ಚಳ್ಳಕೆರೆ: ನಾವೆಲ್ಲರೂ ಭಾರತ ಸಂವಿಧಾನ ರಕ್ಷಿಸುವ ಸಂಕಲ್ಪವನ್ನು ಮಾಡಬೇಕು ಎಂದು ಶಾಸಕ ಟಿ.ರಘುಮೂರ್ತಿ ಕರೆ ನೀಡಿದರು.
ರಾಜ್ಯದ ಪ್ರತಿಯೊಂದು ಆಡಳಿತವೂ ಸಂವಿಧಾನ ಬದ್ಧವಾಗಿ ನಡೆಯುತ್ತಿದೆ. ಸಂವಿಧಾನವನ್ನು ಹೊರತುಪಡಿಸಿ ನಾವುಯಾವುದೇ ರೀತಿಯ ಆಡಳಿತ ಹಾಗೂ ಅಭಿವೃದ್ಧಿಕೈಗೊಳ್ಳಲು ಸಾಧ್ಯವಿಲ್ಲ. ನಮ್ಮೆಲ್ಲರ ಭವಿಷ್ಯದ ಬದುಕು ಸಂವಿಧಾನಮೇಲೆ ಅವಲಂಬಿತವಾಗಿದೆ. ಸರ್ಕಾರದ ನಿಲುವನ್ನು ಸಾಮಾನ್ಯ ಪ್ರಜೆಯೂ ಪ್ರಶ್ನಿಸುವ ಅವಕಾಶವನ್ನು ಸಂವಿಧಾನ ನಮಗೆ ನೀಡಿದೆ. ನಮ್ಮ ಸಂವಿಧಾನಕ್ಕೆ ವಿಶ್ವಮನ್ನಣೆ ದೊರಕಿದೆ ಎಂದು ತಿಳಿಸಿದರು.
ತಹಸೀಲ್ದಾರ್ ರೇಹಾನ್‌ಪಾಷ ಪ್ರಾಸ್ತಾವಿಕವಾಗಿ ಮಾತನಾಡಿದರು.ಇದೇ ಸಂದರ್ಭದಲ್ಲಿ ಸಂವಿಧಾನದ ಕರಡುಪ್ರತಿಯ ಪ್ರತಿಜ್ಞಾನ ವಿಧಿಯನ್ನು ತಾಪಂ ಕಾರ್ಯನಿರ್ವಹಣಾಧಿಕಾರಿ ಎಚ್.ಶಶಿಧರ ಬೋಧಿಸಿದರು. ಪ್ರಬಂಧ ಮತ್ತು ಚಿತ್ರಕಲೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ, ಬಹುಮಾನವಿತರಿಸಿದರು. ಕಾಲ್ನಡಿಗೆ ಜಾಥ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಿತು. ನೆಹರೂ ವೃತ್ತದಲ್ಲಿ ಮಾನವ ಸರಪಳಿನಿರ್ಮಿಸುವ ಮೂಲಕ ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸಿದರು.
ಡಿವೈಎಸ್ಪಿ ಎಂ.ಜಿ.ಸತ್ಯನಾರಾಯಣ, ಇನ್ಸ್‌ಪೆಕ್ಟರ್ ಕೆ.ಕುಮಾರ್, ಸಮಾಜಕಲ್ಯಾಣಾಧಿಕಾರಿ ದೇವಲನಾಯ್ಕ, ಬಿಇಒ ಕೆ.ಎಸ್.ಸುರೇಶ್, ಬಿಸಿಎಂ ಅಧಿಕಾರಿ ರಮೇಶ್, ಸಿಡಿಪಿಒ ರಾಜಾನಾಯ್ಕ, ಪರಿಶಿಷ್ಟಕಲ್ಯಾಣಾಧಿಕಾರಿ ಎಂ.ಟಿ.ಶಿವರಾಜ್, ಪೌರಾಯುಕ್ತ ಎಚ್.ಜಿ.ಜಗರೆಡ್ಡಿ, ಗ್ಯಾರಂಟಿ ಸಮಿತಿ ಅಧ್ಯಕ್ಷ ಗದ್ದಿಗೆತಿಪ್ಪೇಸ್ವಾಮಿ, ಮಾಜಿನಗರಸಭಾ ಸದಸ್ಯರಾದ ರಮೇಶ್‌ಗೌಡ, ರಾಘವೇಂದ್ರ, ಕವಿತಾ, ವೀರಭದ್ರಯ್ಯ, ಟಿ.ಮಲ್ಲಿಕಾರ್ಜುನ್, ಟಿ.ವಿಜಯಕುಮಾರ್, ವೀರಭದ್ರಿ, ಶಶಿಧರ, ತಾಪಂ ಮಾಜಿ ಸದಸ್ಯ ಸಮರ್ಥರಾಯ, ಮುಖಂಡರಾದ ತಿಪ್ಪೇಸ್ವಾಮಿ, ಎಚ್.ಎಸ್.ಸೈಯದ್, ನಾಗರಾಜು, ಪ್ರಕಾಶ್ ಮುಂತಾದವರು ಉಪಸ್ಥಿತರಿದ್ದರು.