ಯಲಬುರ್ಗಾ: ರಾಮಾಯಣದಲ್ಲಿ ಆದರ್ಶ ವ್ಯಕ್ತಿಯ ಚಿತ್ರಣ, ಕೌಟುಂಬಿಕ, ಮಾನವೀಯತೆ ಹಾಗೂ ಸಾಮಾಜಿಕ ಮೌಲ್ಯ ಕಾಣಬಹುದಾಗಿದೆ ಎಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ವಿಭಾಗೀಯ ಸಂಘಟನಾ ಸಂಚಾಲಕ ಪುಟ್ಟರಾಜ ಪೂಜಾರ ಹೇಳಿದರು.
ಮನುಕುಲದ ಏಳಿಗೆಗಾಗಿ ವಾಲ್ಮೀಕಿ ನೀಡಿದ ಸಂದೇಶ ದಾರಿದೀಪವಾಗಿದೆ. ರಾಮಾಯಣದಲ್ಲಿ ಪ್ರತಿಯೊಬ್ಬರೂ ಜೀವನದಲ್ಲಿ ಎದುರಿಸುವ ಸಂಗತಿ ಅಡಕವಾಗಿದ್ದು, ನಿತ್ಯ ಸತ್ಯವಾಗಿರುವ ಜೀವನ ಮೌಲ್ಯ ಹಾಗೂ ಸಂದೇಶ ಮಹಾಕಾವ್ಯದ ಮೂಲಕ ಸಮಾಜಕ್ಕೆ ನೀಡಿದ್ದಾರೆ. ಆದಿಕವಿ ಮಹರ್ಷಿ ವಾಲ್ಮೀಕಿ ವಿಚಾರ ಪಾಲಿಸೋಣ ಎಂದರು.
ಮುಖಂಡ ಶಿವಪ್ಪ ದ್ಯಾಂಪುರು ಮಾತನಾಡಿದರು. ಮಹರ್ಷಿ ವಾಲ್ಮೀಕಿ ಕರ್ತೃ ಗದ್ದುಗೆಗೆ ಪೂಜೆ ಸಲ್ಲಿಸಲಾಯಿತು. ವಾಲ್ಮೀಕಿ ಭಾವಚಿತ್ರ ಮೆರವಣಿಗೆ ನಡೆಸಲಾಯಿತು.ಈ ಸಂದರ್ಭದಲ್ಲಿ ನೂರಂದಪ್ಪ ದಾಸಪ್ಪನವರ, ಹನುಮಂತಪ್ಪ ಚಾಪಿ, ಶಶಿಧರ ಗಡಾದ, ಶರಣಪ್ಪ ದಿವಾಣದಾರ, ಮೂರ್ತೆಪ್ಪ ಮೂಲಿಮನಿ, ದುರ್ಗಮ್ಮ ಗಟ್ಟೆಪ್ಪನವರ, ಚನ್ನಮ್ಮ ತಳಬಾಳ, ವಾಸಪ್ಪ ಗಾಣಧಾಳ, ಮಾರುತೆಪ್ಪ ಮಾಲಿಪಾಟೀಲ್, ಶಿವಪ್ಪ ಎಮ್ಮೆರ, ಹನುಮಂತಪ್ಪ ಕೊಪ್ಪಳ, ಶರಣಪ್ಪ ಪೂಜಾರ ಸೇರಿದಂತೆ ಇತರರು ಇದ್ದರು.