ರೈಲ್ವೇ ಲೆವೆಲ್ ಕ್ರಾಸಿಂಗ್‌ನಲ್ಲಿ ಮೇಲ್ಸೇತುವೆ ನಿರ್ಮಿಸಲಿ

KannadaprabhaNewsNetwork |  
Published : Sep 23, 2025, 01:03 AM IST
   ಸಿಕೆಬಿ-1 ಸದಾ ವಾಹನಗಳಿಂದ ಗಿಜಿಗುಡುವ ರೈಲ್ವೇ ಲೆವೆಲ್ ಕ್ರಾಸಿಂಗ್ | Kannada Prabha

ಸಾರಾಂಶ

ಈ ರೈಲು ಮಾರ್ಗದಲ್ಲಿ ಇನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ರೈಲುಗಳು ಸಂಚಾರ ಆರಂಭಿಸಲಿರುವ ಹಿನ್ನೆಲೆಯಲ್ಲಿ ರೈಲು ಪ್ರಯಾಣಿಕರ ಹಿತ ದೃಷ್ಟಿ ಹಾಗೂ ಜನಸಾಮಾನ್ಯರ ಹಿತ ದೃಷ್ಟಿಯಿಂದ ಈಗ ಇರುವ ರೈಲ್ವೆ ಕ್ರಾಸಿಂಗ್‌ನಲ್ಲಿ ಮೇಲ್ವೇತುವೆ ನಿರ್ಮಾಣ ಮಾಡಿದರೆ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ರವರ ಅವಧಿಯಲ್ಲಿ ಇದನ್ನು ನಿರ್ಮಿಸಲಾಗುತ್ತು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ ನಗರದಿಂದ ಕೇವಲ 2 ಕಿ.ಮೀ ಸಮೀಪದಲ್ಲಿ ಬೆಂಗಳೂರಿಗೆ ಸಾಗುವ ಮಾರ್ಗದಲ್ಲಿ ಇರುವ ರೈಲ್ವೆ ಕ್ರಾಸಿಂಗ್ ಕಿರಿದಾಗಿರುವ ಕಾರಣ ವಾಹನ ದಟ್ಟಣೆ ಉಂಟಾಗುತ್ತಿದ್ದು ಸಂಚಾರಕ್ಕೆ ಅಡ್ಡಿ ಹಾಗೂ ಅಪಾಯಕಾರಿಯಾಗಿ ಪರಿಣಮಿಸಿದೆ. ಆದ್ದರಿಂದ ಈ ಸ್ಥಳದಲ್ಲಿ ರೈಲ್ವೆ ಕ್ರಾಸಿಂಗ್ ಮೇಲ್ಸೇತುವೆ ನಿರ್ಮಾಣ ಮಾಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.ಬೆಂಗಳೂರಿನಿಂದ ದೇವನಹಳ್ಳಿಗೆ ಸಂಚರಿಸುವ ಆರು ರೈಲುಗಳನ್ನು ಚಿಕ್ಕಬಳ್ಳಾಪುರದವರೆಗೆ ಈಗಾಗಲೆ ವಿಸ್ತರಿಸಲಾಗಿದೆ. ಈ ಕಾರಣದಿಂದ ಚಿಕ್ಕಬಳ್ಳಾಪುರ ನಾಗರಿಕರಿಗೆ ಆಗಾಗ್ಗೆ ರೈಲುಗಳ ದರ್ಶನವಾಗುತ್ತಿದೆ. ಈ ಮುಂಚೆ ಬೆರಳೆಣಿಕೆಯ ರೈಲುಗಳು ಮಾತ್ರ ಚಿಕ್ಕಬಳ್ಳಾಪುರ ಮಾರ್ಗವಾಗಿ ಕೋಲಾರ ಮತ್ತು ಬೆಂಗಳೂರಿಗೆ ಸಂಚರಿಸುತ್ತಿದ್ದವು.ಶತಮಾನದಷ್ಟು ಹಳೆಯ ಇತಿಹಾಸ

ಈ ರೈಲು ಮಾರ್ಗದಲ್ಲಿ ಇನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ರೈಲುಗಳು ಸಂಚಾರ ಆರಂಭಿಸಲಿರುವ ಹಿನ್ನೆಲೆಯಲ್ಲಿ ರೈಲು ಪ್ರಯಾಣಿಕರ ಹಿತ ದೃಷ್ಟಿ ಹಾಗೂ ಜನಸಾಮಾನ್ಯರ ಹಿತ ದೃಷ್ಟಿಯಿಂದ ಈಗ ಇರುವ ರೈಲ್ವೆ ಕ್ರಾಸಿಂಗ್‌ನಲ್ಲಿ ಮೇಲ್ವೇತುವೆ ನಿರ್ಮಾಣ ಮಾಡಿದರೆ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ರವರ ಆಡಳಿತದ ಅವಧಿಯಲ್ಲಿ ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯನವರ ಇಚ್ಛಾಶಕ್ತಿಯ ಪ್ರತೀಕವಾಗಿ ಈ ರೈಲು ಮಾರ್ಗ ಸ್ಥಾಪನೆ ಆಯಿತು. ಇದಕ್ಕೆ ಒಂದು ಶತಮಾನಕ್ಕೂ ಹೆಚ್ಚಿನ ಇತಿಹಾಸವಿದೆ. ಈ ಮಾರ್ಗದಲ್ಲಿ ರೈಲುಗಳ ಸಂಖ್ಯೆ ಹೆಚ್ಚಿದೆ. ಮತ್ತೊಂದು ಕಡೆ ಚಿಕ್ಕಬಳ್ಳಾಪುರದಿಂದ ಬೆಂಗಳೂರಿಗೆ ಸಾಗುವ ರಸ್ತೆಯಲ್ಲಿನ ರೈಲ್ವೆ ಲೆವಲ್ ಕ್ರಾಸಿಂಗ್‌ನಲ್ಲಿ ಮೇಲೇತುವೆ ನಿರ್ಮಾಣವಾಗಬೇಕು ಎನ್ನುವ ಕೂಗು ಸಹ ಕೇಳಿ ಬರುತ್ತಿದೆ. ರೈಲುಗಳು ಬರುವ ವೇಳೆ ಕ್ರಾಸಿಂಗ್ ಗೇಟ್ ಹಾಕಲಾಗುತ್ತಿದೆ. ಇದರಿಂದ ಎರಡೂ ಬದಿಯಲ್ಲಿ ವಾಹನಗಳು ಸಾಲುಗಟ್ಟಿ ಕಾಯುವ ಸ್ಥಿತಿ ನಿರ್ಮಾಣವಾಗಿದೆ.

ರಸ್ತೆಯಲ್ಲಿ ಗುಂಡಿಗಳ ಹಾವಳಿ

ರೈಲ್ವೆ ಲೆವಲ್ ಕ್ರಾಸಿಂಗ್‌ನ ಎರಡೂ ಬದಿಯಲ್ಲಿನ ರಸ್ತೆಯೂ ಸಹ ದೊಡ್ಡದಾಗಿಯೇ ಗುಂಡಿ ಬಿದ್ದಿವೆ. ಗುಂಡಿಗಳ ಒಳಗೆ ಬೈಕ್, ಕಾರುಗಳನ್ನು ಚಲಾಯಿಸಬೇಕಾಗಿದೆ. ಈ ಗುಂಡಿಗಳಲ್ಲಿ ಎಷ್ಟೋ ಸಮಯ ಬೈಕುಗಳು ಆಯಾತಪ್ಪಿ ಬಿದ್ದ ನಿದರ್ಶನಗಳೂ ಇವೆ. ದುರ್ಗಶ್ರೀ ಹೋಟೆಲ್ ದಾಟಿನ ನಂತರ ರೈಲ್ವೆ ಲೆವಲ್ ಕ್ರಾಸಿಂಗ್ ಸಿಗುತ್ತದೆ. ಕ್ರಾಸಿಂಗ್ ದಾಟಿ ಮುಂದೆ ಬೆಂಗಳೂರು ದಾರಿಯಲ್ಲಿ ಸಾಗಿದರೆ ಕೈಗಾರಿಕಾ ಪ್ರದೇಶ, ಕೃಷಿ ಇಲಾಖೆ, ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗೆ ಳಾದ ಕೆ.ವಿ ಶಿಕ್ಷಣ ಸಂಸ್ಥೆ, ಎಸ್‌ಜೆ ಸಿಐಟಿ ತಾಂತ್ರಿಕ ವಿದ್ಯಾಲಯ, ಬಿಜಿಎಸ್ ವರ್ಲ್ಡ್ ಸ್ಕೂಲ್, ತಾತ್ಕಾಲಿಕ ಹೂ ಮಾರುಕಟ್ಟೆ, ಮೆಗಾ ಡೇರಿ, ತೋಟಗಾರಿಕಾ ಇಲಾಖೆ, ರೇಷ್ಮೆ ಇಲಾಖೆ, ಪ್ರವಾಸಿ ಮಂದಿರ...ಹೀಗೆ ಜನರು ನಿತ್ಯ ಭೇಟಿ ನೀಡುವ ಇಲಾಖೆಗಳು, ಮಾರುಕಟ್ಟೆಗಳು, ಶಾಲಾ ಕಾಲೇಜುಗಳು ಇವೆ.

ಕ್ರಾಸಿಂಗ್‌ ದಾಟಲು ಗಡಿಬಿಡಿಶಾಲಾ ಕಾಲೇಜು, ಕಚೇರಿಗಳಿಗೆ ತೆರಳುವ ಮತ್ತು ಹಿಂತಿರುಗುವ ಸಮಯದಲ್ಲಿ ರೈಲ್ವೆ ಕ್ರಾಸಿಂಗ್ ದಾಟುವವರ ಮತ್ತು ವಾಹನಗಳ ಸಂಖ್ಯೆ ಹೆಚ್ಚಿರುತ್ತದೆ. ಈ ವೇಳೆ ರೈಲುಗಳು ಬರುವುದರಿಂದ ಸಂಚಾರದಲ್ಲಿ ಗಡಿಬಿಡಿ ಆಗುತ್ತಿದೆ. ನಾಗರಿಕರು ಇಲ್ಲಿ ರೈಲ್ವೆ ಮೇಲ್ ಸೇತುವೆ ನಿರ್ಮಿಸಬೇಕು ಎಂದು ಆಗ್ರಹಿಸುತ್ತಲೇ ಇದ್ದಾರೆ. ಆದರೆ ಕಾಲ ಕೂಡಿಲ್ಲ. ಹಿಂದಿನಿಂದಲೂ ಎಷ್ಟೋ ವರ್ಷಗಳಿಂದ ಚಿಕ್ಕಬಳ್ಳಾಪುರ ನಾಗರಿಕರು ಇಲ್ಲಿ ಮೇಲೇತುವೆ ನಿರ್ಮಿಸಬೇಕು ಎಂದು ಒತ್ತಾಯಿಸುತ್ತಲೇ ಇದ್ದಾರೆ. ಆದರೆ ನಿರ್ಮಾಣ ಮಾತ್ರ ಸಾಧ್ಯವಾಗಿಲ್ಲ.

ಬೆಂಗಳೂರಿಗೆ ಹತ್ತಿರವಿರುವ ಮತ್ತು ಪ್ರವಾಸೋಧ್ಯಮವು ಉತ್ತಮವಾಗಿ ಬೆಳೆಯುತ್ತಿರುವ ಜಿಲ್ಲೆ ಚಿಕ್ಕಬಳ್ಳಾಪುರ. ಭವಿಷ್ಯದಲ್ಲಿ ಮತ್ತಷ್ಟು ರೈಲುಗಳು ಬರುವ ಸಾಧ್ಯತೆಯನ್ನು ಸಹ ತಳ್ಳಿ ಹಾಕುವಂತಿಲ್ಲ. ಈ ಕಾರಣದಿಂದ ಲೆವಲ್ ಕ್ರಾಸಿಂಗ್‌ನಲ್ಲಿ ಮೇಲ್ಸೇತುವೆ ನಿರ್ಮಿಸಬೇಕೆಂಬ ಒತ್ತಡ ಹೆಚ್ಚಾಗುತ್ತಿದೆ.

PREV

Recommended Stories

ಅಕ್ರಮ ಶಸ್ತ್ರಾಸ್ತ್ರ: ನಿನ್ನೆಯೂ ವಿಚಾರಣೆಗೆ ತಿಮರೋಡಿ ಗೈರು
ಸಿದ್ದು ಆಳ್ವಿಕೆ ಟಿಪ್ಪು ಆಳ್ವಿಕೆ ನಾಚಿಸುವಂತಿದೆ : ಬಿವೈವಿ