ನರಗುಂದದಲ್ಲಿ ಶೀಘ್ರ ನೂತನ ಪುರಸಭೆ, ಕಾಯಿಪಲ್ಲೆ ಮಾರುಕಟ್ಟೆ ಉದ್ಘಾಟನೆ

KannadaprabhaNewsNetwork |  
Published : Oct 10, 2025, 01:01 AM IST
(9ಎನ್.ಆರ್.ಡಿ1 ನೂತನ ಪುರಸಭೆಯನ್ನು ಶಾಸಕ ಸಿ.ಸಿ.ಪಾಟೀಲರು ವಿಕ್ಷೇಣಿ ಮಾಡುತ್ತಿದ್ದಾರೆ.)  | Kannada Prabha

ಸಾರಾಂಶ

ಪಟ್ಟಣದಲ್ಲಿ ಈಗಾಗಲೇ ₹3 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಕಾರ್ಮಿಕರ ಭವನ ಅ. 30ರೊಳಗೆ ಉದ್ಘಾಟನೆಯಾಗಲಿದೆ. ಕಾರ್ಯಕ್ರಮಕ್ಕೆ ಕಾರ್ಮಿಕ ಸಚಿವ ಸಂತೋಷ ಲಾಡ್ ಆಗಮಿಸಲಿದ್ದಾರೆ.

ನರಗುಂದ: ಬಹುದಿನಗಳಿಂದ ನಿರ್ಮಾಣ ಹಂತದಲ್ಲಿರುವ ನೂತನ ಪುರಸಭೆ ಕಟ್ಟಡ ಹಾಗೂ ಕಾಯಿಪಲ್ಲೆ ಮಾರುಕಟ್ಟೆ ಕಟ್ಟಡಗಳ ಕಾಮಗಾರಿಯನ್ನು ಗುರುವಾರ ಶಾಸಕ ಸಿ.ಸಿ. ಪಾಟೀಲ ಪರಿಶೀಲಿಸಿದರು.

ಬಳಿಕ ಮಾತನಾಡಿದ ಅವರು, ₹4.38 ಕೋಟಿ ವೆಚ್ಚದ ಪುರಸಭೆ ನೂತನ ಕಟ್ಟಡ ಹಾಗೂ ₹2.10 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕಾಯಿಪಲ್ಲೆ ಮಾರುಕಟ್ಟೆ, ಕಾರ್ಮಿಕ ಭವನ ಕಟ್ಟಡಗಳನ್ನು ಶೀಘ್ರದಲ್ಲೇ ಉದ್ಘಾಟನೆ ಮಾಡಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರನ್ನು ಉದ್ಘಾಟನೆಗೆ ಆಗಮಿಸುವಂತೆ ಮನವಿ‌ ಮಾಡಲಾಗಿದೆ ಎಂದರು.

ಪಟ್ಟಣದಲ್ಲಿ ಈಗಾಗಲೇ ₹3 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಕಾರ್ಮಿಕರ ಭವನ ಅ. 30ರೊಳಗೆ ಉದ್ಘಾಟನೆಯಾಗಲಿದೆ. ಕಾರ್ಯಕ್ರಮಕ್ಕೆ ಕಾರ್ಮಿಕ ಸಚಿವ ಸಂತೋಷ ಲಾಡ್ ಆಗಮಿಸಲಿದ್ದಾರೆ. ಹೀಗಾಗಿ ಈ ಎಲ್ಲ ಕಟ್ಟಡಗಳ ಕಾಮಗಾರಿಯನ್ನು ಅಚ್ಚುಕಟ್ಟಾಗಿ ಕೂಡಲೇ ನಿರ್ಮಿಸಬೇಕೆಂದು ಸಂಬಂಧಿಸಿದ ಗುತ್ತಿಗೆದಾರರಿಗೆ ಮತ್ತು ಇಲಾಖಾಧಿಕಾರಿಗಳಿಗೆ ಸೂಚನೆ ನೀಡಿದರು.ಪುರಾತನ ವೆಂಕಟೇಶ್ವರ ದೇವಸ್ಥಾನದ ಸಮೀಪದಲ್ಲಿರುವ ಯಲ್ಲಮ್ಮದೇವಿ ದೇವಸ್ಥಾನದ ಪಕ್ಕದ ತಡೆಗೋಡೆ ಮಳೆಗೆ ಕುಸಿದಿದೆ. ತಡೆಗೋಡೆಯನ್ನು ಕೂಡಲೇ ನಿರ್ಮಿಸಲಾಗುವುದು ಎಂದರು.ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ನೀಲವ್ವ ವಡ್ಡಿಗೇರಿ, ಉಪಾಧ್ಯಕ್ಷ ಚಂದ್ರಗೌಡ ಪಾಟೀಲ, ಮಾಜಿ ಅಧ್ಯಕ್ಷೆ ಭಾವನಾ ಪಾಟೀಲ, ರಾಚನಗೌಡ ಪಾಟೀಲ, ಸಿದ್ದಪ್ಪ ಯಲಿಗಾರ, ಹಸನ ತಹಶೀಲ್ದಾರ, ಬಸಪ್ಪ ಅಮರಗೋಳ, ಪ್ರಕಾಶ ಪಟ್ಟಣಶೆಟ್ಟಿ, ಉಮೇಶ ಯಳ್ಳೂರ, ಹನುಮಂತ ಹವಾಲ್ದಾರ, ನಾಗರಾಜ ನೆಗಳೂರ, ಸಂತೋಷ ಹಂಚಿನಾಳ, ಸಿದ್ದೇಶ ಹೂಗಾರ, ಮುಖ್ಯಾಧಿಕಾರಿ ಸಂಗಮೇಶ ಬ್ಯಾಳಿ, ಕಿರಣ ಮುಧೋಳೆ, ವಿಠ್ಠಲ ಹವಾಲ್ದಾರ ಸೇರಿದಂತೆ ಮುಂತಾದವರು ಇದ್ದರು. ಮತದಾರರ ಪಟ್ಟಿ ನೋಂದಣಿಗೆ ಅವಕಾಶ

ಗದಗ: ಚುನಾವಣಾ ಆಯೋಗದ ನಿರ್ದೇಶನದನ್ವಯ ವಿಧಾನಪರಿಷತ್ತಿನ ಪಶ್ಚಿಮ ಪದವೀಧರರ ಕ್ಷೇತ್ರಕ್ಕೆ ಅರ್ಹತಾ ದಿನಾಂಕವಾಗಿ ನ. 1 ನಿಗದಿಪಡಿಸಿ ಮತದಾರರ ಪಟ್ಟಿಯ ಡಿ- ನೋವೋ ತಯಾರಿಕೆ ವೇಳಾಪಟ್ಟಿ ಹೊರಡಿಸಿ ಅದರಂತೆ ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರದ ಇಆರ್‌ಒ, ಎಇಆರ್‌ಒ ಮತ್ತು ಡೆಸಿಗ್ನೇಟೆಡ್ ಆಫೀಸರ್ ವಿವರಗಳನ್ನು ಪ್ರಚುರಪಡಿಸಲಾಗಿದೆ.ಪಶ್ಚಿಮ ಪದವೀಧರರ ಕ್ಷೇತ್ರ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಲು ಅರ್ಜಿದಾರರು ಭಾರತ ಪ್ರಜೆಯಾಗಿರುವ ಆಯಾ ಮತ ಕ್ಷೇತ್ರದೊಳಗಡೆ ಸಾಮಾನ್ಯವಾಗಿ ವಾಸಿಸುತ್ತಿರುವ ಹಾಗೂ 2025ರ ನ. 1ರ ಮುಂಚೆ ಕನಿಷ್ಠ ಮೂರು ವರ್ಷಗಳಷ್ಟು ಮೊದಲು ಭಾರತದಲ್ಲಿರುವ ಯಾವುದಾದರೊಂದು ವಿಶ್ವವಿದ್ಯಾಲಯದ ಪದವೀಧರರಾಗಿರುವ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರುವ ಪ್ರತಿ ವ್ಯಕ್ತಿಯೂ ಮತದಾರರ ಪಟ್ಟಿಯಲ್ಲಿ ತನ್ನ ಹೆಸರನ್ನು ಸೇರಿಸಲು ಅರ್ಹರಾಗಿರುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಉಪವಿಭಾಗಾಧಿಕಾರಿಗಳ ಕಾರ್ಯಾಲಯದ ಸಹಾಯವಾಣಿ 08372- 238506 ಕರೆ ಮಾಡಬಹುದು ಎಂದು ಗದಗ ಉಪವಿಭಾಗಾದಿಕಾರಿಗಳ ಕಾರ್ಯಾಲಯದ ಪ್ರಕಟಣೆಯಲ್ಲಿ ತಿಳಿಸಿದೆ.

PREV

Recommended Stories

ಸಂಪುಟ ಪುನರ್‌ ರಚನೆ ಸುಳಿವು : ದಲಿತ ಸಚಿವರ ಸಭೆ!
ಶೂದ್ರ ಶ್ರೀನಿವಾಸ್‌ ಸೇರಿ ಐವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ