ಕುಕನೂರು: ರಾಜ್ಯ ಬಣಜಿಗ ಕ್ಷೇಮಾಭಿವೃದ್ಧಿ ಸಂಘದಿಂದ ಹಾಗೂ ತಾಲೂಕು ಬಣಜಿಗ ಕ್ಷೇಮಾಭಿವೃದ್ಧಿ ಸಂಘದಿಂದ ಬಡ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅವರ ಕಲಿಕೆಗೆ ಪ್ರೋತ್ಸಾಹಿಸೋಣ ಎಂದು ಬಣಜಿಗ ಸಮಾಜದ ರಾಜ್ಯ ಉಪಾಧ್ಯಕ್ಷ ಅಂದಪ್ಪ ಜವಳಿ ಹೇಳಿದರು.
ಸಮಾಜದ ಜಿಲ್ಲಾಧ್ಯಕ್ಷ ವಿರೇಶ ಬಂಗಾರಶೆಟ್ಟರ್ ಮಾತನಾಡಿ, ಸಮಾಜದ ಸಂಘಟನೆಯನ್ನು ಏಕತೆಗಾಗಿ, ವಿಶ್ವಾಸಕ್ಕಾಗಿ ಸಮಾಜದ ಸೇವೆಗಾಗಿ ಕಟ್ಟಲಾಗುತ್ತದೆ. ಸಂಘಟಣೆಯಲ್ಲಿ ಎಲ್ಲರೂ ಸೌಹಾರ್ದತೆಯಿಂದ, ಸಹೋದರತೆಯಿಂದ ಬಾಳಬೇಕೆಂದರು.
ತಾಲೂಕು ಘಟಕ, ಯುವಕ ಹಾಗೂ ಮಹಿಳಾ ಘಟಕದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಜರುಗಿತು.ಈ ಸಂದರ್ಭದಲ್ಲಿ ಸಂಗಣ್ಣ ಟೆಂಗಿನಕಾಯಿ, ವಿಜಯಕುಮಾರ, ಪ್ರಭು ಹೊಸಅಂಗಡಿ, ಶರಣಪ್ಪ ಗದಿಗಿನ್, ಅಂದಾನಪ್ಪ ಅಂಗಡಿ, ವಿಶ್ವನಾಥ ಮಳಗಿ, ಈಶ್ವರಪ್ಪ ಅಂಗಡಿ, ಬಸವರಾಜ ಜೋಳದ್, ವಿಜಯಕುಮಾರ ಅಂಗಡಿ, ಶರಣಪ್ಪ ಗುತ್ತಿ, ಶರಣಪ್ಪ ಜವಳಿ, ಶಿವಣ್ಣ ಯಾಳಗಿ, ಈಶಪ್ಪ ನಾಲ್ವಾಡ್, ಸಂಗಣ್ಣ ಕರಂಡಿ, ಸಂಗಪ್ಪ ಅಂಗಡಿ, ಕಪಾತಪ್ಪ ಅಂಗಡಿ, ಅಕ್ಕಮ್ಮ ಅಂಗಡಿ, ಬಸವರಾಜ ಅಂಗಡಿ, ಜಗದೀಶ ಜವಳಿ, ಚಂದ್ರಶೇಖರ ಅಂಗಡಿ ಸೇರಿದಂತೆ ಸಮಾಜದ ಮುಖಂಡರು, ಮಹಿಳೆಯರು, ಯುವಕರು ಇದ್ದರು.