ನಮ್ಮ ಸಂಸ್ಕೃತಿ, ಧರ್ಮ, ಆಚರಣೆ ಬಗ್ಗೆ ಯತೀಂದ್ರ ಅವರ ತಾಯಿಯ ಬಳಿ ಕೇಳಲಿ

KannadaprabhaNewsNetwork |  
Published : Aug 08, 2026, 01:15 AM IST
5 | Kannada Prabha

ಸಾರಾಂಶ

ಇಡೀ ದೇಶದಲ್ಲೇ ಅತಿ ಹೆಚ್ಚು ಮತಗಳು ಡಿಲಿಟ್ ಆಗಿರುವುದು ಕರ್ನಾಟಕದಲ್ಲಿ ಮಾತ್ರ. ಅದರಲ್ಲೂ ನನ್ನ ಕ್ಷೇತ್ರದಲ್ಲಿ ಬಹಳಷ್ಟು ಮತಗಳು ಡಿಲಿಟ್ ಆಗಿವೆ. ಜನ ತಮ್ಮ ಸ್ವಂತ ಊರುಗಳಲ್ಲಿ ಮತ ಉಳಿಸಿಕೊಳ್ಳುತ್ತಿದ್ದಾರೆ. ಕನ್ನಡಿಗರು ಎಲ್ಲಿದ್ದರೂ ಕನ್ನಡಿಗರೇ. ಎಲ್ಲಾದರೂ ಇರಲಿ ಮತದಾರರಾಗಿರಲಿ.

ಕನ್ನಡಪ್ರಭ ವಾರ್ತೆ ಮೈಸೂರು

ನಾವು ಯಾರು, ನಮ್ಮ ಸಂಸ್ಕೃತಿ ಯಾವುದು, ನಮ್ಮ ಧರ್ಮ ಯಾವುದು. ನಾವು ಯಾವುದನ್ನು ಆಚರಣೆ ಮಾಡುತ್ತೇವೆ ಎಂಬುದನ್ನು ಯತೀಂದ್ರ ಅವರ ತಾಯಿಯ ಬಳಿ ಕೇಳಲಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿರುಗೇಟು ನೀಡಿದರು.

ಭಾರತ ಹಿಂದು ರಾಷ್ಟ್ರ ಆಗಬಾರದು ಎಂಬ ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಗೆ ಚಾಮುಂಡಿಬೆಟ್ಟದಲ್ಲಿ ಶುಕ್ರವಾರ ಪ್ರತಿಕ್ರಿಯಿಸಿದ ಅವರು, ಯತೀಂದ್ರ ಹೋಗಿ ತನ್ನ ತಾಯಿಗೆ ಈ ಬಗ್ಗೆ ಪ್ರಶ್ನೆ ಕೇಳಲಿ. ಯತೀಂದ್ರರನ್ನು ಹೆತ್ತು ಹೊತ್ತ ಸಿದ್ದರಾಮಯ್ಯನವರ ಪತ್ನಿ ಅವರೇ ಮಗನಿಗೆ ಸರಿಯಾದ ಉತ್ತರ ಕೊಡುತ್ತಾರೆ ಎಂದು ಹೇಳಿದರು.

ಈ ಸಂಸ್ಕೃತಿ ಈ ಧರ್ಮ ಉಳಿಸುವವರಿಗೆ ತಾಯಿ ಚಾಮುಂಡಿ ಶಕ್ತಿ ಕೊಡಲಿ. ಮಹಾರಾಜರು ಈ ನೆಲದ ಸಂಸ್ಕೃತಿ ಧರ್ಮವನ್ನು ಉಳಿಸಿದರು. ಇವತ್ತು ಸರ್ಕಾರ ನಡೆಸುವವರು ಕೂಡ ಅದೇ ಸ್ಥಾನದಲ್ಲಿ ಇರುತ್ತಾರೆ. ಸಂಸ್ಕೃತಿ ಉಳಿಸುವವರಿಗೆ ತಾಯಿ ಆಶೀರ್ವಾದ ಇರಲಿ ಎಂದರು.

ಇಡೀ ದೇಶದಲ್ಲೇ ಅತಿ ಹೆಚ್ಚು ಮತಗಳು ಡಿಲಿಟ್ ಆಗಿರುವುದು ಕರ್ನಾಟಕದಲ್ಲಿ ಮಾತ್ರ. ಅದರಲ್ಲೂ ನನ್ನ ಕ್ಷೇತ್ರದಲ್ಲಿ ಬಹಳಷ್ಟು ಮತಗಳು ಡಿಲಿಟ್ ಆಗಿವೆ. ಜನ ತಮ್ಮ ಸ್ವಂತ ಊರುಗಳಲ್ಲಿ ಮತ ಉಳಿಸಿಕೊಳ್ಳುತ್ತಿದ್ದಾರೆ. ಕನ್ನಡಿಗರು ಎಲ್ಲಿದ್ದರೂ ಕನ್ನಡಿಗರೇ. ಎಲ್ಲಾದರೂ ಇರಲಿ ಮತದಾರರಾಗಿರಲಿ ಎಂದರು.

ಚಾಮುಂಡೇಶ್ವರಿ ದರ್ಶನ

ಕಡೆಯ ಆಷಾಢ ಶುಕ್ರವಾರ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿ ದರ್ಶನ ಪಡೆದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು, ಚಾಮುಂಡೇಶ್ವರಿ ದೇವಸ್ಥಾನದ ಗರ್ಭ ಗುಡಿಯಲ್ಲಿ ಕುಳಿತು ದೇವಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಈ ವೇಳೆ ಬಿಜೆಪಿ ನಗರಾಧ್ಯಕ್ಷರಾದ ಮಾಜಿ ಶಾಸಕ ಎಲ್. ನಾಗೇಂದ್ರ ಹಾಗೂ ಸ್ಥಳೀಯ ನಾಯಕರು ಇದ್ದರು.ಶ್ರೀಚಾಮುಂಡೇಶ್ವರಿ ಭಜನಾಮಂಡಳಿಯ 25ನೇ ಬೆಳ್ಳಿ ಹಬ್ಬಕನ್ನಡಪ್ರಭ ವಾರ್ತೆ ನಂಜನಗೂಡುಪಟ್ಟಣದ ಶ್ರೀ ಚಾಮುಂಡೇಶ್ವರಿ ಭಜನಾಮಂಡಳಿಯ 25ನೇ ಬೆಳ್ಳಿಹಬ್ಬ ಸಮಾರಂಭವು ಗುರುವಾರ ನಡೆಯಿತು.

ಭಜನಾ ಮಂಡಳಿಯ ಎಲ್ಲಾ ಸದಸ್ಯರು ಸೇರಿ ಈ ಸಮಾರಂಭವನ್ನು ನಂಜನಗೂಡು ರೋಟರಿ ಶಾಲೆ ಹತ್ತಿರದ ರಚಿತಾ ಅವರ ನಿವಾಸದಲ್ಲಿ ನೆರವೇರಿತು.ಈ ಭಜನಾ ಮಂಡಳಿಯ ಗುರುಗಳಾದ ವತ್ಸಲಾ ಬಸವರಾಜ್, ಪತಿ ಬಸವರಾಜ್, ನಂಜನಗೂಡು ಶಂಕರಮಠದ ವ್ಯವಸ್ಥಾಪಕ ರಾಘವೇಂದ ಶರ್ಮಾ ಅವರ ಸಮ್ಮುಖದಲ್ಲಿ ನಡೆಯಿತು.

2001ರಲ್ಲಿ ಪ್ರಾರಂಭವಾಗಿ ಈವರೆಗೂ ನಡೆದು ಕೊಂಡು ಬಂದು, ಈ ವರ್ಷಕ್ಕೆ 25 ವರ್ಷವಾಗಿದೆ. ಇದೇ ರೀತಿ ಇನ್ನು ಮುಂದುವರಿಯಲಿ ಎಂದು ಆಶಿಸಿದರು. ಶಂಕರ ತತ್ತ್ವ ಅಭಿಯಾನದ ಗೋಪಿನಾಥ್ ಶುಭ ಕೋರಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿಲ್ಲೆಯ ವಿವಿಧೆಡೆ ಬರದ ಭೀಕರ ಪರಿಸ್ಥಿತಿ ದರ್ಶನ
ರಾಜ್ಯದ ಆರ್ಥಿಕ ಅಭಿವೃದ್ಧಿಗೆ ಸಂಘಟಿತ ಕೆಲಸ