ಶಿರಸಿ: ಉತ್ತರ ಕನ್ನಡ ಕೊಡುಗೈ ದಾನಿ ಜಿಲ್ಲೆ. ನಮ್ಮತನ, ನಮ್ಮ ಪರಿಸರ ಉಳಿಸಬೇಕು. ಸಾಹಿತ್ಯ ಜಾಗೃತಿಗೊಳಿಸುವ ಕಾರ್ಯ ಮಾಡಬೇಕಿದೆ. ನಿನ್ನೆ ಬಿಟ್ಟು ಇಂದು ಹಾಗೂ ನಾಳೆ ಬಿಟ್ಟು ಸಾಹಿತ್ಯ ಇಲ್ಲ ಎಂದು ಹಿರಿಯ ಸಾಹಿತಿ ಡಾ. ಗಜಾನನ ಶರ್ಮಾ ತಿಳಿಸಿದರು.ಬುಧವಾರ ನಗರದ ನೆಮ್ಮದಿ ರಂಗಧಾಮದಲ್ಲಿ ನಡೆದ ೨೪ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ನುಡಿಗಳನ್ನಾಡಿದರು.ಉತ್ತರ ಕನ್ನಡಕ್ಕೆ ಏನೆ ಹೇಳಿದರೂ, ಕೇಳಿದರೂ ಕೊಡುವ ಶಕ್ತಿ ಇದೆ. ಭಾರತದಲ್ಲಿ ಪರಿಸರ ಹೋರಾಟ ಗೆದ್ದಿದ್ದು ಈ ಜಿಲ್ಲೆಯಲ್ಲಿ. ಬೇಡ್ತಿ, ಅಘನಾಶಿನಿಗೆ ಅಣೆಕಟ್ಟು ಹಾಕಿದ್ದರೆ ಆ ನದಿ ಜೀವಂತವಾಗಿಡಲು ಸಾಧ್ಯವಿರಲಿಲ್ಲ. ಶರಾವತಿ ತಪ್ಪಲಿನ ಆತಂಕ ಇಂದಿಗೂ ಇದೆ. ಇಂದು ಸೌರಶಕ್ತಿಯಿಂದ ವಿದ್ಯುತ್ ಪಡೆಯಬಹುದು ಎಂದರು.ಜಿಲ್ಲೆಯ ಒಡಲಿನಲ್ಲಿ ಜನಿಸಿದವರಿಗೆ ಮಾತ್ರ ಸಮೃದ್ಧ ಸಾಹಿತ್ಯ ನೆಲೆ ಕೊಡಲಿಲ್ಲ. ಹೊರಗಿನಿಂದದವರಿಗೂ ಸಾಹಿತ್ಯದ ನೆಲೆ ನೀಡಿದೆ ಎಂದ ಅವರು, ರವೀಂದ್ರನಾಥ ಅವರು ಕಾರವಾರದ ನೆಲದಲ್ಲಿ ಕಾವ್ಯ ಶಕ್ತಿ ಅರಳುತ್ತದೆ ಎನ್ನುತ್ತಾರೆ ಎಂದರು.ಶಾಸಕ ಭೀಮಣ್ಣ ನಾಯ್ಕ, ಸರ್ವಾಧ್ಯಕ್ಷ ಆರ್.ಡಿ. ಹೆಗಡೆ ಆಲ್ಮನೆ ಮಾತನಾಡಿದರು. ತಹಸೀಲ್ದಾರ್ ಶ್ರೀಧರ ಮಂದಲಮನಿ ಅಭಿನಂದನಾ ನುಡಿಗಳನ್ನಾಡಿದರು. ಈ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೇಶವ ಹೆಗಡೆ ಕೊಳಗಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಅಜ್ಜಯ್ಯ, ಹಿರಿಯ ಸಾಹಿತಿ ಕಲ್ಲಚ್ಚು ಮಹೇಶ್ ನಾಯಕ್ ಮಂಗಳೂರು, ಚಿಂತಕ ಎಸ್.ಕೆ. ಭಾಗ್ವತ್, ಸ್ಕೋಡ್ವೇಸ್ ಮಹಿಳಾ ಸಹಕಾರಿ ಸಂಘ ದ ಸರಸ್ವತಿ ಎನ್. ರವಿ, ಸಾಹಿತಿ ಎಸ್.ಎಸ್. ಭಟ್, ಟಿಎಂಎಸ್ ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ, ನಗರಯೋಜನಾ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ಜನಪದ ಪರಿಷತ್ ಜಿಲ್ಲಾಧ್ಯಕ್ಷ ಡಾ. ವೆಂಕಟೇಶ್ ನಾಯ್ಕ, ಕಸಾಪ ಶಿರಸಿ ಘಟಕದ ಅಧ್ಯಕ್ಷ ಜಿ. ಸುಬ್ರಾಯ ಭಟ್ ಬಕ್ಕಳ, ಕಸಾಪ ಜಿಲ್ಲಾ ಘಟಕದ ಕಾರ್ಯದರ್ಶಿ ಜಾರ್ಜ್ ಫರ್ನಾಂಡಿಸ್, ಅಬ್ಬಾಸ್ ತೋನ್ಸೆ ಸೇರಿ ಹಲವರು ಇದ್ದರು.ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ...
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಡಾ. ಕೆ.ಬಿ. ಪವಾರ್, ವಿ.ಜಿ. ಗಾಯತ್ರಿ, ವಸಂತ ಭಟ್, ಗಣಪತಿ ನಾಯ್ಕ, ಪ್ರಕಾಶ ಸಿದ್ದಿ, ಡಾ. ಚಂದ್ರಶೇಖರ ಓಶಿಮಠ, ಎನ್.ಜಿ. ಭಟ್, ಎಂ.ಆರ್. ನಾಯ್ಕ, ಡಿ.ಎಸ್. ನಾಯ್ಕ, ಜಗದೀಶ ನಾ, ಸರಸ್ವತಿ ಎನ್ ರವಿ, ಜಯಾ ಗುರುನಾಥ್ ಭಟ್, ಡಾ. ಶ್ರೀನಿವಾಸ ನಾಯ್ಕ, ದೇವಿದಾಸ ಸುವರ್ಣ, ನಾಗೇಶ ಮಡಿವಾಳ, ಮಹಮ್ಮದ್ ರಝಾ ಮಾನ್ವಿ, ಮಹಾವೀರ ಬಾಲಚಂದ್ರ ನೊಗ್ಲೇಕರ್, ಜನಿಫರ್ ಮೆಕ್ಸಿಡಿಲಿ, ಸುಮಿತ್ರಾ ಶೇಟ್, ಆರ್.ಎನ್. ಭಟ್ ದುಂಡಿ, ಗಣಪತಿ ವೇಳಿಪ, ಸುಭಾಷ್ ಹನುಮಂತ ಕಾನಡೆ, ಕಿಶೋರ್ ನಾಯ್ಕ, ನಾಗರಾಜ ಹರಿಕಂತ್ರ ಅವರನ್ನು ಸನ್ಮಾನಿಸಲಾಯಿತು. ಸಮ್ಮೇಳನದ ನಿರ್ಣಯಗಳು...೧. ಜಿಲ್ಲೆಯ ಸಾಮಾಜಿಕ, ಸಾಂಸ್ಕೃತಿಕ ಅಭಿವೃದ್ಧಿಗಾಗಿ ಹೊಸ ನೀತಿ ರೂಪಿಸುವುದು
೨. ಅರಣ್ಯ ಭೂಮಿ ಹಕ್ಕಿನ ಸಮಸ್ಯೆ ಪರಿಹರಿಸಲು ಕಾನೂನಾತ್ಮಕ ಕ್ರಮ ಕೈಗೊಳ್ಳುವುದು
೩. ಜಿಲ್ಲೆಯಲ್ಲಿ ಬುಡಕಟ್ಟು ಅಧ್ಯಯನ ಕೇಂದ್ರ ಸ್ಥಾಪಿಸುವುದು೪. ಜಿಲ್ಲೆಯ ಸ್ಮಾರಕ ಹಾಗೂ ಶಾಸನಗಳರಕ್ಷಿಸುವುದು
೫. ತಾಳಗುಪ್ಪದಿಂದ ಹುಬ್ಬಳ್ಳಿ ರೈಲ್ವೆ ಸಂಚಾರ ಶೀಘ್ರ ಪ್ರಾರಂಭಿಸಲಿ
೬. ಅಡಕೆ ಬೆಳೆಯ ಮಾರಕ ರೋಗ ತಡೆಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವುದು೭. ಜಿಲ್ಲೆಯಲ್ಲಿ ಬಹುಶಿಸ್ತೀಯ ವಿಶ್ವವಿದ್ಯಾಲಯ ಸ್ಥಾಪಿಸುವುದು
೮. ಬಹುವ್ಯವಸ್ಥೆಯುಳ್ಳ ಅಧುನಿಕ ಆಸ್ಪತ್ರೆ ಸ್ಥಾಪನೆಗೆ ಸರ್ಕಾರ ಮುಂದಾಗಲಿ
೯. ಬನವಾಸಿ ಅಭಿವೃದ್ಧಿ ಪ್ರಾಧಿಕಾರ ಸಕ್ರಿಯಗೊಳಿಸುವುದು
೧೦. ಪರಿಸರ ಪೂರಕ ಪ್ರವಾಸೋದ್ಯಮಕ್ಕೆ ಯೋಜನೆ ರೂಪಿಸುವುದು