-ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅವರಿಗೆ ಅಭಿನಂದಿಸಿದ ಗ್ರಾಮಸ್ಥರು
------ಕನ್ನಡಪ್ರಭ ವಾರ್ತೆ, ಚಿತ್ರದುರ್ಗ
ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಚಿತ್ರದುರ್ಗ ತಾಲೂಕಿನ 8 ಕೆರೆಗಳಿಗೆ ನೀರನ್ನು ಹರಿಸಲು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಬಳಿ ಚರ್ಚಿಸಿದ ಶಾಸಕ ಕೆ.ಸಿ.ವಿರೇಂದ್ರ ಅವರನ್ನು ಗ್ರಾಮಸ್ಥರು ಪ್ರವಾಸಿ ಮಂದಿರದಲ್ಲಿ ಭೇಟಿಯಾಗಿ ಅಭಿನಂದನೆ ಸಲ್ಲಿಸಿದರು.ತಾಲೂಕಿನ ಗೂಡಬನಹಾಳ್, ತಿಮ್ಮಣ್ಣ ನಾಯಕ ಕೆರೆ, ಹುಲ್ಲೂರು, ಮಾನಂಗಿ, ಕಾಟೇಹಳ್ಳಿ, ಸಿದ್ದಾಪುರ, ಮಠದ ಹಿಂದಿನ ಕೆರೆ, ಪಂಡರಹಳ್ಳಿ ಗೋಕಟ್ಟೆ, ಹಲಸಿನ ಕರೆ, ಸಿಂಗಾಪುರ ಗೊಲ್ಲರಹಟ್ಟಿಯ ಕರೆಗಳಿಗೆ ನೀರು ತರಬೇಕೆಂದು ಹಲವು ವರ್ಷಗಳಿಂದ ಹೋರಾಟ ನಡೆಯುತ್ತಿತ್ತು. ಆದರೂ, ಅದು ಕಾರ್ಯ ಗತವಾಗಿರಲಿಲ್ಲ. ಶಾಸಕ ವಿರೇಂದ್ರ ಅವರು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಅವರನ್ನು ಭೇಟಿ ಮಾಡಿ, ಈ ಭಾಗದಲ್ಲಿ ನೀರಿನ ಭವಣೆ ಹೆಚ್ಚಾಗಿದೆ. ಈ ಕೆರೆಗಳಿಗೆ ನೀರು ಉಣಿಸುವುದರ ಮೂಲಕ ಈ ಭಾಗದ ರೈತರಿಗೆ ಅನುಕೂಲವಾಗಲಿದೆ ಎಂದು ಸಚಿವರಿಗೆ ಮನವರಿಕೆ ಮಾಡಿಕೊಟ್ಟಿದ್ದರು.
ಮನವಿ ಆಲಿಸಿದ ಡಿ.ಕೆ.ಶಿವಕುಮಾರ್ ವಿಶ್ವೇಶ್ವರಯ್ಯ ಜಲ ನಿಗಮದಿಂದ ಸರ್ವೇ ಮಾಡುವಂತೆ ಚಿತ್ರದುರ್ಗದ ಭದ್ರಾ ಮೇಲ್ದಂಡೆ ಯೋಜನಾ ವಲಯದ ಮುಖ್ಯ ಇಂಜಿನಿಯರರಿಗೆ ಸೂಚನೆ ನೀಡಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆಯಡಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಕೈಬಿಟ್ಟ ಕೆರೆಗಳನ್ನು ತುಂಬಿಸುವ ಕಾಮಗಾರಿಗೆ ಆರ್ಥಿಕವಾಗಿ ಮತ್ತು ತಾಂತ್ರಿಕವಾಗಿ ಕಾರ್ಯ ಸಾಧ್ಯವಾಗುವಂತೆ ವಿವರವಾದ ಫೀಲ್ಡ್ ಸರ್ವೇ ಮಾಡಿಸಿ, ಕಾರ್ಯ ಸಾಧ್ಯತಾ ವರದಿ ತಯಾರಿಸಲು ಸಮಾಲೋಚಕರ ಸೇವೆಯನ್ನು ಪಡೆಯಲು 22 ಲಕ್ಷ ರು. ನೀಡಲಾಗಿದೆ ಎಂದು ವೀರೇಂದ್ರ ಪಪ್ಪಿ ರೈತರಿಗೆ ಮನವರಿಕೆ ಮಾಡಿಕೊಟ್ಟರು.ಪಂಚ ಗ್ಯಾರೆಂಟಿ ಯೋಜನೆಗಳ ಆನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಶಿವಣ್ಣ, ಶೇಖರಪ್ಪ ಸಿಂಗಾಪುರ, ಗಂಗಾಧರ, ತಿಪ್ಪೇಸ್ವಾಮಿ ಹುಲ್ಲೂರು, ರವಿಕುಮಾರ್, ರೇವಣ್ಣ ಗೂಡಬನಹಾಳ್, ಸಿದ್ದಲಿಂಗಪ್ಪ, ಧನಂಜಯ, ನಿರಂಜನ, ಮಹಾದೇವಪ್ಪ, ಚಂದ್ರಶೇಖರ್, ಸಂದೀಪ್, ರೇವಣ್ಣ ಸಿದ್ದಪ್ಪ, ಶಿವಕುಮಾರ್, ಮಲೇಶಪ್ಪ, ನಿರಂಜನ, ಚಿತ್ರಲಿಂಗಪ್ಪ, ಸಿದ್ದಲಿಂಗಪ್ಪ, ಕಾಂತರಾಜ್, ಹಾಲೇಶ್, ಲೋಕೇಶ್ ಉಪಸ್ಥಿತರಿದ್ದರು
------------ಪೋಟೋ: ಚಿತ್ರದುರ್ಗ ತಾಲೂಕಿನ ಎಂಟು ಕೆರೆಗಳಿಗೆ ನೀರು ಹಾಯಿಸುವ ಸಂಬಂಧ ಸಮೀಕ್ಷಾ ಕಾರ್ಯ ಕೈಗೊಳ್ಳಲು ಕ್ರಮವಹಿಸಿದ ಶಾಸಕ ವೀರಂದ್ರ ಪಪ್ಪಿ ಅವರಿಗೆ ಗ್ರಾಮಸ್ಥರು ಅಭಿನಂದಿಸಿದರು.
-------ಫೋಟೋ: 2 ಸಿಟಿಡಿ1
--