ಬ್ಯಾಂಕ್‌ಗಳು ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲಿ

KannadaprabhaNewsNetwork |  
Published : Jun 27, 2025, 12:48 AM IST
೨೪ಶಿರಾ೧: ಶಿರಾ ನಗರದಲ್ಲಿ ನೂತನವಾಗಿ ಪ್ರಾರಂಭವಾಗಿರುವ ೧೪೮ನೇ ಪಂಜಾಬ್ ನ್ಯಾಷನಲ್ ಬ್ಯಾಂಕ್ ಶಾಖೆಯನ್ನು ಶಾಸಕ ಟಿ.ಬಿ.ಜಯಚಮದ್ರ ಉದ್ಘಾಟಿಸಿದರು. ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ, ಪಂಜಾಬ್ ನ್ಯಾಷನಲ್ ಬ್ಯಾಂಕ್ನ ವೃತ್ತ ಪ್ರಮುಖರಾದ ರತೀಶ್ ಕುಮಾರ್ ಸಿಂಗ್, ನಗರಸಭೆ ಅಧ್ಯಕ್ಷ ಜೀಷಾನ್ ಮೊಹಮದ್ ಸೇರಿದಂತೆ ಹಲವರು ಹಾಜರಿದ್ದರು. | Kannada Prabha

ಸಾರಾಂಶ

ಜನಸಾಮಾನ್ಯರಿಗೆ ಆರ್ಥಿಕ ಶಕ್ತಿ ತುಂಬಲು ಬ್ಯಾಂಕಿಂಗ್ ವ್ಯವಸ್ಥೆ ಬೇಕು. ಬ್ಯಾಂಕುಗಳು ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಬೇಕು. ಜನಸಾಮಾನ್ಯರಿಗೆ ತಲುಪುವ ವ್ಯವಸ್ಥೆಯಾಗಬೇಕು. ಆಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ

ಜನಸಾಮಾನ್ಯರಿಗೆ ಆರ್ಥಿಕ ಶಕ್ತಿ ತುಂಬಲು ಬ್ಯಾಂಕಿಂಗ್ ವ್ಯವಸ್ಥೆ ಬೇಕು. ಬ್ಯಾಂಕುಗಳು ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಬೇಕು. ಜನಸಾಮಾನ್ಯರಿಗೆ ತಲುಪುವ ವ್ಯವಸ್ಥೆಯಾಗಬೇಕು. ಆಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು.

ನಗರದಲ್ಲಿ ನೂತನವಾಗಿ ಪ್ರಾರಂಭವಾಗಿರುವ ೧೪೮ನೇ ಪಂಜಾಬ್ ನ್ಯಾಷನಲ್ ಬ್ಯಾಂಕ್ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು. ಒಂದು ಪ್ರದೇಶ ಅಬಿವೃದ್ಧಿಯಾಗಲು ಮೂಲಭೂತವಾಗಿ ನೀರು ಅವಶ್ಯಕ. ಶಿರಾ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಶಾಶ್ವತವಾಗಿ ಬಗೆಹರಿದಿದೆ. ಭದ್ರ ಹಾಗೂ ಎತ್ತಿನ ಹೊಳೆ ನೀರು ಇನ್ನೇನು ಕೆಲವೇ ತಿಂಗಳಲ್ಲಿ ಬರಲಿದೆ. ಈ ಮೂರು ಮೂಲಗಳಿಂದ ನೀರು ಬಂದರೆ ಶಿರಾ ತಾಲೂಕು ನೀರಿನಿಂದ ಸಮೃದ್ಧಿಯಾಗಲಿದೆ. ಶಿರಾ ನಗರ ಅಭಿವೃದ್ಧಿಯ ವೇಗ ನಾಗಲೋಟದಲ್ಲಿ ಹೋಗುತ್ತಿದೆ ಎಂದರು.

ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಮಾತನಾಡಿ, ನಮ್ಮ ದೇಶದ ಹೆಮ್ಮೆಯ ನಾಯಕರಾದ ಲಾಲಾ ಲಜಪತ್ ರಾಯ್ ಅವರು ಸ್ಥಾಪಿಸಿದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಶಿರಾ ನಗರದಲ್ಲಿ ಸ್ಥಾಪನೆಯಾಗಿರುವುದು ಸಂತಸ ತಂದಿದೆ. ತಾಲೂಕಿನ ಜನರಿಗೆ ಉತ್ತಮ ಸೇವೆ ಒದಗಿಸಿ ಎಂದರು.

ಪಂಜಾಬ್ ನ್ಯಾಷನಲ್ ಬ್ಯಾಂಕ್ನ ವೃತ್ತ ಪ್ರಮುಖರಾದ ರತೀಶ್ ಕುಮಾರ್ ಸಿಂಗ್ ಮಾತನಾಡಿ , ಶಿರಾ ಕ್ಷೇತ್ರದ ಶಾಸಕ ಟಿ.ಬಿ.ಜಯಚಂದ್ರ ಶಿರಾ ತಾಲೂಕಿನಲ್ಲಿ ಕೈಗಾರಿಕೆ, ಕೃಷಿ ಸೇರಿದಂತೆ ಎಲ್ಲಾ ರೀತಿಯಲ್ಲಿಯೂ ಅಭಿವೃದ್ಧಿ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ನಗರದಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಉತ್ತಮ ವ್ಯವಹಾರ ನಡೆಸಲು ಸಹಕಾರಿಯಾಗುತ್ತದೆ. ಬ್ಯಾಂಕ್ ಸಿಬ್ಬಂದಿಗಳು ಜನರ ಬಳಿ ತೆರಳಿ ಸಾಲ ಸೌಲಭ್ಯ ನೀಡಬೇಕು. ಗ್ರಾಹಕರೊಂದಿಗೆ ಉತ್ತಮವಾಗಿ ವ್ಯವಹರಿಸಬೇಕು. ಸಾರ್ವಜನಿಕರು ಸಹ ಬ್ಯಾಂಕಿಗೆ ಬಂದು ವ್ಯಹಾರ ಮಾಡಬೇಕು ಎಂದರು.

ನಗರಸಭೆ ಅಧ್ಯಕ್ಷ ಜೀಷಾನ್ ಮೊಹಮೂದ್, ಪಂಜಾಬ್ ನ್ಯಾಷನಲ್ ಬ್ಯಾಂಕ್‌ ಮುಖ್ಯ ಪ್ರಬಂಧಕರಾದ ಚಂದ್ರಜೀತ್ ಕುಮಾರ್, ಹಿರಿಯ ಪ್ರಬಂದಕರು ರಘುವಂಶ್ ಮಣಿ ವರ್ಮ, ಶಾಖಾ ಪ್ರಬಂಧಕ ನವೀನ್ ಕುಮಾರ್ ಆರ್ ಕೆ, ಗ್ರಾಹಕರ ಸೇವಾ ಪ್ರತಿನಿಧಿ ಶಿವ ನಾಯಕ್, ಸಿಬ್ಬಂದಿಗಳಾದ ಮಲ್ಲೇಶ್ ಎಮ್, ಮುಖಂಡರಾದ ಮೂಡಲಗಿರಿಗೌಡ, ಬಿಜೆಪಿ ಗ್ರಾಮಂತರ ಮಂಡಲ ಅಧ್ಯಕ್ಷರಾದ ಈರಣ್ಣ ಪಟೇಲ್, ಮಾಜಿ ತಾಲೂಕು ಪಂಚಾಯ್ತಿ ಸದಸ್ಯರಾದ ಚಿಕ್ಕಣ್ಣ, ಕುಮಾರ್ ಮಾಸ್ಟರ್, ಭಾಸ್ಕರ್, ಸೈಯದ್ ಬಾಬಾ ಹಾಜರಿದ್ದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸ್‌ ರೀತಿ ಶ್ವಾನ ಮೂಳೆ ಪತ್ತೆಗೆ ಎಸ್‌ಐಟಿ?
ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌