ಮುಂಡರಗಿ: ಕವಿಗಳಾಗ ಬಯಸುವವರು ಮೊದಲು ಬೇರೆ ಕವಿಗಳ ಕವಿತೆಗಳನ್ನು ಆಲಿಸುವ ಮತ್ತು ಆಸ್ವಾದಿಸುವುದನ್ನು ರೂಢಿಸಿಕೊಳ್ಳಬೇಕು. ಕಾವ್ಯವು ಕೇವಲ ಆನಂದಕ್ಕಲ್ಲ, ಆಯಾ ಕಾಲಘಟ್ಟದ ನಿರೀಕ್ಷಿತ ಸಾಮಾಜಿಕ ಬದಲಾವಣೆಗೆ ಪ್ರೇರಕ ಶಕ್ತಿಯಾಗಬೇಕು ಎಂದು ಕವಿ, ನಾಟಕಕಾರ ಡಾ. ನಿಂಗು ಸೊಲಗಿ ತಿಳಿಸಿದರು.ಪಟ್ಟಣದ ಅನ್ನದಾನೀಶ್ವರ ಕನ್ನಡ ಸಾಹಿತ್ಯ ಭವನದಲ್ಲಿ ಗುರುವಾರ ಸಂಜೆ ಏರ್ಪಡಿಸಿದ್ದ ಯುಗಾದಿ ಸಂಭ್ರಮ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿ, ಭಾಷೆಯ ಸೊಗಸುಗಾರಿಕೆ, ಕಲ್ಪನಾಶಕ್ತಿ, ಪ್ರಯೋಗಶೀಲ ಗುಣ ಹಾಗೂ ಭಾವನಾತ್ಮಕ ಆಳ ಕವಿಗಳಾಗುವವರಿಗೆ ಇರಬೇಕಾದ ಮುಖ್ಯ ಗುಣಗಳು ಎಂದರು.
ಕಾರ್ಯಕ್ರಮದಲ್ಲಿ ಪರಿಸರವಾದಿ ಸಿ.ಎಸ್. ಅರಸನಾಳ, ಅವಿನಾಶ ಗೋಡಕಿಂಡಿ ಅತಿಥಿಯಾಗಿ ಪಾಲ್ಗೊಂಡಿದ್ದರು. ಕವಿಗೋಷ್ಠಿಯಲ್ಲಿ ಕೊಟ್ರೇಶ ಅಂಗಡಿ, ಸಿ.ಕೆ. ಗಣಪ್ಪನವರ, ಎಸ್.ವಿ. ಪಾಟೀಲ, ಪ್ರತಿಭಾ ಹೊಸಮನಿ, ವೀಣಾ ಪಾಟೀಲ, ರವಿ ದೇವರೆಡ್ಡಿ, ಕಳಕಪ್ಪ ಜಲ್ಲಿಗೇರಿ, ಶರಣಪ್ಪ ಕುಬಸದ, ಜಯಶ್ರೀ ಅಳವಂಡಿ, ಎಂ.ಎಸ್. ಶೀರನಹಳ್ಳಿ, ಪಾರ್ವತಿ ಕುಬಸದ, ಯಲ್ಲಪ್ಪ ಹರ್ನಾಳಗಿ, ಎನ್.ಎನ್. ಕಲಕೇರಿ, ಕೃಷ್ಣಮೂರ್ತಿ ಸಾಹುಕಾರ, ಮಂಜು ಮುಧೋಳ ಸೇರಿದಂತೆ ಅನೇಕರು ಕವನ ವಾಚನ ಮಾಡಿದರು. ಆರ್.ವೈ. ಪಾಟೀಲ ಪ್ರಾರ್ಥಿಸಿದರು. ಸಿ.ಕೆ. ಗಣಪ್ಪನವರ ಸ್ವಾಗತಿಸಿದರು. ವೀಣಾ ಪಾಟೀಲ ನಿರೂಪಿಸಿದರು.