ಕನ್ನಡಪ್ರಭ ವಾರ್ತೆ ಹನೂರು
ಹರ್ಷಿತ್ (10) ಮೃತ. ಬೆಂಗಳೂರಿನ ಲಗ್ಗೆರೆಯ 10ಕ್ಕೂ ಹೆಚ್ಚು ನಿವಾಸಿಗಳು ಪಾದಯಾತ್ರೆ ಮೂಲಕ ಮಲೆ ಮಹದೇಶ್ವರ ಬೆಟ್ಟದಿಂದ ನಾಗಮಲೆಗೆ ತೆರಳುತ್ತಿದ್ದರು. ಈ ವೇಳೆ ಇಂಡಿಗನತ್ತ ಗ್ರಾಮದ ಬಳಿ ತೆರಳುವಾಗ ಕಾನನ ಮಧ್ಯದಲ್ಲಿ ಚಿರತೆ ದಾಳಿ ಮಾಡಿದೆ. ಕುಟುಂಬಸ್ಥರು ಅರಚಾಡಿದರೂ ಬಿಡದ ಚಿರತೆಯು ಬಾಲಕನನ್ನು ಕಚ್ಚಿಕೊಂಡು ಕಾಡಿನ ಮಧ್ಯಕ್ಕೆ ಕೊಂಡುಹೋಗಿ ಕೊಂದು ಹಾಕಿದೆ. ಘಟನೆಯ ಕುರಿತು ಮಾಹಿತಿ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಬಾಲಕನ ಶವ ಪತ್ತೆ ಹಚ್ಚಿದ್ದಾರೆ. ಬಾಲಕನ ಮರಣೋತ್ತರ ಪರೀಕ್ಷೆಯನ್ನು ಮಲೆ ಮಹದೇಶ್ವರ ಬೆಟ್ಟದಲ್ಲಿ ಮಾಡಲಾಗಿದೆ. ಬಾಲಕನ ಪೋಷಕರಿಗೆ ₹20 ಲಕ್ಷ ಪರಿಹಾರವನ್ನು ಅರಣ್ಯ ಇಲಾಖೆ ಘೋಷಿಸಿದೆ.
ಘಟನೆ ಹಿನ್ನೆಲೆ:ಬೆಂಗಳೂರಿನ ಲಗ್ಗೆಯ ನಿವಾಸಿ ಸುರೇಶ್ ಅವರ ಕುಟುಂಬವು ಶನಿವಾರ ಮಹದೇಶ್ವರ ಬೆಟ್ಟಕ್ಕೆ ತೆರಳಿ ದೇವರ ದರ್ಶನ ಪಡೆದು ಅಲ್ಲಿಯೇ ವಾಸ್ತವ್ಯ ಹೂಡಿದ್ದರು. ಭಾನುವಾರ ಬೆಳಗ್ಗೆ ನಾಗಮಲೆಗೆ ತೆರಳುತ್ತಿದ್ದರು. ಈ ವೇಳೆ ದುರ್ಘಟನೆ ಸಂಭವಿಸಿದೆ.
ಮೃತ ಬಾಲಕನ ಕುಟುಂಬಕ್ಕೆ ಅರಣ್ಯ ಇಲಾಖೆ ₹20 ಲಕ್ಷ ಪರಿಹಾರ ಘೋಷಿಸಿದೆ. ಜೊತೆಗೆ 4 ವರ್ಷ ಪ್ರತಿ ತಿಂಗಳು ₹4000 ಜಮೆ ಮಾಡಲಾಗುತ್ತದೆ. ಉಳಿದ ₹15 ಲಕ್ಷ ಮೊತ್ತವನ್ನು ಖಾತೆಗೇ ಜಮೆ ಮಾಡಲಾಗುತ್ತದೆ ಎಂದು ಇಲಾಖೆ ಘೋಷಿಸಿದೆ.
ಮಲೆಮಹದೇಶ್ವರ ಬೆಟ್ಟದಿಂದ ನಾಗಮಲೆಗೆ ಪಾದಯಾತ್ರೆ ಶುರುವಾಗುವ ಅವಧಿ ಬೆಳಗ್ಗೆ 7. ಆದರೆ ಭಾನುವಾರ ಅರಣ್ಯ ಇಲಾಖೆಯು 6 ಗಂಟೆಗೇ ಟಿಕೆಟ್ ವಿತರಿಸಿ, ಪಾದಯಾತ್ರೆಗೆ ಅನುಮತಿ ಕೊಟ್ಟಿದೆ. ಬೆಳಗ್ಗೆ 3-6 ಗಂಟೆ ಕಾಡು ಪ್ರಾಣಿಗಳ ಸಂಚರಿಸುವ ವೇಳೆಯಾಗಿದೆ. ನಿಯಮ ಪ್ರಕಾರ ಪಾದಯಾತ್ರಿಗಳೊಂದಿಗೆ ಕನಿಷ್ಠ ಒಬ್ಬ ಅರಣ್ಯ ಸಿಬ್ಬಂದಿ ಹಾಜರಿ ಕಡ್ಡಾಯ. ಅಲ್ಲಲ್ಲಿ ಕುಡಿಯುವ ನೀರು, ಕಾಡು ಪ್ರಾಣಿಗಳ ಕುರಿತು ಎಚ್ಚರಿಕೆ ಫಲಕ ಪ್ರಕಟಣೆ ಕಡ್ಡಾಯವಾಗಿದೆ. ಆದರೆ ಅರಣ್ಯ ಇಲಾಖೆ ಈ ಎಲ್ಲ ನಿಯಮಗಳನ್ನು ಗಾಳಿಗೆ ತೂರಿದ್ದರಿಂದ ಬಾಲಕನ ಸಾವಿಗೆ ಕಾರಣವಾಗಿದೆ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ವರ್ಷದಲ್ಲಿ 3ನೇ ದಾಳಿ, 2ನೇ ಸಾವು:
ಕೋಟ್...
-ಪವಿತ್ರಾ, ಬಾಲಕನ ತಾಯಿ
ಕೋಟ್...
-ಎಂ.ಆರ್.ಮಂಜುನಾಥ್, ಹನೂರು ಶಾಸಕ.