ಲಕ್ಷ್ಮೇಶ್ವರ: ವಿಶಾಲ ಭಾರತದ ಏಕತೆಯ ಮೂಲವೇ ದೇಶಭಕ್ತಿ. ಅಂತಹ ದೇಶಭಕ್ತಿಯನ್ನು ಬಿತ್ತುವ ಕಾರ್ಯ ಶಾಲೆಗಳಲ್ಲಿಯೇ ಆಗಬೇಕು ಎಂದು ತಹಸೀಲ್ದಾರ್ ವಾಸುದೇವ ಸ್ವಾಮಿ ಹೇಳಿದರು.
ಲಕ್ಷ್ಮೇಶ್ವರ ಪಟ್ಟಣದ ಪ್ರೌಢಶಾಲಾ ಮಟ್ಟದ ವಿದ್ಯಾರ್ಥಿಗಳಿಗೆ ದೇಶಭಕ್ತಿ ಗೀತೆ ಸ್ಪರ್ಧೆಯನ್ನು ತಹಸೀಲ್ದಾರ್ ದೇಶಭಕ್ತಿ ಗೀತೆ ಹಾಡುವ ಮೂಲಕ ಉದ್ಘಾಟಿಸಿದರು.
ಈ ವೇಳೆ ಲಕ್ಷ್ಮೇಶ್ವರ ತಾಪಂನ ಇಓ ಕೃಷ್ಣಪ್ಪ ಧರ್ಮರ ದೇಶಭಕ್ತಿಯೊಂದನ್ನು ಹಾಡಿ ನಂತರ ಮಾತನಾಡಿ, ಸಂಗೀತದಿಂದ ಮನಸ್ಸುಗಳನ್ನು ಕಟ್ಟಬಹುದು. ಅದರಲ್ಲೂ ದೇಶಭಕ್ತಿಯ ಸಂಗೀತ ಪ್ರಸ್ತುತಪಡಿಸುವುದರ ಮೂಲಕ ದೇಶ ಒಗ್ಗೂಡಿಸಬಹುದು ಎಂದರು.ಸಭೆಯ ಅಧ್ಯಕ್ಷತೆ ವಹಿಸಿದ ಶಾಲೆಯ ಮುಖ್ಯೋಪಾಧ್ಯಾಯ ಬಿ.ಎಂ. ಕುಂಬಾರ ಮಾತನಾಡಿ, ಶಾಲೆಗಳಲ್ಲಿ ದೇಶಭಕ್ತಿ ಬಿತ್ತುವ ಕಾರ್ಯ ದೇಶದ ಎಲ್ಲ ಸಮಸ್ಯೆಗಳಿಗೆ ಪರಿಹಾರ ಆಗಬಲ್ಲದು ಎಂದು ಹೇಳಿದರು.
ಈ ವೇಳೆ ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷ ಎಂ.ಬಿ. ಹೊಸಮನಿ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಜಿ.ಡಿ. ಕಲ್ಲಣ್ಣವರ, ನಿರ್ಣಾಯಕರಾಗಿದ್ದ ಸಂಗೀತ ವಿದ್ವಾಂಸ ಹಾಗೂ ಶಿಕ್ಷಕ ಡಾ. ಅರ್ಜುನ ವಠಾರ, ಸಿ.ಆರ್.ಪಿ ಚಂದ್ರಶೇಖರ ವಡಕಣ್ಣವರ, ಜ್ಯೋತಿ ಗಾಯಕವಾಡ, ವಿಕಲಚೇತನ ನೌಕರರ ಸಂಘದ ಜಿಲ್ಲಾಧ್ಯಕ್ಷ ಆರ್.ಎಂ. ಶಿರಹಟ್ಟಿ ಇದ್ದರು.
ಲಕ್ಷ್ಮೇಶ್ವರ ನಗರ ವ್ಯಾಪ್ತಿಯ ೧೬ ಪ್ರೌಢಶಾಲೆಗಳ ಸುಮಾರು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ದೇಶಭಕ್ತಿ ಉದ್ದೀಪನಗೊಳಿಸುವ ಗೀತೆಗಳನ್ನು ಪ್ರಸ್ತುತಪಡಿಸಿದರು. ವಿವಿಧ ಶಾಲೆಗಳ ಮುಖ್ಯೋಪಾಧ್ಯಾಯರು, ಸಹ ಶಿಕ್ಷಕರು ಪಾಲ್ಗೊಂಡಿದ್ದರು.
ಫಲಿತಾಂಶ: ಪ್ರಥಮ-ಪೂರ್ಣಿಮಾ ಹಾಗೂ ಸಂಗಡಿಗರು-ಸ್ಕೂಲ್ ಚಂದನ
ತೃತೀಯ-(ಎರಡು ಶಾಲೆಗಳು) ಪಂಚಮಿ ಅಂಬಿಗೇರ ಹಾಗೂ ಸಂಗಡಿಗರು, ಯುನಿಕ್ ಸ್ಕೂಲ್