ಕನ್ನಡಪ್ರಭ ವಾರ್ತೆ ಯಲ್ಲಾಪುರ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಲಿಂಗನಕೊಪ್ಪದಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಮುಖ್ಯ ವಾಹಿನಿಗೆ ಬರಲು ಶಿಕ್ಷಕರ ಪಾತ್ರ ದೊಡ್ಡದಿದೆ. ಪಾಲಕರು ಮತ್ತು ಶಿಕ್ಷಕರ ಸಂಬಂಧ ಗಟ್ಟಿಯಾಗಿರಬೇಕು. ಶಾಲೆಯಲ್ಲಿ ಕಲಿಯುವ ವಿಷಯಗಳ ಜೊತೆಗೆ ಮಕ್ಕಳು ಸಮಾಜದಲ್ಲಿ ಬದುಕಲು ಕಲಿಯಬೇಕಾಗುವ ಜ್ಞಾನವನ್ನು ಗಳಿಸಿಕೊಳ್ಳಬೇಕು ಎಂದರು.ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ರೇಖಾ ನಾಯ್ಕ, ನಿವೃತ್ತ ಶಿಕ್ಷಕಿ ಹಾಗೂ ಮಾಜಿ ವಿದ್ಯಾರ್ಥಿ ಸುನಂದಾ ಪಾಟಣಕರ, ಸ್ಥಳದಾನಿ ನಾಗೇಶ ಪಾಟಣಕರ ಸ್ಥಳ, ಅಡುಗೆ ತಯಾರಕಿ ರತ್ನಾ ಪಾಟಣಕರ, ಹಳೆಯ ವಿದ್ಯಾರ್ಥಿ ಹಾಗೂ ಯೋಧ ಕಿರಣ ನಾಯ್ಕ, ಶಿಕ್ಷಣ ಮತ್ತು ಸಮಾಜ ಸೇವೆಗಾಗಿ ಸರೋಜಿನಿ ರಾಮಚಂದ್ರ ನಾಯ್ಕ ದಂಪತಿ ಮತ್ತು ಸಾಮಾಜಿಕ ಸೇವೆಗಾಗಿ ಆರ್.ಜಿ. ಭಟ್ಟ ಬೆಳಸೂರು ಅವರನ್ನು ಸನ್ಮಾನಿಸಲಾಯಿತು.
ಸುಧಾಕರ ನಾಯ್ಕ, ಸಂಜೀವಕುಮಾರ ಹೊಸ್ಕೇರಿ, ಪ್ರಶಾಂತ ಜಿ.ಎಂ., ಸುಭಾಷ ಗಡವಸ್ಕರ, ವಿನಾಯಕ ಪೂಜಾರಿ, ಗಣಪತಿ ಜೊಯಿಷಿ, ರವಿ ನಾಯ್ಕ, ಶಿವಾನಂದ ವೆರ್ಣೇಕರ, ಚಂದ್ರಹಾಸ ನಾಯ್ಕ, ಮಾರುತಿ ನಾಯ್ಕ, ಅಶೋಕ ಬೋರಕರ ಹಳ್ಳಿ ಉಪಸ್ಥಿತರಿದ್ದರು.ಮನ್ವಿತಾ ಭಟ್ಟ ಪ್ರಾರ್ಥಿಸಿದರು. ಶಾಲಾ ವಿದ್ಯಾರ್ಥಿಗಳು ಸ್ವಾಗತ ಗೀತೆ ಹಾಡಿದರು. ಮುಖ್ಯಾಧ್ಯಾಪಕ ವಿನಾಯಕ ಹೆಗಡೆ ಮತ್ತು ಎಸ್‌ಡಿಎಂಸಿ ಅಧ್ಯಕ್ಷ ಮಹಾಬಲೇಶ್ವರ ಗುಮ್ಮಾನಿ ಸ್ವಾಗತಿಸಿದರು. ಶಿಕ್ಷಕಿ ಸ್ನೇಹಾ ಭಾಗ್ವತ ನಿರ್ವಹಿಸಿದರು. ಆರ್.ಎಸ್. ಭಟ್ಟ, ಹಸ್ತಪ್ರತಿ ಬಿಡುಗಡೆ ಮಾಡಿದರು. ಸರೋಜಿನಿ ನಾಯ್ಕ ವರದಿ ವಾಚಿಸಿದರು. ಮಂಜುನಾಥ ಭಟ್ಟ ವಂದಿಸಿದರು. ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.