ಸ್ವಾಮೀಜಿಗಳು ಸರ್ಕಾರಕ್ಕೆ ಸಲಹೆ ನೀಡಲಿ: ಸಚಿವ ಲಾಡ್

KannadaprabhaNewsNetwork |  
Published : Sep 07, 2025, 01:00 AM IST
ಸಚಿವ ಲಾಡ್ | Kannada Prabha

ಸಾರಾಂಶ

ಧರ್ಮಸ್ಥಳಕ್ಕೆ ಮಠಾಧೀಶರು ಭೇಟಿ ನೀಡುತ್ತಿರುವುದು ಒಳ್ಳೆಯದು. ಧರ್ಮಸ್ಥಳ ಪ್ರಕರಣವನ್ನು ಎನ್ಐಎಗೆ ಕೊಡಬೇಕು ಎಂದು ಒತ್ತಾಯ ಮಾಡುವ ಅಧಿಕಾರ ಎಲ್ಲರಿಗೂ ಇದೆ. ಸರ್ಕಾರ ಏನು ಮಾಡಬೇಕೋ ಆ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತದೆ.

ಧಾರವಾಡ: ಧರ್ಮಸ್ಥಳಕ್ಕೆ ಅನೇಕ ಮಠಾಧೀಶರು ಒಕ್ಕೊರಲಾಗಿ ಭೇಟಿ ನೀಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ಸಚಿವ ಸಂತೋಷ ಲಾಡ್ ಪ್ರತಿಕ್ರಿಯೆ ನೀಡಿದ್ದಾರೆ.

ಧರ್ಮಸ್ಥಳಕ್ಕೆ ಮಠಾಧೀಶರು ಭೇಟಿ ನೀಡುತ್ತಿರುವುದು ಒಳ್ಳೆಯದು. ಧರ್ಮಸ್ಥಳ ಪ್ರಕರಣವನ್ನು ಎನ್ಐಎಗೆ ಕೊಡಬೇಕು ಎಂದು ಒತ್ತಾಯ ಮಾಡುವ ಅಧಿಕಾರ ಎಲ್ಲರಿಗೂ ಇದೆ. ಸರ್ಕಾರ ಏನು ಮಾಡಬೇಕೋ ಆ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತದೆ. ಸ್ವಾಮೀಜಿಗಳು ಸರ್ಕಾರಕ್ಕೆ ಏನಾದರೂ ಸಲಹೆ ಕೊಡಬೇಕಿದ್ದರೆ ಕೊಡಬಹುದು. ಅದನ್ನು ನಾವು ಸ್ವಾಗತ ಮಾಡುತ್ತೇವೆ ಎಂದರು.

ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಬ್ಯಾಲೆಟ್ ಪೇಪರ್ ಬಳಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವ ಲಾಡ್, ವೋಟಿಂಗ್ ಮಶಿನ್ ಗೊಂದಲ ಭಾರತ ದೇಶದಲ್ಲೇ ನಡೆಯುತ್ತಿದೆ. ಬಿಹಾರದ ಮೂರು ಲಕ್ಷ ಮನೆಗಳಿಗೆ ಜೀರೋ ನಂಬರ್ ಕೊಡಲಾಗಿದೆ. ಓಡಿಸ್ಸಾದಲ್ಲಿ ಕೂಡ ಎರಡೂವರೆ ಲಕ್ಷ ಮತಗಳು ಹೆಚ್ಚಾಗಿವೆ ಎಂಬ ಮಾಹಿತಿ ಇದೆ. ಚುನಾವಣೆ ವೇಳೆ ಆರೂವರೆ ಗಂಟೆವರೆಗೆ ವೋಟಿಂಗ್ ಮಾಡಿಸಲಾಗುತ್ತದೆ. ಬಿಹಾರದ ಒಂದೇ ಮನೆಯಲ್ಲಿ 950 ಮತಗಳನ್ನು ಜಾಸ್ತಿ ಮಾಡಿದ್ದಾರೆ. ಆದ್ದರಿಂದ ಮತ್ತೆ ಬ್ಯಾಲೆಟ್ ಸಿಸ್ಟಮ್‌ಗೆ ಹೋಗುವುದು ಒಳ್ಳೆಯದು ಎಂದು ಸರ್ಕಾರ ನಿರ್ಧಾರ ತೆಗೆದುಕೊಂಡಿದೆ ಎಂದರು.

ಬಿಹಾರದಲ್ಲಿ ವಿಶೇಷ ತೀವ್ರ ಪರಿಷ್ಕರಣೆ(ಎಸ್ಐಆರ್) ತಂದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ರೊಹಿಂಗ್ಯಾಗಳು ಇದ್ದಾರೇನೋ ಎಂದು ತಿಳಿದುಕೊಂಡಿದ್ದಾರೆ. ಯಾವಾಗ ಚುನಾವಣೆ ಬರುತ್ತದೆಯೋ ಆಗ ಬಾಂಗ್ಲಾ ಮತ್ತು ಪಾಕಿಸ್ತಾನಕ್ಕೆ ಇವರು ಬೈಯುತ್ತಾರೆ. ಬಾಂಗ್ಲಾದೇಶದ ಮತ್ತು ರೋಹಿಂಗ್ಯಾಗಳು 2004ರಿಂದ 2024ರ ವರೆಗೆ 72 ಸಾವಿರ ಜನರನ್ನು ಗುರುತಿಸಿ ಹೊರ ಕಳುಹಿಸಲಾಗಿದೆ. ಬಿಜೆಪಿಯವರು ಕಳೆದ 10 ವರ್ಷಗಳಲ್ಲಿ ಎಂಟು ಸಾವಿರ ಜನರನ್ನು ಹೊರಗಡೆ ಕಳುಹಿಸಿಲ್ಲ. ಈ ಬಗ್ಗೆ ಚರ್ಚೆ ಆಗಬೇಕು ಎಂದರು.

ಇದೊಂದು ಬರೀ ನಾಟಕ, ಚುನಾವಣೆ ಗೆಲ್ಲೋಕೆ ಒಂದು ಮಷಿನರಿ ಮಾಡೋದನ್ನು ಬಿಟ್ಟರೆ ಬೇರೆ ಏನೂ ಇಲ್ಲ. ಇವರಿಗೆ ದೇಶದ ಪ್ರಗತಿ ಬಗ್ಗೆ ಚಿಂತನೆ ಇಲ್ಲ. ಜಿಎಸ್‌ಟಿ ಟ್ಯಾರಿಫ್ ಮಾಡಿದ್ದು ಇವರೇ. ಹಿಂದೆ ರಾಹುಲ್ ಗಾಂಧಿ ಗಬ್ಬರ್‌ ಸಿಂಗ್ ಟ್ಯಾಕ್ಸ್ ಹಾಕಬಾರದು ಎಂದಿದ್ದರು. ಶೇ. 18 ರಷ್ಟು ಟ್ಯಾಕ್ಸ್ ಹಾಕಬಾರದು ಎಂದಾಗ ಬಿಜೆಪಿಯವರು ನಕ್ಕಿದ್ದರು. ಮುಗಿಬಿದ್ದು ಇವನಿಗೆ ಏನೂ ಗೊತ್ತಿಲ್ಲ ಎಂದಿದ್ದರು. ಈಗ ರಾಹುಲ್ ಗಾಂಧಿ ಹೇಳಿದಂತೆಯೇ ತಾವು ಬುದ್ಧಿವಂತರಂತೆ ಮಾತನಾಡುತ್ತಿದ್ದಾರೆ. ಬಿಜೆಪಿಯಿಂದ ಈಗೇನು ವೋಟ್ ಕಳ್ಳತನ ನಡೆಯುತ್ತಿದೆಯೋ ಅದಕ್ಕೊಂದು ಅಂತ್ಯ ಬರುತ್ತದೆ. ಜನ ತಕ್ಕ ಪಾಠ ಕಲಿಸುತ್ತಾರೆ ಎಂದರು.

PREV

Recommended Stories

ಭಕ್ತರ ಸಹಕಾರದಿಂದ ದೇವಸ್ಥಾನದಲ್ಲಿ ಹೊಸತನ
ಪತ್ನಿ ಮೇಲೆ ಹಲ್ಲೆಗೈದು ಅರ್ಧ ತಲೆ ಬೋಳಿಸಿದ ಪತಿ