ಶೋಷಿತರು ಕೀಳರಿಮೆಯಿಂದ ಹೊರಬರಲಿ: ಕೆ. ಸತೀಶ

KannadaprabhaNewsNetwork |  
Published : Aug 08, 2026, 02:30 AM IST
ಕಾರ್ಯಕ್ರಮವನ್ನು ವಿಧಾನಪರಿಷತ್ ಸದಸ್ಯ ಎಫ್.ಎಚ್. ಜಕ್ಕಪ್ಪನವರ ಉದ್ಘಾಟಿಸಿದರು. | Kannada Prabha

ಸಾರಾಂಶ

ಪ್ರಜಾಪ್ರಭುತ್ವದಲ್ಲಿ ಪಂಚಾಯತ ರಾಜ್ ಪ್ರತಿಯೊಬ್ಬ ವ್ಯಕ್ತಿಗೆ ಸಮಾನತೆಯನ್ನು, ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಬಲತೆಯನ್ನು ಒದಗಿಸುವ ಮಾರ್ಗವಾಗಿದೆ.

ಗದಗ: ಪಂಚಾಯತ್ ರಾಜ್ ಆಡಳಿತವು ಸರ್ವ ಜನಾಂಗ ಒಳಗೊಂಡಂತೆ ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಥಳೀಯ ಸಂಸ್ಥೆ ಆಗಿದ್ದು, ಪಂಚಾಯತ್ ರಾಜ್ ಆಡಳಿತ ಸಾಮಾಜಿಕ ಸಮಾನತೆಯ ಬಾಗಿಲು ಇದ್ದಂತೆ ಎಂದು ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ಅಧ್ಯಕ್ಷ ಕೆ. ಸತೀಶ ಹೇಳಿದರು.

ನಗರದ ಅಂಬೇಡ್ಕರ ಭವನದಲ್ಲಿ ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಸಮಿತಿ ವತಿಯಿಂದ ನಡೆದ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ದಲಿತರ ಸಬಲೀಕರಣ ಆಯಾಮಗಳ ಕುರಿತು ವಿಚಾರಸಂಕಿರಣ, ಸಾಧಕರಿಗೆ ಸನ್ಮಾನ ಹಾಗೂ ದಲಿತ ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿದರು.

ಪ್ರಜಾಪ್ರಭುತ್ವದಲ್ಲಿ ಪಂಚಾಯತ ರಾಜ್ ಪ್ರತಿಯೊಬ್ಬ ವ್ಯಕ್ತಿಗೆ ಸಮಾನತೆಯನ್ನು, ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಬಲತೆಯನ್ನು ಒದಗಿಸುವ ಮಾರ್ಗವಾಗಿದೆ. ದಲಿತರ ಅಭಿವೃದ್ಧಿಗೆ ಪಂಚಾಯಿತಿ ಮಟ್ಟದಲ್ಲಿ ಎಸ್‌ಸಿ, ಎಸ್‌ಟಿ ಗ್ರಾಮ ಸಭೆ ಆಯೋಜನೆ ಮಾಡುವುದು ಅವಶ್ಯ. ಅಲ್ಲದೇ ಶೋಷಿತ ಜನಾಂಗ ಕೀಳರಿಮೆಯಿಂದ ಹೊರಬಂದು ಮುಖ್ಯವಾಹಿನಿಯಲ್ಲಿ ಪಾಲ್ಗೊಳ್ಳುವಂತಾದಾಗ ಮಾತ್ರ ಸಾಮಾಜಿಕ ಬದಲಾವಣೆ ಸಾಧ್ಯ ಎಂದರು.

ವಿಧಾನಪರಿಷತ್ ಸದಸ್ಯ ಎಫ್.ಎಚ್. ಜಕ್ಕಪ್ಪನವರ ಮಾತನಾಡಿ, ಶೋಷಿತ ಸಮುದಾಯದ ವಿಮೋಚನೆ ಶಿಕ್ಷಣದಲ್ಲಿ ಅಡಗಿದೆ. ಪ್ರತಿಯೊಬ್ಬ ಶೋಷಿತನು ಶಿಕ್ಷಣಕ್ಕೆ ಮಹತ್ವವನ್ನು ನೀಡುವಂತಾಗಬೇಕು. ಹಾಗಾದಾಗ ಮಾತ್ರ ಶೋಷಣೆ ರಹಿತ ಸಮಾಜ ಕಟ್ಟಲು ಸಾಧ್ಯ. ಪಂಚಾಯಿತಿಯಲ್ಲಿರುವ ಯೋಜನೆಗಳನ್ನು ಪಡೆಯುವುದರ ಜತೆಗೆ ಯೋಜನೆಗಳ ಫಲಾನುಭವಿಗಳಾಗದೆ ಪಾಲುದಾರರಾಗಬೇಕು. ಆರ್ಥಿಕ ಭದ್ರತೆಗೆ ಪೂರಕವಾಗುವಂತಹ ಯೋಜನೆಗಳ ಕಡೆಗೆ ಗಮನ ಹರಿಸಲು ಸ್ವಾವಲಂಬಿ ಜೀವನ ನಡೆಸಿ ಎಂದರು.

ರಾಜ್ಯ ಸಂಚಾಲಕ ಎಂ. ಗುರುಮೂರ್ತಿ ಶಿವಮೊಗ್ಗ, ರಾಜ್ಯ ಸಂಘಟನಾ ಸಂಚಾಲಕ ಹನಮಂತಪ್ಪ ಕಾಕರಗಲ್ಲ ಹಾಗೂ ರಾಜ್ಯ ಸಂಘಟನಾ ಸಂಚಾಲಕ ಎಸ್.ಎನ್. ಬಳ್ಳಾರಿ ಮಾತನಾಡಿದರು. ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಸಾಧಕರನ್ನು ಗೌರವಿಸಲಾಯಿತು.

ಜಿಲ್ಲಾ ಸಂಘಟನಾ ಸಂಚಾಲಕ ಸತೀಶ ಹೂಲಿ, ತಾಲೂಕು ಸಂಚಾಲಕ ವಿನಾಯಕ ಬಳ್ಳಾರಿ, ಅಕ್ಬರಸಾಬ ಬಬರ್ಚಿ, ಸಿ.ಆರ್. ಮುಂಡರಗಿ, ನಂದಾ ಹಣಬರಟ್ಟಿ, ಎಚ್.ಎಸ್. ಜನಗಿ, ಪ್ರಕಾಶ ಹೊಸಳ್ಳಿ, ಶರಣು ಪೂಜಾರ, ದುರಗಪ್ಪ ಎಲ್.ಎಚ್., ವೀರಪ್ಪ ಕೋಟ್ನಿಕಲ್, ಕೆಂಚಪ್ಪ ಹಾದಿಮನಿ, ಮಂಜು ಬುರಡಿ, ಸಂಗಪ್ಪ ಹೊಸಮನಿ, ಅನಿಲ ಸಿದ್ದಮ್ಮನಹಳ್ಳಿ, ಸುಶೀಲಾ ಚಲವಾದಿ, ಚಂದ್ರು ಮೇಲಿನಮನಿ, ಪರಶುರಾಮ ಪೂಜಾರ, ಭಾಷಾಸಾಬ ಮಲ್ಲಸಮುದ್ರ, ಆನಂದ ಸಿಂಗಾಡಿ, ಕೃಷ್ಣಾ ಪೂಜಾರ, ಸೋಮು ನಾಗರಾಜ, ದತ್ತು ಜೋಗಣ್ಣವರ, ನಾಗರಾಜ ನಡುವಿನಕೇರಿ, ಗುರುನಾಥ ಕೆಂಗಾರಕರ, ಕೆಂಚಪ್ಪ ಪೂಜಾರ, ಮುತ್ತು ಪೂಜಾರ ಮುಂತಾದವರು ಇದ್ದರು.

ಶರೀಫ ಬಿಳೆಯಲಿ, ಮುತ್ತು ಬಿಳೆಯಲಿ ಕ್ರಾಂತಿಗೀತೆ ಹಾಡಿದರು. ಬಸವರಾಜ ಕಡೇಮನಿ ಸ್ವಾಗತಿಸಿದರು. ಮುತ್ತು ಮಾದರ ನಿರೂಪಿಸಿದರು. ನಾಗರಾಜ ಗುತ್ತಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

3 ವರ್ಷದಿಂದ ಶುದ್ಧ ಕುಡಿವ ನೀರಿನ ಘಟಕ ಬಂದ್
ಜೀವಭಯದಲ್ಲೇ ಬಸ್‌ನಲ್ಲಿ ವಿದ್ಯಾರ್ಥಿಗಳ ಪ್ರಯಾಣ