ಗದಗ: ಸರ್ಕಾರ ಕೈಗೊಳ್ಳುವ ಅಭಿವೃದ್ಧಿ ಹಾಗೂ ಸಮಾಜಮುಖಿ ಕಾರ್ಯಗಳಿಗೆ ಸಾಮಾಜಿಕ ಸಂಘಟನೆಗಳು ಕೈ ಜೋಡಿಸಿದಲ್ಲಿ ಆ ಕಾರ್ಯಗಳು ಯಶಸ್ವಿಗೊಳ್ಳುವವು ಎಂಬುದಕ್ಕೆ ಗದುಗಿನ ಇಂಡೋರ್ ಸ್ಟೇಡಿಯಂ ಬಡಾವಣೆ ನಾಗರಿಕರ ವಿವಿಧೋದ್ದೇಶಗಳ ಸಂಘವೇ ಉದಾಹರಣೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಹೇಳಿದರು.
ವಿಧಾನಪರಿಷತ್ ಸದಸ್ಯ ಪ್ರೊ. ಎಸ್.ವಿ. ಸಂಕನೂರ ಮಾತನಾಡಿ, ಈ ಬಡಾವಣೆಯಲ್ಲಿ ವಿದ್ಯಾವಂತರು, ಸರ್ಕಾರಿ ನೌಕರರು, ಪ್ರಜ್ಞಾವಂತರು ಹೆಚ್ಚಾಗಿ ವಾಸವಾಗಿದ್ದು, ಅವರೆಲ್ಲರೂ ಸಂಘಟಿತರಾಗಿ ಸಮಾಜಮುಖಿ, ಜನಮುಖಿ ಕಾರ್ಯ ಕೈಗೊಂಡಿರುವುದು ಅಭಿನಂದನೀಯ. ಈ ಎಲ್ಲ ಪದಾಧಿಕಾರಿಗಳು ಸಂಘಟನೆಯನ್ನು ಬಲಪಡಿಸುವ ಮೂಲಕ ಜನಪರ ಕಾರ್ಯಗಳಿಗೆ ಬೆಂಬಲಿಸಬೇಕು. ಇಂಡೋರ್ ಸ್ಟೇಡಿಯಂ ಬಡಾವಣೆಯ ಉದ್ಯಾನದ ಕಾಮಗಾರಿಗೆ ನನ್ನ ಶಾಸಕರ ನಿಧಿಯಿಂದ ಆರ್ಥಿಕ ಸಹಾಯವನ್ನು ಮಾಡುವುದಾಗಿ ಸಂಕನೂರ ಅವರು ಭರವಸೆ ನೀಡಿದರು.
ವಾರ್ಡ್‌ನ ನಗರಸಭೆ ಸದಸ್ಯೆ ವಿದ್ಯಾವತಿ ಗಡಗಿ ಅಧ್ಯಕ್ಷತೆ ವಹಿಸಿದ್ದರು. ನಂದೀಶ್ವರ ನಗರದ ಇಂಡೋರ್ ಸ್ಟೇಡಿಯಂ ಬಡಾವಣೆ ನಾಗರಿಕರ ವಿವಿಧೋದ್ದೇಶಗಳ ಸಂಘದ ಅಧ್ಯಕ್ಷ ವಿಶ್ವನಾಥರೆಡ್ಡಿ ಗದ್ದಿಕೇರಿ ಮಾತನಾಡಿದರು.ಅಶೋಕ ಮಂದಾಲಿ, ಲಕ್ಷ್ಮಣ ಜೋಗದಂಡಕರ, ಶಿವಾನಂದ ಪಲ್ಲೇದ, ಡಾ. ಡಿ.ಬಿ. ಚೆನ್ನಶೆಟ್ಟರ, ಜಗದೀಶ್, ವೀರಯ್ಯ ಹಿರೇಮಠ, ವಿ.ಎಸ್. ಶಿವಕಾಳಿಮಠ, ರಾಚಯ್ಯ ಕರವೀರಮಠ, ಅಮರನಾಥ ಗಡಗಿ, ಎಸ್.ವೈ. ಯಾಳಗಿಶೆಟ್ರು, ಡಾ. ರವಿ, ನಂದಿ, ಬಸವರಾಜ ಬೇಲೇರಿ, ಮಂಜುನಾಥ ಗಜಾಕೋಶ, ಶ್ರೀನಿವಾಸ, ಬಸವಂತಪ್ಪ ಕವಲೂರ, ಹಬೀಬ, ಡಿ.ಎಸ್. ಕಮತರ, ಮಂಜುನಾಥ ಚಿಕ್ಕನಗೌಡ್ರ, ಸಿದ್ದರಾಮೇಶ ಹಿರೇಮಠ, ಅನಿಲ ಗೌಳಿ, ಸುಭಾಸ್ ಗಡಾದ, ಶಿವಕುಮಾರ ರಾಠೋಡ, ಹೊಳೆಯಪ್ಪಗೌಡ ಪಾಟೀಲ, ನಿಂಗರಾಜ ಗೊಲ್ಲರ, ಸಿದ್ದರಾಮೇಶ ಹಿರೇಮಠ, ನೀಲಕಂಠಯ್ಯ ಕಳ್ಳಿಮಠ ಇದ್ದರು. ಬಸವರಾಜ ಕೊರ್ಲಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ರವೀಂದ್ರ ನಂದಿ ಸ್ವಾಗತಿಸಿದರು. ಅಶೋಕ ಮಾಳೆಕೊಪ್ಪ ವಂದಿಸಿದರು.