ಅರಣ್ಯ ಉಳಿಸಿ ಬೆಳೆಸುವ ಕಾರ್ಯವಾಗಲಿ

KannadaprabhaNewsNetwork | Published : Jun 7, 2024 12:30 AM

ಸಾರಾಂಶ

ಇಂದು ಅರಣ್ಯ ಉಳಿಸಿ ಬೆಳೆಸುವ ಕಾರ್ಯವಾಗಬೇಕು ಎಂದು ಸರಕಾರಿ ವೀಕ್ಷಣಾಲಯದ ಪರಿವೀಕ್ಷಣಾಧಿಕಾರಿ ರಮೇಶ ಕಡಪಟ್ಟಿ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಇಂದು ಅರಣ್ಯ ಉಳಿಸಿ ಬೆಳೆಸುವ ಕಾರ್ಯವಾಗಬೇಕು ಎಂದು ಸರಕಾರಿ ವೀಕ್ಷಣಾಲಯದ ಪರಿವೀಕ್ಷಣಾಧಿಕಾರಿ ರಮೇಶ ಕಡಪಟ್ಟಿ ಹೇಳಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾ ಪೊಲೀಸ್ ಇಲಾಖೆ ಮತ್ತು ಬಿ.ಎಲ್.ಡಿ.ಇ. ಸಂಸ್ಥೆ ಸಂಯುಕ್ತಾಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ನಿಮಿತ್ತವಾಗಿ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ ಅಂಬಲಿ ಮಾತನಾಡಿ, ಬಸವಾದಿ ಶರಣರು ಪರಮ ಪೂಜ್ಯ, ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರು ಹುಟ್ಟಿದ ನಾಡಿನಲ್ಲಿ ವಿಶ್ವ ಪರಿಸರದ ದಿನದಂದು ಸಸಿ ನೆಡುವುದರ ಜೊತೆಗೆ ಪರಿಸರ ಉಳಿಸಿ ಬೆಳೆಸುವುದು ಮಹತ್ತರ ಜವಾಬ್ದಾರಿ ನಮ್ಮದಾಗಿದೆ ಎಂದು ಹೇಳಿದರು.

ಪರಿಸರ ದಿನದಂದು ನಾವು ಎಲ್ಲರೂ ಪ್ರಜ್ಞಾವಂತ ನಾಗರಿಕರಾಗಿ ಮನೆಗೊಂದು ಮರ ಬೆಳೆಸೋಣ ಮತ್ತು ನಮ್ಮ ಪೂರ್ವಜರು, ಹಿರಿಯರು ಹಾಕಿ ಕೊಟ್ಟ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಉಳಿಸುವುದರಿಂದ ಪರಿಸರ ಉಳಿಯಲು ನಾವು ಶ್ರಮಿಸೋಣ ಎಂದರು.

ಮುಖ್ಯ ಅತಿಥಿ ಡಿ.ವೈ.ಎಸ್.ಪಿ. ಬಸವರಾಜ ಯಲಿಗಾರ ಮಾತನಾಡಿ, ಪ್ಲಾಸ್ಟಿಕ್ ಮುಕ್ತ ಪರಿಸರ ನಮ್ಮದಾಗಿರಲಿ. ಒಬ್ಬ ಮನುಷ್ಯ ಜೀವನದಲ್ಲಿ ಸಾವಿರ ಸಸಿಗಳನ್ನು ನೆಟ್ಟು ಅವು ಮರವಾಗಿ ಬೆಳೆಯುವಂತೆ ನೀಗಾ ವಹಿಸೋಣ ಎಂದು ಕರೆ ನೀಡಿದರು.

ಸರ್ಕಾರಿ ವೀಕ್ಷಣಾಲಯದ ಆಪ್ತ ಸಮಾಲೋಚಕ ಶ್ರೀಕಾಂತ ಬಿರಾದಾರ ಮಾತನಾಡಿದರು.ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದೀಪಾಕ್ಷಿ ಜಾನಕಿ ಮಾತನಾಡಿದರು. ಬಾಲ ನ್ಯಾಯ ಮಂಡಳಿ ಸದಸ್ಯ ರಮೇಶ ಕುಲಕರ್ಣಿ, ಸಿಪಿಐ ಪರಮೇಶ್ವರ ಕವಟಗಿ, ಎಎಸ್‌ಐ ಶಿವಾನಂದ ಕಟ್ಟಿಮನಿ, ಸುನೀಲ ಕಳಸನ್ನವರ, ರಾಜೇಶ ಉಕ್ಕಲಿ, ವಾಣಿಶ್ರೀ ನಿಂಬಾಳ, ವಿಜಯಕುಮಾರ ತಳವಾರ, ಶೋಭಾ ಕಾಂಬಳೆ, ಸಾವಿತ್ರಿ ಹಿಟ್ನಳ್ಳಿ, ಸರಸ್ವತಿ ನುಚ್ಚನ್ನವರ, ಕುಮಾರ ದೇವರಗುಡಿ, ಲಕ್ಷ್ಮಣ ಭಜಂತ್ರಿ, ಚಂದ್ರಕಾಂತ ವಾಡಕರ, ಶ್ರೀಶೈಲ ಕಾಂಬಳೆ, ಎನ್.ಎಸ್.ಎಸ್ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.

Share this article