ಹಿಂದೂ ಧರ್ಮ ಉಳಿವಿಗೆ ಪಣ ತೊಡೋಣ: ಅಶೋಕ್‌ ಪೂಣಚ್ಚ

KannadaprabhaNewsNetwork |  
Published : Feb 02, 2026, 02:45 AM IST
ಆಶೋಕ್ ಪೂಣಚ್ಚ | Kannada Prabha

ಸಾರಾಂಶ

ಹಿಂದೂ ಸಂಸ್ಕಾರ ಉಳಿಯಲು ಎಲ್ಲ ಹಿಂದೂಗಳು ಶ್ರಮಿಸುವುದರೊಂದಿಗೆ ಭವ್ಯ ಭಾರತದ ಪರಂಪರೆ ನಿರ್ಮಾಣಕ್ಕೆ ಹಿಂದೂಗಳು ಜಾಗೃತರಾಗಬೇಕು ಎಂದು ಮಂಗಳೂರಿನ ಅಶೋಕ್ ಪೂಣಚ್ಚ ಹೇಳಿದರು.

ಕನ್ನಡಪ್ರಭ ವಾರ್ತೆ ಸಿದ್ದಾಪುರ

ಹಿಂದೂ ಸಂಸ್ಕಾರ ಉಳಿಯಲು ಎಲ್ಲ ಹಿಂದೂಗಳು ಶ್ರಮಿಸುವುದರೊಂದಿಗೆ ಭವ್ಯ ಭಾರತದ ಪರಂಪರೆ ನಿರ್ಮಾಣಕ್ಕೆ ಹಿಂದೂಗಳು ಜಾಗೃತರಾಗಬೇಕು ಎಂದು ಮಂಗಳೂರಿನ ಅಶೋಕ್ ಪೂಣಚ್ಚ ಹೇಳಿದರು.ರಾಷ್ಟ್ರೀಯ ಸ್ವಯಂ ಸೇವಕ ಸಂಘದ 100ನೇ ವರ್ಷದ ಆಚರಣೆ ಭಾಗವಾಗಿ ನೆಲ್ಯಹುದಿಕೇರಿಯ ಮುತ್ತಪ್ಪ ದೇವಾಲಯ ಸಭಾಂಗಣದಲ್ಲಿ ನಡೆದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ನಮ್ಮ ಕುಟುಂಬದಲ್ಲಿರುವ ಅಭಿಪ್ರಾಯ ಬೇಧಗಳನ್ನು ನಾವೆಲ್ಲರೂ ಸಹ ಚಿಂತನೆ ಮೂಲಕ ನಡಸುವ ಕಾರ್‍ಯಕ್ರಮವಾಗಿದ್ದು, ಭಾರತದ ಸಂಸ್ಕಾರ ಹಿಂದೂ ಧರ್ಮ ಉಳಿವಿಗೆ ಎಲ್ಲರೂ ಪಣ ತೊಡಬೇಕು ಎಂದರು.

ನಮ್ಮಲ್ಲಿ ಯಾವುದೇ ಜಾತಿ ಮತ ಬೇಧವಿಲ್ಲದೆ ನಾವೆಲ್ಲರೂ ಒಂದೇ ಎಂಬ ಸಂದೇಶ ನೀಡುತ್ತಾ ಹಿಂದೂಗಳ ಸಂಗಮದೊಂದಿಗೆ ಜಾಗೃತ ಹಿಂದೂ ಸಮಾಜ ನಿರ್ಮಾಣವಾಗಬೇಕಿದೆ ಎಂದರು.ಕಾರ್‍ಯಕ್ರಮದ ಆಯೋಜನಾ ಸಮಿತಿ ಸಂಚಾಲಕ ವಿ.ಕೆ. ಲೋಕೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘದ ನೂರನೇ ವರ್ಷದ ಆಚರಣೆ ಅಂಗವಾಗಿ ಹಿಂದೂ ಸಂಗಮ ಕಾರ್ಯಕ್ರಮ ಆಯೋಜಿಸಿದ್ದು, ಹಿಂದೂಗಳಲ್ಲಿ ಪರಸ್ಪರ ಭಾವೈಕ್ಯತೆ ಮೂಡಿಸಲು ಇಂತಹ ಕಾರ್ಯಕ್ರಮಗಳ ಆಯೋಜನೆ ಸಹಕಾರಿಯಾಗಲಿದೆ. ನಮ್ಮ ಸಂಸ್ಕೃತಿ ಬಗ್ಗೆ ನಮ್ಮ ಮಕ್ಕಳಿಗೆ ಅರಿವು ಮೂಡಿಸಿ

ನಮ್ಮ ಸಂಸ್ಕೃತಿ ಧರ್ಮವನ್ನು ಉಳಿಸಲು ನಾವೆಲ್ಲ ಕಟಿಬದ್ದರಾಗಬೇಕು ಎಂದರು.ಕಾರ್‍ಯಕ್ರಮದ ಭಾಗವಾಗಿ ನೆಲ್ಯಹುದಿಕೇರಿ ಕಾವೇರಿ ನದಿಯ ಸೇತುವೆಯಿಂದ ನೆಲ್ಯಹುದಿಕೇರಿ ಮುತ್ತಪ್ಪ ದೇವಾಲಯದವರೆಗೆ ಚೆಂಡೆ ವಾದ್ಯಗಳೊಂದಿಗೆ ಶೋಭಾಯಾತ್ರೆ ನಡಯಿತು. ಮಹಿಳೆಯರು ಮಕ್ಕಳು ಹೆಚ್ಚಾಗಿ ಶೋಭಾಯತ್ರೆಯಲ್ಲಿ ಭಾಗವಹಿಸಿದ್ದರು. ಪುಟಾಣಿ ಮಕ್ಕಳ ನೃತ್ಯವು ಶೋಭಾಯತ್ರೆಗೆ ಹೆಚ್ಚಿನ ಮೆರುಗು ನೀಡಿತು.

ಕಾರ್‍ಯಕ್ರಮದ ಭಾಗವಾಗಿ ಆಗಮಿಸಿದ ಎಲ್ಲರಿಗೂ ಅನ್ನ ಸಂತರ್ಪಣೆ ನಡೆಯಿತು. ಸಿದ್ದಾಪುರ ಪೊಲೀಸ್ ಠಾಣಾಧಿಕಾರಿ ಮಂಜುನಾಥ್ ನೇತ್ರತ್ವದಲ್ಲಿ ಹೆಚ್ಚಿನ ಪೋಲಿಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

400 ಕೋಟಿ ರು. ದರೋಡೆ ಪ್ರಮುಖ ಆರೋಪಿ ಬಂಧನ
ಕಾಂಗ್ರೆಸ್‌ನವರಿಗೆ ಬಜೆಟ್ ಅರ್ಥವಾಗಲ್ಲ: ಜೋಶಿ ಚಾಟಿ