ಕನ್ನಡಪ್ರಭ ವಾರ್ತೆ ಬಸವಕಲ್ಯಾಣ
ಅನುಭವ ಮಂಟಪದ ಸಮೀಪವೇ ವಚನ ವಿಶ್ವವಿದ್ಯಾಲಯಕ್ಕೆ ರಾಜ್ಯ ಸರ್ಕಾರ 200 ಏಕರೆ ಭೂಮಿ ಖರೀದಿಸಬೇಕು ಎಂದು ಅನುಭವ ಮಂಟಪ ಬಸವಕಲ್ಯಾಣ ಅಧ್ಯಕ್ಷರಾದ ಡಾ.ಬಸವಲಿಂಗ ಪಟ್ಟದ್ದೇವರು ಆಗ್ರಹಿಸಿದರು.ಅವರು ಭಾನುವಾರ ತಾಲೂಕಿನ ನಿರ್ಗುಡಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಬಸವಣ್ಣನವರ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿ, ಸರ್ಕಾರ 200 ಎಕರೆ ಜಾಗ ಸ್ವಾಧೀನಪಡಿಸಿಕೊಂಡು ವಚನ ವಿಶ್ವವಿದ್ಯಾಲಯಕ್ಕೆ ಮೀಸಲಿಡಬೇಕು. ತ್ರಿಪುರಾಂತ ಕೆರೆ ದಂಡೆಯಲ್ಲಿ ₹620 ಕೋಟಿ ವೆಚ್ಚದ ಅನುಭವ ಮಂಟಪಕ್ಕೆ ನೂರು ಎಕರೆ ಜಮೀನು ಪಡೆದಿದ್ದು, ಬಸವಾದಿ ಶರಣರ ತತ್ವ ಜಗತ್ತಿಗೆ ಸಾರಲು ವಚನ ವಿಶ್ವವಿದ್ಯಾಲಯ ಅಗತ್ಯವಿದೆ. ಜಿಲ್ಲೆಯ ಎಲ್ಲಾ ರಾಜಕೀಯ ಮುತ್ಸಧಿಗಳು ಸಮಾಜ ಚಿಂತಕರು ಸಹಕರಿಸಬೇಕು ಎಂದರು.
ತಡೋಳಾ ರಾಜೇಶ್ವರ ಶಿವಾಚಾರ್ಯರು ಮಾತನಾಡಿ, ಎಲ್ಲ ಜನಾಂಗದವರು ಕೂಡಿಕೊಂಡು ಗ್ರಾಮದಲ್ಲಿ ಬಸವಣ್ಣನವರ ಪುತ್ಥಳಿ ಪ್ರತಿಷ್ಠಾಪಿಸಿದ್ದು ನನಗೆ ಸಂತಸ ತಂದಿದೆ. ಇಲ್ಲಿ ಬಸವಮಯ ವಾತಾವರಣ ಸೃಷ್ಟಿಗೆ ಬಸವಪ್ರಭು ಸ್ವಾಮೀಜಿಯವರೆ ಕಾರಣರಾಗಿದ್ದಾರೆ ಎಂದು ನುಡಿದರು.ಮಾಜಿ ಸಚಿವ ರಾಜಶೇಖರ ಪಾಟೀಲ ಮಾತನಾಡಿ, ಬಸವ ಪುತ್ಥಳಿ ನಿರ್ಮಾಣಕ್ಕೆ ₹5 ಲಕ್ಷ ನೀಡಿದ್ದೇನೆ. ಚರಂಡಿ, ರಸ್ತೆ ನಿರ್ಮಿಸುವುದಕ್ಕೂ ಶೀಘ್ರವೇ ಅನುದಾನ ಒದಗಿಸಲಾಗುವುದು. ಕೆಲವರು ಎಲ್ಲ ವಿಷಯಗಳಲ್ಲೂ ರಾಜಕೀಯ ಮಾಡುತ್ತಿದ್ದು ಅದನ್ನು ಇನ್ನು ಮುಂದೆ ಸಹಿಸುವುದಿಲ್ಲ ಎಂದರು.
ಗುಣತೀರ್ಥವಾಡಿಯ ಕಲ್ಯಾಣ ಮಹಾಮನೆಯ ಬಸವಪ್ರಭು ಸ್ವಾಮೀಜಿ ಮಾತನಾಡಿ ಗ್ರಾಮದ ಯುವಕರು ಬಸವ ಪುತ್ಥಳಿ ಸ್ಥಾಪಿಸಿದಂತೆಯೇ ತತ್ವದ ಪಾಲನೆಗೂ ಆಸಕ್ತಿ ತೋರಬೇಕು ಎಂದರು.ಬಸವಕಲ್ಯಾಣ ಶಾಸಕ ಶರಣು ಸಲಗರ, ಹುಲಸೂರ ಶಿವಾನಂದ ಸ್ವಾಮೀಜಿ, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಬಸವರಾಜ ಧನ್ನೂರ, ಮುಖಂಡ ಯುವರಾಜ ಪಾಟೀಲ, ಸಂಗಮೇಶ ತೊಗರಖೇಡೆ, ನವಲಿಂಗಕುಮಾರ ಪಾಟೀಲ ಮಾತನಾಡಿದರು.
ಬಸವ ಮಹಾಮನೆಯ ಸಿದ್ದರಾಮೇಶ್ವರ ಸ್ವಾಮೀಜಿ, ಸಸ್ತಾಪುರ ಸದಾನಂದ ಸ್ವಾಮೀ, , ಮಂಠಾಳ ಅಭಿನವ ಚನ್ನಬಸವ ಸ್ವಾಮೀ, ಸಾಯಗಾಂವ ಶಿವಾನಂದ ಸ್ವಾಮೀ, ತೆರಿಗೆ ಇಲಾಖೆ ಸಹಾಯಕ ಆಯುಕ್ತ ಮಹೇಶ ಪಾಟೀಲ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಂಧ್ಯಾ ಪಾಟೀಲ, ಗುರುನಾಥ ಮೂಲಗೆ, ಸಿದ್ದು ಬಿರಾದಾರ, ಉಮಾಕಾಂತ ಮೂಲಗೆ, ರಾಜಕುಮಾರ ಧನಮಲ್ಲೆ, ಬಸವರಾಜ ಮೂಲಗೆ, ಪಿಕೆಪಿಎಸ್ ಅಧ್ಯಕ್ಷ ಅಶೋಕ ಖೇಲಜೆ, ಶಶಿಕಾಂತ ದುರ್ಗೆ, ಸದಾನಂದ ಹಳ್ಳೆ, ಬಂಡೆಪ್ಪ ಮಜಗೆ, ವೀರಣ್ಣ ಪಾಟೀಲ, ದಿಲೀಪ ಸೂರ್ಯವಂಶಿ, ಸೋಮನಾಥ ಸೇರಿದಂತೆ ಅನೇಕ ಬಸವ ಭಕ್ತರು ಪಾಲ್ಗೊಂಡಿದ್ದರು.