ಇಂಡಿಗನತ್ತದಲ್ಲಿ ಬಾಲಕನ ಬಲಿ ಪಡೆದಿದ್ದ ಚಿರತೆ ಕೊನೆಗೂ ಸೆರೆ

KannadaprabhaNewsNetwork |  
Published : May 25, 2026, 01:30 AM IST
ಬಾಲಕ ಬಲಿ ಪ್ರಕರಣ: ಇಂಡಿಗನತ್ತದಲ್ಲಿ ಚಿರತೆ ಸೆರೆ- ನಾಗಮಲೆಯಲ್ಲಿ ಮತ್ತೊಂದು ಚಿರತೆ ಪ್ರತ್ಯಕ್ಷ  ಕಾರ್ಯಾಚರಣೆ ಮುಂದುವರಿಸಿ ಚಿರತೆಯನ್ನು ಸೆರೆ ಹಿಡಿಯಲು ನಿವಾಸಿಗಳ ಅಗ್ರಹ.. | Kannada Prabha

ಸಾರಾಂಶ

ಇದೀಗ ಹೆಣ್ಣು ಚಿರತೆಯೊಂದು ತು‌ಮಕೂರು ಮಾದರಿ ಬೋನಿಗೆ ಬಿದ್ದಿದ್ದು, ಚಿರತೆಯ ರಕ್ತದ ಮಾದರಿ, ಕ್ಯಾಮೆರಾ ಟ್ರ್ಯಾಪ್ ನಲ್ಲಿ ಸೆರೆಸಿಕ್ಕ ಚಿರತೆಯ ದೃಶ್ಯಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯ ಮತ್ತು ತಜ್ಞರಿಗೆ ರವಾನೆ ಮಾಡಲಿದ್ದು, ಬಾಲಕನ ಸಾವಿಗೆ ಕಾರಣವಾದ ಚಿರತೆ ಬಗ್ಗೆ ದೃಢಪಡಿಸಿಕೊಂಡು, ಸೆರೆ ಸಿಕ್ಕ ಚಿರತೆಯನ್ನು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ರವಾನೆ ಮಾಡಲಾಗುವುದು ಎಂದು ಕಾವೇರಿ ವನ್ಯಜೀವಿಧಾಮದ ಡಿಸಿಎಫ್ ಸುರೇಂದ್ರ ಮಾಹಿತಿ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಹನೂರು

ಮಲೆ ಮಾದೇಶ್ವರ ಬೆಟ್ಟ ವ್ಯಾಪ್ತಿಯ ಇಂಡಿಗನತ್ತ ಬಳಿ ಬಾಲಕನ ಬಲಿ ಪಡೆದಿದ್ದ ಚಿರತೆಯನ್ನು ಕೊನೆಗೂ ಅದೇ ಜಾಗದಲ್ಲಿ ಸೆರೆ ಹಿಡಿಯಲಾಗಿದೆ.

ಕಳೆದ ಮೇ 10ರಂದು ನಾಗಮಲೆಗೆ ಕಾಲ್ನಡಿಗೆಯಲ್ಲಿ ತೆರಳುವಾಗ ಬೆಂಗಳೂರಿನ ಹರ್ಷಿತ್ ಎಂಬ ಬಾಲಕ ಚಿರತೆ ದಾಳಿಯಿಂದ ಮೃತಪಟ್ಟಿದ್ದನು. ಈ ಹಿನ್ನೆಲೆ ಕಾವೇರಿ ವನ್ಯಜೀವಿಧಾಮದ ಸುಮಾರು 50 ಸಿಬ್ಬಂದಿ ಕಳೆದ 14 ದಿನಗಳಿಂದ ವಿವಿಧ ಮಾದರಿಯ ಮೂರು ಬೋನ್ ಗಳನ್ನು ಇಟ್ಟು ಕಾರ್ಯಾಚರಣೆ ನಡೆಸುತ್ತಿದ್ದರು.

ಇದೀಗ ಹೆಣ್ಣು ಚಿರತೆಯೊಂದು ತು‌ಮಕೂರು ಮಾದರಿ ಬೋನಿಗೆ ಬಿದ್ದಿದ್ದು, ಚಿರತೆಯ ರಕ್ತದ ಮಾದರಿ, ಕ್ಯಾಮೆರಾ ಟ್ರ್ಯಾಪ್ ನಲ್ಲಿ ಸೆರೆಸಿಕ್ಕ ಚಿರತೆಯ ದೃಶ್ಯಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯ ಮತ್ತು ತಜ್ಞರಿಗೆ ರವಾನೆ ಮಾಡಲಿದ್ದು, ಬಾಲಕನ ಸಾವಿಗೆ ಕಾರಣವಾದ ಚಿರತೆ ಬಗ್ಗೆ ದೃಢಪಡಿಸಿಕೊಂಡು, ಸೆರೆ ಸಿಕ್ಕ ಚಿರತೆಯನ್ನು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ರವಾನೆ ಮಾಡಲಾಗುವುದು ಎಂದು ಕಾವೇರಿ ವನ್ಯಜೀವಿಧಾಮದ ಡಿಸಿಎಫ್ ಸುರೇಂದ್ರ ಮಾಹಿತಿ ನೀಡಿದ್ದಾರೆ.

ಇನ್ನೊಂದೆಡೆ ನಾಗಮಲೆಯಲ್ಲಿ ಮತ್ತೊಂದು ಚಿರತೆ ಭಾನುವಾರ ಬೆಳಗ್ಗೆ ಕಾಣಿಸಿಕೊಂಡಿದ್ದು ಚಿರತೆ ಸೆರೆಗಾಗಿ ಎರಡು ಬೋನ್ ಗಳನ್ನು ಇಡಲಾಗಿದೆ.

ನಾಗಮಲೆಗೆ ತೆರಳುವಾಗ ನಡೆದಿದ್ದ ದಾಳಿ:

ಮೇ 10ರಂದು ಬೆಂಗಳೂರಿನ ಕಾಮಾಕ್ಷಿಪಾಳ್ಯದ ಎಂಟು ಮಂದಿ ಮಹಿಳೆಯರು ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಿಂದ ನಾಗಮಲೆಗೆ ತೆರಳುವಾಗ ಮಾರ್ಗ ಮಧ್ಯದ ಇಂಡಿಗನತ್ತ ಗ್ರಾಮದ ಸಮೀಪ ಮಹಿಳೆಯರು ಹಾಗೂ ಬಾಲಕ ನಡೆದುಕೊಂಡು ಹೋಗುತ್ತಿದ್ದ ವೇಳೆ ಚಿರತೆಯು ಏಕಾಏಕಿ ಹರ್ಷಿತ್ (10) ನ ಮೇಲೆ ದಾಳಿ ನಡೆಸಿ ಅರಣ್ಯಕ್ಕೆ ಎಳೆದೊಯ್ದು ಕೊಂದಿತ್ತು. ಈ ವೇಳೆ ತಾಯಿ ಪವಿತ್ರ ಹಾಗೂ ಜೊತೆಗಿದ್ದ ಮಹಿಳೆಯರು ಕಿರುಚಾಡಿ ಬಾಲಕನ ಹುಡುಕಾಟ ನಡೆಸಿದಾಗ ಸ್ವಲ್ಪ ದೂರದಲ್ಲಿ ಬಾಲಕನ ಶವಪತ್ತೆಯಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾನುಬಾಳಿನಲ್ಲಿ ಎರಡು ದಿನಗಳ ಕಾರ್‌ ರೇಸ್ ಸ್ಪರ್ಧೆ
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಸೇವೆ ಮಾದರಿ ಕಾರ್ಯ