ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಎಸ್.ಎಸ್.ಪ್ರೌಢಶಾಲೆಯಲ್ಲಿ ನಡೆದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಯುವ ವೇದಿಕೆಯ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಚನ ಸಾಹಿತ್ಯ ಸಾಮಾಜಿಕ, ಧಾರ್ಮಿಕ ಹಾಗೂ ಆರ್ಥಿಕ ಕ್ಷೇತ್ರಗಳನ್ನು ಅಭಿವೃದ್ಧಿಗೊಳಿಸಲು ಬೇಕಾದ ಪ್ರಗತಿಪರ ತತ್ವಗಳನ್ನು ಹೊಂದಿದೆ. ಭಾರತವಲ್ಲದೆ ಇಡೀ ಜಗತ್ತಿನ ಚಿತ್ರಣ ಬದಲಾಯಿಸುವ ಸಾಮರ್ಥ್ಯ ಅದಕ್ಕಿದೆ. ಜಗತ್ತಿನಲ್ಲಿ ವ್ಯಾಪಕವಾಗಿ ಹರಡಿಕೊಂಡಿರುವ ಅಶಾಂತಿ, ದ್ವೇಷ, ಅಸೂಯೆಗಳನ್ನು ನಿರಸನಗೊಳಿಸಬಲ್ಲ ಶಕ್ತಿ ವಚನ ಸಾಹಿತ್ಯಕ್ಕಿದೆ ಎಂದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಂಬುನಾಥ ಕಂಚ್ಯಾಣಿ ಮಾತನಾಡಿ, ಬಸವಣ್ಣನವರು ಮಾಡಿದ ಸಮಾಜೋಧಾರ್ಮಿಕ ಕ್ರಾಂತಿಯ ಬೀಜಗಳು ಅವರ ಬಾಲ್ಯದಲ್ಲಿಯೇ ಚಿಗುರುಗೊಂಡಿದ್ದವು ಎಂದರು.ಪ್ರೊ.ನಿರಂಜನ ಕೋರೆ ಶರಣ ಶಂಕರದಾಸಿಮಯ ಕುರಿತು ಉಪನ್ಯಾಸ ನೀಡಿದರು. ಈ ವೇಳೆ ಕೆ.ವಿ.ಪಾಟೀಲ, ಅಮರೇಶ ಸಾಲಕ್ಕಿ, ಡಿ.ಕೆ.ರಾಠೋಡ, ಎಸ್.ಎಸ್. ಲಮಾಣಿ, ನಿಕಟಪೂರ್ವ ಅಧ್ಯಕ್ಷ ಎಂ.ಜಿ.ಯಾದವಾಡ, ವಿನೋದ ದೊಡ್ಡವಾಡ, ಕೆ.ವಿ.ಒಡೆಯರ, ಮಹಾಂತೇಶ ಜೆಂಡೆ, ತ್ರಿವೇಣಿ ಜಾನಕಾರ, ರೇಖಾ ಕುಳಲಿ, ಶಶಿಕಾಂತ ನಗರೆ ಮುಂತಾದವರು ಇದ್ದರು. ಈರಣ್ಣ ತೊಂಡಿಕಟ್ಟಿ ವಂದಿಸಿದರು.