ಸಾಮಾಜಿಕ ಪರಿವರ್ತನೆಗೆ ಕವನಗಳು ಸ್ಫೂರ್ತಿಯಾಗಲಿ

KannadaprabhaNewsNetwork |  
Published : Aug 02, 2025, 12:00 AM IST
1ಎಚ್.ಎಲ್.ವೈ-1: ಪಟ್ಟಣ ಸರ್ದಾರ  ವಲ್ಲಭಬಾಯಿ ಉದ್ಯಾನವನದಲ್ಲಿ ಹಳಿಯಾಳ ತಾಲೂಕ ಕನ್ನಡ ಸಾಹಿತ್ಯ ಪರಿಷತ ಘಟಕದ ವತಿಯಿಂದ ಆಯೋಜಿಸಿದ ಶ್ರಾವಣ ಸಂಭ್ರಮದ ಕವಿಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ನಿವೃತ್ ಉಪನ್ಯಾಸಕ ಸಾಹಿತಿ ಸುರೇಶ ಕಡೇಮನಿ ಅವರು ಮಾತನಾಡಿದರು.  | Kannada Prabha

ಸಾರಾಂಶ

ಕೃಷಿ ಪ್ರಧಾನವಾದ ನಮ್ಮ ದೇಶದಲ್ಲಿ ಶ್ರಾವಣ ಮಾಸದಲ್ಲಿ ಆಯೋಜಿಸಿದ ಕವಿಗೋಷ್ಠಿಯು ಅರ್ಥಪೂರ್ಣವಾಗಲಿ

ಹಳಿಯಾಳ: ಸಾಮಾಜಿಕ ಪರಿವರ್ತನೆಗೆ ಕವನಗಳು ಸ್ಫೂರ್ತಿಯಾಗಲಿ. ಕವನಗಳು ಮನಸ್ಸಿನ ದುಃಖವನ್ನು ದೂರಮಾಡುವುದರೊಂದಿಗೆ ಮನಸ್ಸನ್ನು ಅರಳಿಸುತ್ತವೆ ಎಂದು ನಿವೃತ್ತ ಉಪನ್ಯಾಸಕ ಸಾಹಿತಿ ಸುರೇಶ ಕಡೇಮನಿ ಹೇಳಿದರು.ಪಟ್ಟಣ ಸರ್ದಾರ ವಲ್ಲಭಬಾಯಿ ಉದ್ಯಾನವನದಲ್ಲಿ ಹಳಿಯಾಳ ತಾಲೂಕು ಕಸಾಪ ಘಟಕದಿಂದ ಆಯೋಜಿಸಿದ ಶ್ರಾವಣ ಸಂಭ್ರಮದ ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕೃಷಿ ಪ್ರಧಾನವಾದ ನಮ್ಮ ದೇಶದಲ್ಲಿ ಶ್ರಾವಣ ಮಾಸದಲ್ಲಿ ಆಯೋಜಿಸಿದ ಕವಿಗೋಷ್ಠಿಯು ಅರ್ಥಪೂರ್ಣವಾಗಲಿ, ಕಾವ್ಯ ಅಭಿವ್ಯಕ್ತಿ ಸ್ವಾತಂತ್ರ್ಯ, ಸಾಮಾಜಿಕ ಕಳಕಳಿಯ ಸಾರುವ ಕಾವ್ಯವು ನಮ್ಮದಾಗಲಿ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಕ್ಕಳ ಹಿರಿಯ ತಜ್ಞ ವೈದ್ಯ ಡಾ.ಶ್ರೀಶೈಲ ಮಾದನ್ನವರ ಮಾತನಾಡಿ, ಕವನಗಳು ಮಾನಸಿಕ ನೆಮ್ಮದಿಯನ್ನು ನೀಡುವ ವಿಶೇಷ ಶಕ್ತಿ ಹೊಂದಿವೆ. ಕಾವ್ಯವು ಕಾಲ, ಸ್ಥಳ, ವಯಸ್ಸು ಮೀರಿ ನಿಲ್ಲುವ ಸಾಮಥ್ರ್ಯವನ್ನು ಹೊಂದಿವೆ ಎಂದರು.

ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ ತಾಲೂಕ ಕಸಾಪ ಸುಮಂಗಲಾ ಅಂಗಡಿ ಮಾತನಾಡಿ, ಕಸಾಪ ಸಾಹಿತ್ಯಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲೂ ಯೋಜಿಸಿದೆ. ಕವಿ ಮನಸ್ಸಿನ ಸಹೃದಯಿಗಳು ಇದರ ಪ್ರಯೋಜನವನ್ನು ಪಡೆಯಬೇಕೆಂದರು.

ಕಾರ್ಯಕ್ರಮದಲ್ಲಿ ಶಿಕ್ಷಕಿ ಭಾರತಿ ನಲವಡೆ, ಹಿರಿಯ ನಾಗರಿಕ ವೇದಿಕೆ ಅಧ್ಯಕ್ಷ ಜಿ.ಡಿಗಂಗಾಧರ, ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪಿ.ಡಿ.ಮಡಿವಾಳ, ಸಿಂಹಕೂಟದ ಅಧ್ಯಕ್ಷ ಎಂ, ಶಿವರಾಯ, ಕಸಾಪ ಪದಾಧಿಕಾರಿಗಳಾಗಿರುವ ಪ್ರೌಢಶಾಲಾ ಶಿಕ್ಷಕ ಕಾಳಿದಾಸ ಬಡಿಗೇರ, ಪ್ರಾಥಮಿಕ ಶಾಲಾ ಶಿಕ್ಷಕ ವಿಠ್ಠಲ ಕೊರ್ವೆಕರ, ಪದವಿ ವಿದ್ಯಾಲಯದ ಉಪನ್ಯಾಸಕ ಶಾಂತಾರಾಮ ಚಿಬುಲಕರ, ಹಿರಿಯ ನಾಗರಿಕರ ಸಂಘದ ಸದಸ್ಯರು ಹಾಗೂ ಸಾಹಿತ್ಯ ಆಸಕ್ತರು ಇದ್ದರು.

ಕವಿಗೋಷ್ಠಿಯಲ್ಲಿ ಹಲವರು ಕವನ ವಾಚಿಸಿದರು. ಜನಪದ ಗಾಯಕಿ ಮಹಾನಂದ ಗೋಸಾವಿ ಪ್ರಾರ್ಥನಾ ಗೀತೆಯನ್ನು ಹಾಡಿದರು.

ಜಿಲ್ಲಾ ಪದಾಧಿಕಾರಿಗಳು ಪ್ರೌಢಶಾಲಾ ಶಿಕ್ಷಕ ಸಿದ್ದಪ್ಪ ಬಿರಾದಾರ, ತಾಲೂಕು ಕಸಾಪ ಪದಾಧಿಕಾರಿಗಳಾಗಿರುವ ಪ್ರಾಥಮಿಕ ಶಾಲಾ ಶಿಕ್ಷಕ ಗೋಪಾಲ ಅರಿ ಹಾಗೂ ಬಸವರಾಜ ಇಟಗಿ ಕಾರ್ಯಕ್ರಮ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ