ಯಾವುದೇ ಸಂಸ್ಥೆಗೆ ವೈಯುಕ್ತಿಕ ಲಾಭಕ್ಕಿಂತ ಸಮಾಜದ ಹಿತ ಮುಖ್ಯವಾಗಬೇಕು. ಗುರಿ ಮತ್ತು ದಾರಿಯ ಬಗ್ಗೆ ಸ್ಪಷ್ಟವಾದ ಪರಿಕಲ್ಪನೆ ಇದ್ದಾಗ ಯಶಸ್ಸು ಸಾಧ್ಯ.
ಜಿಎಸ್‌ಬಿ ಕೋಆಪರೇಟಿವ್ ಕ್ರೆಡಿಟ್ ಬ್ಯಾಂಕ್ ರಜತ ಮಹೋತ್ಸವ ಉದ್ಘಾಟನೆ
ಕನ್ನಡಪ್ರಭ ವಾರ್ತೆ ಸಿದ್ದಾಪುರಯಾವುದೇ ಸಂಸ್ಥೆಗೆ ವೈಯಕ್ತಿಕ ಲಾಭಕ್ಕಿಂತ ಸಮಾಜದ ಹಿತ ಮುಖ್ಯವಾಗಬೇಕು. ಗುರಿ ಮತ್ತು ದಾರಿಯ ಬಗ್ಗೆ ಸ್ಪಷ್ಟವಾದ ಪರಿಕಲ್ಪನೆ ಇದ್ದಾಗ ಯಶಸ್ಸು ಸಾಧ್ಯ. ಕಳೆದ ೨೫ ವರ್ಷಗಳ ಕಾಲ ಇಂಥ ಪರಿಕಲ್ಪನೆ ಹಾಗೂ ಸಮಾಜದ ಒಳಿತಿಗೆ ಮುಂದಾಗಿರುವ ಜಿಎಸ್‌ಬಿ ಕೋ ಆಪರೇಟಿವ್ ಕ್ರೆಡಿಟ್ ಬ್ಯಾಂಕ್ ಇನ್ನಷ್ಟು ಯಶಸ್ಸು ಪಡೆಯುವಂತಾಗಬೇಕು ಎಂದು ಶಿರಳಗಿ ಶ್ರೀ ಚೈತನ್ಯ ರಾಜಾರಾಮ ಕ್ಷೇತ್ರದ ಬ್ರಹ್ಮಾನಂದ ಭಾರತೀ ಶ್ರೀ ಹೇಳಿದರು.ಪಟ್ಟಣದ ಶ್ರೀ ವಿದ್ಯಾಧಿರಾಜ ಕಲ್ಯಾಣಮಂಟಪದಲ್ಲಿ ಆಯೋಜಿಸಿದ ಜಿಎಸ್‌ಬಿ ಕೋಆಪರೇಟಿವ್ ಕ್ರೆಡಿಟ್ ಬ್ಯಾಂಕ್ ರಜತ ಮಹೋತ್ಸವ ಉದ್ಘಾಟಿಸಿ ಆಶೀರ್ವಚನ ನೀಡಿದರು. ಬ್ಯಾಂಕ್‌ನ ಸಂಸ್ಥಾಪಕರಾದ ಹಲವು ಹಿರಿಯರ ನಿರಂತರ ಪರಿಶ್ರಮ, ಉತ್ತಮ ಉದ್ದೇಶಗಳಿಂದ ಬ್ಯಾಂಕ್ ಉತ್ತಮವಾಗಿ ನಡೆದುಕೊಂಡು ಬಂದಿದೆ. ಈಗಿನ ಆಡಳಿತ ಮಂಡಳಿಯೂ ಅದೇ ರೀತಿಯಲ್ಲಿ ಸಾಗುತ್ತಿದೆ. ಕಷ್ಟಪಡದೇ ಯಶಸ್ಸು ದೊರಕುವುದಿಲ್ಲ. ಏಳುಬೀಳುಗಳು ಸಹಜ. ಸೋತರೂ ಧೃತಿಗೆಡದೇ ಮುಂದೆ ಬರಲು ಎದೆಗಾರಿಕೆ ಬೇಕು. ಗ್ರಾಹಕರನ್ನು ಸಹನೆ, ಸೌಜನ್ಯ, ಗೌರವಗಳಿಂದ ಕಾಣುವುದು ಸಂಸ್ಥೆಯ ಅಭಿವೃದ್ಧಿಗೆ ಕಾರಣವಾಗುತ್ತದೆ. ಭಗವಂತನ ರೂಪವಾದ ಸಮಾಜಕ್ಕೆ ಒಳಿತಾಗಬೇಕು ಎನ್ನುವ ಭಾವ ಇರಬೇಕು. ಉತ್ತರ ಕನ್ನಡ ಜಿಲ್ಲೆ ಸಹಕಾರಿ ಕ್ಷೇತ್ರದಲ್ಲಿ ಹೆಸರಾದ ಜಿಲ್ಲೆ. ಆದರೆ ಕೆಲವು ಸಹಕಾರಿ ಸಂಘಗಳ ವ್ಯವಹಾರಗಳಿಂದ ಅಪಕೀರ್ತಿಗೆ ಒಳಗಾಗುವಂತಾಗಿದೆ. ಮುಂದಿನ ದಿನಗಳಲ್ಲಿ ಆ ರೀತಿಯ ವ್ಯವಹಾರಗಳು ನಡೆಯದೇ ಮೊದಲಿನ ಹೆಸರು ಉಳಿಯಬೇಕು. ಈ ಬ್ಯಾಂಕ್ ಕೂಡ ಈ ಹಿಂದೆ ನಡೆದುಕೊಂಡು ಬಂದ ಉತ್ತಮ ಮಾರ್ಗದಲ್ಲಿ ಸಾಗಿ ಹೆಚ್ಚಿನ ಅಭಿವೃದ್ಧಿಯನ್ನು ಹೊಂದಲಿ ಎಂದು ಆಶಿಸಿದರು.ಶಿರಾಲಿಯ ಮಾರುತಿ ಸಹಕಾರಿ ಪತ್ತಿನ ಸಂಘದ ಅಧ್ಯಕ್ಷ ಅಶೋಕ ಎಸ್.ಪೈ ಹೆಗ್ಗಾರ, ಸಹಕಾರ ರತ್ನ ಪುರಸ್ಕೃತ, ತೀರ್ಥಹಳ್ಳಿಯ ಸರಸ್ವತಿ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಬಾಳೇಬೈಲು ರಾಘವೇಂದ್ರ ನಾಯಕ, ಶಿರಸಿಯ ಸಹಕಾರಿ ಸಂಘಗಳ ಸಹಾಯಕ ನಿಬಂಧಕ ಅಜಿತ ಶಿರಹಟ್ಟಿ, ಶಿರಸಿಯ ಲೆಕ್ಕ ಪರಿಶೋಧಕ ಮಂಜುನಾಥ ಎಸ್.ಶೆಟ್ಟಿ ಮಾತನಾಡಿದರು.ಜಿಎಸ್‌ಬಿ ಕೋಆಪರೇಟಿವ್ ಕ್ರೆಡಿಟ್ ಬ್ಯಾಂಕಿನ ಅಧ್ಯಕ್ಷ ನಾಗೇಶ ದಾಮೋದರ ಹುಲೇಕಲ್ ಅಧ್ಯಕ್ಷತೆ ವಹಿಸಿದ್ದರು.ಪಟ್ಟಣದ ಶ್ರೀ ಲಕ್ಷ್ಮೀ ವೆಂಕಟೇಶ ದೇವಾಲಯದ ಅಧ್ಯಕ್ಷ ಕೆ.ವಿ. ಮಹಾಲೆ, ಬ್ಯಾಂಕಿನ ಉಪಾಧ್ಯಕ್ಷೆ ಸವಿತಾ ಎನ್.ಕಾಮತ, ನಿರ್ದೇಶಕರಾದ ಸುರೇಶ ಎಲ್.ಪೈ, ಮರ್ತು ಆರ್.ನಾಯಕ ಬೆಂಗ್ರೇ, ವಾಮನ ಎಸ್.ಪೈ, ಕೃಷ್ಣಾನಂದ ಎನ್.ದೇವನಳ್ಳಿ, ವಿ.ಎಸ್. ಶೇಟ, ಮಿಥುನ ವಿ.ಶೇಟ, ಸ್ವಾತಿ ಎಸ್.ನಾಯಕ ಬೇಂಗ್ರೆ ಮಾದೇವಿ ಸಿ. ಹರಿಜನ, ವ್ಯವಸ್ಥಾಪಕ ಯೋಗೀಶ ಕಾಮತ್ ಉಪಸ್ಥಿತರಿದ್ದರು.ಬ್ಯಾಂಕ್ ನಿರ್ದೇಶಕ ಆರ್.ಎಂ. ಪಾಟೀಲ ಸ್ವಾಗತಿಸಿದರು. ಇನ್ನೊರ್ವ ನಿರ್ದೇಶಕ ಆರ್.ಜಿ. ಕೊಂಡ್ಲಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಿವೃತ್ತ ಪ್ರಾಚಾರ್ಯ ಸುರೇಶ ಗುತ್ತೀಕರ ನಿರೂಪಿಸಿದರು. ಐಶ್ವರ್ಯ, ತೇಜಾ, ಗ್ರೀಷ್ಮ ಪ್ರಾರ್ಥಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.