ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಗೆಲ್ಲಿಸೋಣ: ಶಾಸಕ ಎಆರ್‌ಕೆ

KannadaprabhaNewsNetwork | Published : Mar 24, 2024 1:32 AM

ಸಾರಾಂಶ

ನಾನು ರಾಜಕಾರಣದಲ್ಲಿ ನೇರವಾದಿಯಾಗಿ ಆ ಕೆಲಸವಾಗುವುದಿದ್ದರೆ ಮಾತ್ರ ಆ ಕೆಲಸ ಮಾಡಿಕೊಡುವೆ. ಇಲ್ಲದಿದ್ದರೆ ಆಗಲ್ಲ ಎಂದು ಹೇಳುವ ಕೆಲಸ ಮಾಡುತ್ತಿದ್ದೆನೆ, ನನ್ನ ಕ್ಷೇತ್ರದ ಎಲ್ಲಾ ಕೆಲಸ ಕಾರ್ಯಗಳಿಗೂ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅದ್ಯಕ್ಷ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅಸ್ತು ಎನ್ನುತ್ತಿದ್ದಾರೆ, ಹಾಗಾಗಿಯೇ ಕ್ಷೇತ್ರದ ವಿವಿಧ ಮೂಲಗಳಿಂದ ನೂರು ಕೋಟಿ ಅನುದಾನ ದೊರೆತಂತಾಗಿದೆ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಹೇಳಿದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ ನಾನು ರಾಜಕಾರಣದಲ್ಲಿ ನೇರವಾದಿಯಾಗಿ ಆ ಕೆಲಸವಾಗುವುದಿದ್ದರೆ ಮಾತ್ರ ಆ ಕೆಲಸ ಮಾಡಿಕೊಡುವೆ. ಇಲ್ಲದಿದ್ದರೆ ಆಗಲ್ಲ ಎಂದು ಹೇಳುವ ಕೆಲಸ ಮಾಡುತ್ತಿದ್ದೆನೆ, ನನ್ನ ಕ್ಷೇತ್ರದ ಎಲ್ಲಾ ಕೆಲಸ ಕಾರ್ಯಗಳಿಗೂ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅದ್ಯಕ್ಷ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅಸ್ತು ಎನ್ನುತ್ತಿದ್ದಾರೆ, ಹಾಗಾಗಿಯೇ ಕ್ಷೇತ್ರದ ವಿವಿಧ ಮೂಲಗಳಿಂದ ನೂರು ಕೋಟಿ ಅನುದಾನ ದೊರೆತಂತಾಗಿದೆ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಹೇಳಿದರು. ವಾಸವಿ ಕಲ್ಯಾಣ ಮಂಟಪದಲ್ಲಿ ಅಭಿಮಾನಿಗಳು, ಕಾಂಗ್ರೆಸ್ ಮುಖಂಡರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಯಾರೇ ಪಕ್ಷದ ಅಭ್ಯರ್ಥಿಗಳಾದರೂ ಸ್ಪಂದಿಸಿ ಕೆಲಸ ಮಾಡಿ ಗೆಲುವಿಗೆ ಸಹಕರಿಸೋಣ ಎಂದರು. ನನಗೆ ಸಾಮಾನ್ಯ ಜನರನ್ನು ಅಲೆಸುವುದು ಇಷ್ಟವಿಲ್ಲ, ನಾ ಸೋತಾಗಲೂ ಕುಗ್ಗಿಲ್ಲ, ಗೆದ್ದಾಗಲೂ ಹಿಗ್ಗಿಲ್ಲ, ಪ್ರೀತಿ ವಿಶ್ವಾಸದಿಂದಲೇ ಮತದಾರರು, ಕಾರ್ಯಕರ್ತರ ವಿಶ್ವಾಸವನ್ನು 35 ವರ್ಷಗಳ ರಾಜಕೀಯ ಜೀವನದಲ್ಲಿ ಅಳವಡಿಸಿಕೊಂಡಿದ್ದೆನೆ, ನಾನು ನಿತ್ಯ ಜನರ ನಡುವೆಯೇ ಬೆರೆತಿರುವೆ. ಜನತೆ ನನಗೂ ಅವಕಾಶ ನೀಡೋಣ ಎಂದು ಅನುಕಂಪಹೊಂದಿ 1 ಲಕ್ಷಕ್ಕೂ ಅಧಿಕ ಮತ ನೀಡಿ ಗೆಲುವು ತಂದು ಕೊಟ್ಟಿದ್ದಾರೆ, ಹಾಗಾಗಿ ಇಂದು ನಾನು ಕೊಳ್ಳೇಗಾಲ ಜನರ 10ತಿಂಗಳ ಕೂಸಾಗಿ ಬೆಳೆದಿದ್ದೆನೆ. ನಾನು ಹಸುವಿನಂತೆ ಸಾಧು ವ್ಯಕ್ತಿ. ನಾನೆಂದೂ ಜನ್ಮದಿನಾಚರಣೆ ಆಚರಿಸಿಕೊಂಡವಲ್ಲ, ಮನೆಯಲ್ಲಿ ಸಿಹಿ ತಯಾರಿಸುವವರು ಅದನ್ನೆ ತಿಂದು ಜನ್ಮದಿನದ ಎಂದು ಆಚರಿಸಿಕೊಳ್ಳುತ್ತಿದ್ದೆ. ನನ್ನ ಬಳಿ ಎಲ್ಲಾ ಪಕ್ಷಗಳ ಮುಖಂಡರೂ ನನ್ನ ಬೆಳವಣಿಗೆಯಲ್ಲಿ ಶುಭಕೋರಿದ್ದಾರೆ. ಪಾತ್ರವಹಿಸಿದ್ದಾರೆ ಅವರೆಲ್ಲರನ್ನು ಸ್ಮರಿಸುವೆ ಎಂದರು. ನಾನು ನಿಮ್ಮ ಜನಸೇವಕ, ಜನಸೇವೆಗೆ ನಾನು ಎಂದೆಂದಿಗೂ ಸಿದ್ಧನಾಗಿದ್ದೆನೆ ಎಂದರು. ಈ ವೇಳೆ ತೋಟೇಶ್, ಅನ್ಸರ್, ಮಧುವನಹಳ್ಳಿ ಶಿವಕುಮಾರ್, ಶಾಂತರಾಜು, ಚಿನ್ನಸ್ವಾಮಿ ಮಾಳಿಗೆ, ಸಿಗ್ ಬತ್, ಪೈರೋಜ್, ಅಕ್ಮಲ್ ಪಾಶಾ, ರಮೇಶ್, ರೇಖಾರಮೇಶ್, ಜಿ ಎಂ ಸುರೇಶ್, ರಾಘವೇಂದ್ರ,ದುಗ್ಗಟ್ಟಿ ಮಾದೇಶ, ರೇವಣ್ಣ, ನಂಜುಂಡಸ್ವಾಮಿ ಮತ್ತಿತರರಿದ್ದರು.

Share this article