ಬಂಜಾರ ಸಾಹಿತ್ಯ ಪರಿಷತ್ತಿನ ವಿಜಯನಗರ ಜಿಲ್ಲಾ ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭಕನ್ನಡಪ್ರಭ ವಾರ್ತೆ ಹೊಸಪೇಟೆ
ನಗರದ ಅಂಬೇಡ್ಕರ್ ಭವನದಲ್ಲಿ ಭಾನುವಾರ ನಡೆದ ಬಂಜಾರ ಸಾಹಿತ್ಯ ಪರಿಷತ್ತಿನ ವಿಜಯನಗರ ಜಿಲ್ಲೆಯ ನೂತನ ಜಿಲ್ಲಾ ಘಟಕದ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಲಂಬಾಣಿ ಸಮಾಜದವರು ರಾಜ್ಯದಲ್ಲಿ ಅಪಾರ ಸಂಖ್ಯೆಯಲ್ಲಿದ್ದಾರೆ. ತಾಂಡಾ ಅಭಿವೃದ್ಧಿ ನಿಗಮ ಹಾಗೂ ಸಮಾಜದ ಪ್ರಕಾರ 37ರಿಂದ 40 ಲಕ್ಷ ಜನಸಂಖ್ಯೆ ಇದ್ದಾರೆ. ನಮಗೆ ಒಳ ಮೀಸಲಾತಿಯಲ್ಲಿ ಹೆಚ್ಚಿನ ಪಾಲು ಬರಬೇಕಾದರೆ, ರಾಜ್ಯದಲ್ಲಿರುವ 3900 ತಾಂಡಾಗಳಲ್ಲೂ ಸರಿಯಾಗಿ ಜಾತಿ ಗಣತಿ ನಮೂದಿಸಬೇಕು. ನಗರಗಳಲ್ಲಿರುವವರು ಕೂಡ ಯಾವುದೇ ಹಿಂಜರಿಕೆ ಇಲ್ಲದೇ ಜಾತಿ ನಮೂದಿಸಬೇಕು. ಹಿಂದುಳಿದ ವರ್ಗದ ಆಯೋಗದಿಂದಲೂ ಮರು ಸರ್ವೆ ಆಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡ ಅನುಮೋದಿಸಿದ್ದಾರೆ. ಆಗ ನಾವು ತಾಂಡಾಗಳಿಗೆ ಹಾಗೂ ನಗರ, ಪಟ್ಟಣ ಪ್ರದೇಶಗಳಿಗೆ ಭೇಟಿ ನೀಡಿ ಜನರಲ್ಲಿ ಜಾಗೃತಿ ಮೂಡಿಸುತ್ತೇವೆ. ಸಮಾಜದ ರಾಜಕಾರಣಿಗಳು, ಬಂಜಾರ ಮಠಾಧೀಶರು ಕೂಡ ಜಾತಿ ಗಣತಿ ಕುರಿತು ಜಾಗೃತಿ ಮೂಡಿಸಬೇಕು. ಸಮಾಜದವರು ಜಾಗೃತರಾಗಬೇಕು ಎಂದರು.
ಬಂಜಾರ ಸಮಾಜದವರಿಗೆ ಕಲೆ, ಸಾಹಿತ್ಯ, ಸಂಗೀತ ರಕ್ತಗತವಾಗಿದೆ. ಹಿರಿಯರಿಂದ ನಮಗೆ ಬಳುವಳಿಯಾಗಿ ಬಂದಿದೆ. ನಾವು ಜಾನಪದ ಗೀತೆಗಳನ್ನು ಹಾಡುತ್ತಾ, ಕುಣಿಯೋದು ನಮ್ಮ ಸಂಪ್ರದಾಯ, ಸಂಸ್ಕೃತಿ ಆಗಿದೆ. ಕಲೆ, ಸಾಹಿತ್ಯಕ್ಕೆ ಹೆಚ್ಚಿನ ಬೆಲೆ ನೀಡುತ್ತೇವೆ. ಕಲೆಯೇ ಬಂಜಾರರ ಜೀವಾಳ ಆಗಿದೆ ಎಂದರು.ಬಂಜಾರ ಸಮಾಜದಲ್ಲಿ ಸಾಹಿತಿಗಳು, ಸಾಹಿತ್ಯ ಅಭಿಮಾನಿಗಳು, ಸಾಹಿತ್ಯಾಸಕ್ತರು ಇದ್ದಾರೆ. ಶ್ರೀಮಂತ ಕಲೆ, ಸಂಸ್ಕೃತಿ ಬಂಜಾರ ಸಮಾಜದಲ್ಲಿದೆ. ಕಸೂತಿ ಕಲೆ ನಮ್ಮ ಬದುಕಿನ ಭಾಗ ಆಗಿದೆ. ಉತ್ತಮ ಸಂಸ್ಕೃತಿ ಹೊಂದಿರುವ ನಮ್ಮಲ್ಲಿ ಒಗ್ಗಟ್ಟಿನ ಕೊರತೆ ಇದೆ. ನಮ್ಮಲ್ಲಿ ತಾಳ್ಮೆ, ಸಹನೆ ಮಾಯವಾಗಿದೆ. ನಾಯಕತ್ವ ಗುಣ ನಮ್ಮಲ್ಲಿದೆ. ಆದರೆ, ನಮ್ಮಲ್ಲಿ ಅಸೂಯೆ ಇತ್ತೀಚೆಗೆ ಹುಟ್ಟಿಕೊಳ್ಳುತ್ತಿದೆ. ಇದು ಸಮಾಜಕ್ಕೆ ಅಪಾಯಕಾರಿ ಆಗಲಿದೆ. ಸಮಾಜವನ್ನು ಸಂಘಟಿಸುವ ಶಕ್ತಿ ನಮ್ಮಲ್ಲಿದೆ. ಎಲ್ಲ ಸಮಾಜಗಳ ಜೊತೆಗೆ ಸಮನ್ವಯದಿಂದ ಹೋಗುವ ಗುಣ ನಮ್ಮಲ್ಲಿದೆ. ಆದರೆ, ಪರಸ್ಪರ ಅಸೂಯೆ ಮನೋಭಾವದಿಂದ ನಾವು ಅಧೋಗತಿಗೆ ತೆರಳುತ್ತಿದ್ದೇವೆ ಎಂಬುದನ್ನು ಮರೆಯಬಾರದು ಎಂದು ಸೂಚ್ಯವಾಗಿ ಹೇಳಿದರು.