ಗದಗ: ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ತಮ್ಮ ಕೌಶಲ್ಯ ಮೂಲಕ ಮತ್ತೊಬ್ಬರನ್ನು ತಮ್ಮೆಡೆಗೆ ಆಕರ್ಷಿಸುವಂತಹ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು, ವ್ಯಕ್ತಿತ್ವ ವಿಕಸನ ನಿತ್ಯದ ಪ್ರಕ್ರಿಯೆಯಾಗಲಿ ಎಂದು ಜಿಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ ಹೇಳಿದರು.
ವ್ಯಕ್ತಿತ್ವ ವಿಕಸನ ಎನ್ನುವುದು ನಿತ್ಯ ನಡೆಯುವಂತಹ ಪ್ರಕ್ರಿಯೆ, ಶಿಕ್ಷಣ, ಕ್ರೀಡೆ, ಚಿತ್ರಕಲೆ, ಸಂಗೀತ, ನಾಟಕ ಹೀಗೆ ಪ್ರತಿ ಕ್ಷೇತ್ರದ ಚಟುವಟಿಕೆಯಲ್ಲೂ ನಿತ್ಯ ಭಾಗಿಯಾಗುವ ಮೂಲಕ ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವ ವಿಕಸನಗೊಳಿಸುತ್ತಾ ಸಾಗಬೇಕು. ಆಗ ಮಾತ್ರ ಪರಿಪೂರ್ಣ ವ್ಯಕ್ತಿಯಾಗಿ ಹೊರಹೊಮ್ಮಲು ಸಾಧ್ಯ, ಎಲ್ಲರೂ ನಿತ್ಯ ಒಂದೊಂದು ಗುಣಾತ್ಮಕ ಚಿಂತೆ ಮೈಗೂಡಿಸಿಕೊಳ್ಳಬೇಕು, ಉತ್ತಮ ಆಲೋಚನೆಗಳಿಂದ ಜೀವನ ಯಾವುದೇ ಪರೀಕ್ಷೆ ಧೈರ್ಯವಾಗಿ ಎದುರಿಸಬಹುದು ಎಂದರು.
ಮನುಷ್ಯನ ವ್ಯಕ್ತಿತ್ವ ವಿಕಸನಕ್ಕೆ ಶಿಕ್ಷಣವೇ ಭದ್ರಬುನಾದಿಯಾಗಿದೆ, ಇದು ಮನೆ ಹಾಗೂ ಸಮುದಾಯ ಹಂತದಲ್ಲಿ ಸುಭದ್ರವಾಗಿ ನಿರ್ಮಿಸಿದಾಗ ಎಲ್ಲರ ಭವಿಷ್ಯ ಉತ್ತಮವಾಗುತ್ತದೆ ಎಂದರು. ಈ ವೇಳೆ ಎಂ.ವಿ. ಚಳಗೇರಿ, ಬಸವರಾಜ ಬಡಿಗೇರ, ಕಲ್ಮೇಶ.ಯು.,ಶರಣಪ್ಪ ಕಟ್ಟಿಮನಿ ಸೇರಿದಂತೆ ಇತರರು ಇದ್ದರು.