಕಾಧ್ಯಕ್ಷ ಶ್ರೀಕಾಂತ ಹೊಸಮನಿ, ಕಾರ್ಯದರ್ಶಿ ಲೋಹಿತ್ ಬಳಗೇರಿ, ರೈತರಾದ ಈರಪ್ಪ ಹಿರೇಮನಿ, ಶಶಿಕಲಾ ಮಠದ, ಸಂಜೀವ ಮೂರ್ತಿ, ಯಲ್ಲಪ್ಪ ಮೆಳ್ಳಿಕೇರಿ, ಮಾರುತಿ ದೊಡ್ಡಮನಿ ಇತರರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.