ಮೂಲ್ಕಿ ವಿಜಯ ಕಾಲೇಜಿನಲ್ಲಿ ಕಾನೂನು ಮಾಹಿತಿ ಶಿಬಿರ

KannadaprabhaNewsNetwork |  
Published : Nov 14, 2024, 12:52 AM IST
ಮೂಲ್ಕಿ ವಿಜಯ ಕಾಲೇಜಿನಲ್ಲಿ ಕಾನೂನು ಮಾಹಿತಿ ಶಿಬಿರ | Kannada Prabha

ಸಾರಾಂಶ

ಕಂಕನಾಡಿಯ ಫಾದರ್‌ ಮುಲ್ಲರ್ಸ್‌ ಆಸ್ಪತ್ರೆಯ ಮನೋವೈದ್ಯಕೀಯ ಆಪ್ತಸಮಾಲೋಚಕ ಶ್ರೀಪತಿ ಭಟ್‌ ಅಪ್ರಾಪ್ತಮಕ್ಕಳ ಲೈಂಗಿಕ ಅಪರಾಧ ತಡೆಯುವ ಬಗ್ಗೆ , ಕೆನರಾ ಬ್ಯಾಂಕ್‌ ದೇರಳಕಟ್ಟೆ ಶಾಖೆಯ ಹಿರಿಯ ಪ್ರಬಂಧಕ ಸುದೇಶ್ ಕುಮಾರ್ ಶೆಟ್ಟಿಯವರು ಬ್ಯಾಂಕ್‌ ನೇಮಕಾತಿ ಪರೀಕ್ಷೆ ಬಗ್ಗೆ ಮಾಹಿತಿ ನೀಡಿದರು.

ಕನ್ನಡಪ್ರಭ ವಾರ್ತೆ ಮೂಲ್ಕಿ

ಕೆನರಾ ಬ್ಯಾಂಕ್ ಸ್ಥಾಪಕ ಅಮ್ಮೆಂಬಳ ಸುಬ್ಬರಾವ್ ಮೂಲ್ಕಿಯಲ್ಲಿ ಜನಿಸಿ, ಕಾನೂನು ಪದವಿಯಲ್ಲಿ ರ‍್ಯಾಂಕ್‌ ಗಳಿಸಿ ಮುನ್ಸಿಪ್ ಕೋರ್ಟಿನಲ್ಲಿ ಕಾನೂನು ವೃತ್ತಿ ನಡೆಸಿ, ರಾಜಿ ಪಂಚಾಯಿತಿಕೆ ಮೂಲಕ ಬಡವರಿಗೆ ನ್ಯಾಯ ಒದಗಿಸಿ, ಕೆನರಾ ಬ್ಯಾಂಕ್, ಕೆನರಾ ಕಾಲೇಜನ್ನು ಸ್ಥಾಪಿಸಿದ ಮಹಾನ್ ಸಾಧಕರೆಂದು ಕೆನರಾ ಬ್ಯಾಂಕ್, ಫೌಂಡರ್ಸ್‌ ಸರ್ಕಲ್, ವೃತ್ತ ಕಚೇರಿಯ ಜನರಲ್‌ ಮೆನೇಜರ್‌ ಸುಧಾಕರ ಕೊಟ್ಟಾರಿ ಹೇಳಿದರು.

ಕೆನರಾ ಬ್ಯಾಂಕ್ ಸ್ಥಾಪಕರ ದಿನಾಚರಣೆ ಪ್ರಯುಕ್ತ ಮೂಲ್ಕಿ ವಿಜಯ ಕಾಲೇಜು ಮೂಲ್ಕಿ, ಭಾರತದ ಕಾನೂನು ನೆರವು ಘಟಕ ಹಳೆಯಂಗಡಿ, ವಿಜಯ ಮಾಸ್ಟರ್ ಟ್ರಸ್ಟ್ ಹಳೆಯಂಗಡಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಮತ್ತು ಕೆನರಾ ಬ್ಯಾಂಕ್ ಮೂಲ್ಕಿಯ ಸಹಯೋಗದಲ್ಲಿ ಮೂಲ್ಕಿಯ ವಿಜಯ ಕಾಲೇಜಿನಲ್ಲಿ ಪದವಿ ವಿದ್ಯಾರ್ಥಿಗಳಿಗೆ ಜರುಗಿದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆ ಹಾಗೂ ಬ್ಯಾಂಕ್ ನೇಮಕಾತಿ ಪರೀಕ್ಷೆ ಮಾಹಿತಿ ಶಿಬಿರವನ್ನು ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಭಾರತದ ಕಾನೂನು ನೆರವು ಘಟಕ ಹಳೆಯಂಗಡಿಯ ಅಧ್ಯಕ್ಷ ಡೇನಿಯಲ್ ದೇವರಾಜ್ ವಹಿಸಿದ್ದರು. ರಾಷ್ಟ್ರ ಮಟ್ಟದ ಕೆನರಾ ಬ್ಯಾಂಕ್‌ನ ಮ್ಯಾನೇಜರುಗಳಿಗೆ ನಡೆಸಿರುವ ಪ್ರಬಂಧ ಸ್ವರ್ಧೆಯಲ್ಲಿ ವಿಜೇತರಾದ ಪ್ರಥಮ ಬಹುಮಾನ ಪಡೆದ ಕೆನರಾ ಬ್ಯಾಂಕ್‌ ದೇರಳಕಟ್ಟೆ ಶಾಖೆಯ ಹಿರಿಯ ಪ್ರಬಂಧಕ ಸುದೇಶ್ ಕುಮಾರ್ ಶೆಟ್ಟಿ, ದ್ವಿತೀಯ ಬಹುಮಾನ ಪಡೆದ ಮಂಗಳೂರು ಕಾರ್‌ ಸ್ಟ್ರೀಟ್‌ ಶಾಖೆಯ ಹಿರಿಯ ಪ್ರಬಂಧಕ ರಾಘವೇಂದ್ರ ಮಲ್ಯ ಎಮ್, ತೃತೀಯ ಬಹುಮಾನ ಪಡೆದ ಕಿನ್ನಿಗೋಳಿ ಶಾಖೆಯ ಹಿರಿಯ ಪ್ರಬಂಧಕ ರೋಯ್‌ಸ್ಟನ್ ಆಳ್ವ ಮತ್ತು ಮೂಲ್ಕಿ ಶಾಖೆಯ ಹಿರಿಯ ಪ್ರಬಂಧಕ ಅನಿರುದ್ಧ್ ಕುಮಾರ್ ಅವರಿಗೆ ಬಹುಮಾನ ನೀಡಿ ಸನ್ಮಾನಿಸಲಾಯಿತು.

ಮೂಲ್ಕಿಯ ವಿಜಯ ಕಾಲೇಜಿನ ಪ್ರಾಚಾರ್ಯ ಪ್ರೊ. ವೆಂಕಟೇಶ್ ಭಟ್, ಮೂಲ್ಕಿಯ ಶ್ರೀ ನಾರಾಯಣ ಗುರು ಸಂಯುಕ್ತ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ರಮೇಶ್‌ , ಮೂಲ್ಕಿಯ ಸಿ ಎಸ್‌ ಐ ಯುನಿಟಿ ಚರ್ಚ್‌ ನ ಸಭಾ ಪಾಲಕ ರೆವೆ. ಸ್ಟೀವನ್ ಸರ್ವೊತ್ತಮ, ಸಮಾಜ ಸೇವಕ ಮಂಜುನಾಥ್ ಆರ್‌ ಕೆ, ವಕೀಲ ಶಶಿಕುಮಾರ್ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಕೆನರಾ ಬ್ಯಾಂಕ್ ನ ಹಿರಿಯ ಪ್ರಬಂಧಕ ಹಾಗೂ ರುಡ್‌ಸೆಡ್ ಇನ್ಸಿಟ್ಯೂಟ್ ಉಜಿರೆಯ ಮಾಜಿ ನಿರ್ದೇಶಕ ಎಮ್ ಸುಬ್ರಾಯ ಪ್ರಭು ಬ್ಯಾಂಕ್ ನೇಮಕಾತಿ ಬಗ್ಗೆ ಮಾಹಿತಿ ನೀಡಿದರು.

ಕಂಕನಾಡಿಯ ಫಾದರ್‌ ಮುಲ್ಲರ್ಸ್‌ ಆಸ್ಪತ್ರೆಯ ಮನೋವೈದ್ಯಕೀಯ ಆಪ್ತಸಮಾಲೋಚಕ ಶ್ರೀಪತಿ ಭಟ್‌ ಅಪ್ರಾಪ್ತಮಕ್ಕಳ ಲೈಂಗಿಕ ಅಪರಾಧ ತಡೆಯುವ ಬಗ್ಗೆ , ಕೆನರಾ ಬ್ಯಾಂಕ್‌ ದೇರಳಕಟ್ಟೆ ಶಾಖೆಯ ಹಿರಿಯ ಪ್ರಬಂಧಕ ಸುದೇಶ್ ಕುಮಾರ್ ಶೆಟ್ಟಿಯವರು ಬ್ಯಾಂಕ್‌ ನೇಮಕಾತಿ ಪರೀಕ್ಷೆ ಬಗ್ಗೆ ಮಾಹಿತಿ ನೀಡಿದರು.ಪ್ರಥಮ ದರ್ಜೆ ಕಾಲೇಜು ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ಮೂಲ್ಕಿ ವಿಜಯ ಕಾಲೇಜು ಮಶೀತಾ ಪ್ರಥಮ , ಪೊಂಪೈ ಕಾಲೇಜು ಐಕಳದ ಸನ್ನಿದಿ ದ್ವಿತೀಯ ,ರಕ್ಷಾ ತೃತೀಯ ಬಹುಮಾನ ಪಡೆದಿದ್ದು ಬಹುಮಾನ ವಿತರಿಸಲಾಯಿತು. ಮೂಲ್ಕಿ ವಿಜಯ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಶೈಲಜಾ ವೈ ಸ್ವಾಗತಿಸಿದರು. ವಕೀಲ ಪ್ರತೀಕ್ಷಾ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ರಮೇಶ್ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿಎಂ ಹುದ್ದೆ ಬಗ್ಗೆ ರಾಹುಲ್‌ ನಿರ್ಧಾರ ಮಾಡ್ತಾರೆ : ಸಿದ್ದು
ಎರಡು ಪೋಲಿಯೊ ಹನಿ ಮಕ್ಕಳಿಗೆ ಜೀವಾಮೃತ: ಶಾಸಕ ಪ್ರಸಾದ್ ಅಬ್ಬಯ್ಯ