ಗುತ್ತಲ: ಮನುಷ್ಯ ತನ್ನ ಮನೆಯ ವಾಸ್ತು ಬದಲಾಯಿಸುವುದಕ್ಕಿಂತ ಮನದ ವಾಸ್ತು ಬದಲಾಯಿಸಿಕೊಂಡರೆ ಬದುಕು ಸುಂದರವಾಗಿ ಸಾಗುವುದು ಎಂದು ನೆಗಳೂರಿನ ಸಂಸ್ಥಾನ ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ಪ್ರವಚನಕಾರ ಪುಟ್ಟರಾಜ ಶಾಸ್ತ್ರೀಜಿ ಮಾತನಾಡಿ, ಮನುಷ್ಯನ ಸಂಬಂಧಗಳು ಸಡಿಲಗೊಳ್ಳುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಸಂಸ್ಕಾರ ಸದ್ವಿಚಾರಗಳ ಮೂಲಕ ಸಂಬಂಧಗಳನ್ನು ಬೆಸೆಯುವ ಅವಶ್ಯಕತೆಯಿದೆ. ಅದಕ್ಕಾಗಿಯೇ ಮಹಾತ್ಮರ ಜೀವನ ಚರಿತ್ರೆಗಳನ್ನು ಆಲಿಸಿ, ಅವರ ತತ್ವಾದರ್ಶಗಳನ್ನು ಸ್ವಲ್ಪ ಮಟ್ಟಿಗಾದರೂ ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ಸಾರ್ಥಕವಾಗುವುದು ಎಂದರು.
ಕುಂದರಗಿ ಹಿರೇಮಠದ ವೀರ ಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಹುಡಗಿ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ, ಶಹಾಪುರ ಹಿರೇಮಠದ ನಿಜಗುಣದೇವರು, ಮಣ್ಣೂರ, ಕಲ್ಲೇದೇವರ, ಹೆಸರೂರ, ನೆಗಳೂರ ಗ್ರಾಮಗಳ ಸದ್ಭಕ್ತರಿದ್ದರು. ನೆಗಳೂರಿನ ರಾಜಪ್ಪ ತಾವರೆ ಸ್ಮರಣಾರ್ಥ ತಾವರೆ ಪರಿವಾರದವರಿಂದ ದಾಸೋಹ ಸೇವೆ ಜರುಗಿತು. ಶಿವಲಿಂಗಯ್ಯ ಗವಾಯಿ ಹಿರೇಮಠ ಬಿಳೇಬಾಳ ಮತ್ತು ಅಡಿವೇಶಕುಮಾರ ಬೆಳಗಾವಿ ಸಂಗೀತ ಕಾರ್ಯಕ್ರಮ ಜರುಗಿತು. ಗುರುಶಾಂತಸ್ವಾಮಿ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು.