ದ್ರೌಪತಾಂಬ ಜಯಂತಿ ಸರ್ಕಾರ ಆಚರಿಸಲಿ

KannadaprabhaNewsNetwork |  
Published : Apr 17, 2025, 12:07 AM IST
೧೫ಕೆಎಲ್‌ಆರ್-೮ಕೋಲಾರದ ಡಿಸಿ ಕಚೇರಿ ಎದುರು ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಜಿಲ್ಲಾ ವಹ್ನಿಕುಲ ತಿಗಳ ಸಮುದಾಯದಿಂದ ಡಿಸಿ ಕಚೇರಿ ಪ್ರತಿಭಟನೆ ನಡೆಸುತ್ತಿರುವುದು. | Kannada Prabha

ಸಾರಾಂಶ

ಸಾವಿರಾರು ವರ್ಷಗಳಿಂದ ಶ್ರೀ ದ್ರೌಪತಾಂಭ ದೇವಾಲಯಗಳಲ್ಲಿ ಮಾತ್ರ ಕರಗ ಶಕ್ತ್ಯೋತ್ಸವವನ್ನು ಅತ್ಯಂತ ಭಕ್ತಿ ಶ್ರದ್ಧೆಗಳಿಂದ ಆಚರಣೆ ಮಾಡಲಾಗುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಇತರೆ ಸಮುದಾಯದವರು ಜಾತ್ರೆ, ಉತ್ಸವಗಳ ಸಂದರ್ಭಗಳಲ್ಲಿ ಯಾವುದೇ ಧಾರ್ಮಿಕ ಶಿಷ್ಠಾಚಾರಗಳಿಲ್ಲದೆ ಮನರಂಜನೆಗಾಗಿ ಆಚರಿಸುವುದು ಸರಿಯಲ್ಲ.

ಕನ್ನಡಪ್ರಭ ವಾರ್ತೆ ಕೋಲಾರಇತರೆ ಜನಾಂಗದವರು ಆಚರಿಸುವ ಕರಗ ಶಕ್ತ್ಯೋತ್ಸವ ನಿಲ್ಲಿಸಬೇಕು, ದ್ರೌಪತಾಂಬ ಜಯಂತಿ ಸರ್ಕಾರದಿಂದ ಆಚರಿಸಬೇಕು, ಜಾತಿಗಣತಿ ವರದಿ ಮತ್ತೊಮ್ಮೆ ಪರಿಶೀಲಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ವಹ್ನಿಕುಲ ತಿಗಳ ಸಮುದಾಯದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಸಾವಿರಾರು ವರ್ಷಗಳಿಂದ ಶ್ರೀ ದ್ರೌಪತಾಂಭ ದೇವಾಲಯಗಳಲ್ಲಿ ಮಾತ್ರ ಕರಗ ಶಕ್ತ್ಯೋತ್ಸವವನ್ನು ಅತ್ಯಂತ ಭಕ್ತಿ ಶ್ರದ್ಧೆಗಳಿಂದ ಆಚರಣೆ ಮಾಡಲಾಗುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಇತರೆ ಸಮುದಾಯದವರು ಜಾತ್ರೆ, ಉತ್ಸವಗಳ ಸಂದರ್ಭಗಳಲ್ಲಿ ಯಾವುದೇ ಧಾರ್ಮಿಕ ಶಿಷ್ಠಾಚಾರಗಳಿಲ್ಲದೆ ಕೇವಲ ಮನರಂಜನೆಗಾಗಿ ಆಚರಿಸುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಧಾರ್ಮಿಕ ಭಾವನೆಗಳಿಗೆ ಧಕ್ಕೆ

ನಮ್ಮ ಸಂಪ್ರದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುತ್ತಿರುವ ಕುರಿತು ಸರ್ಕಾರಕ್ಕೆ ಹಾಗೂ ಜಿಲ್ಲಾಡಳಿತಕ್ಕೆ ಹಲವಾರು ಬಾರಿ ಮನವಿ ಮಾಡಿದರು ಯಾವುದೇ ಕ್ರಮ ಕೈಗೊಂಡಿಲ್ಲ. ಪುರಾತನ ಕಾಲದಿಂದಲೂ ವಕ್ನಿಕುಲ ಕ್ಷತ್ರಿಯ ಜನಾಂಗದವರು ಧರ್ಮರಾಯಸ್ವಾಮಿ ದೇವಾಲಯಗಳಲ್ಲಿ ಮಾತ್ರ ಕರಗ ಶಕ್ರೋತ್ಸವ ವಹ್ನಿಕುಲ ಕ್ಷತ್ರಿಯ ಜನಾಂಗದ ಆಚಾರ-ವಿಚಾರ ನೀತಿ ಕುಲದೇವತೆಯ ಘನತೆ ಗೌರವ ಕಾಪಾಡಿಕೊಂಡು ಬರಲಾಗಿದೆ. ದ್ರೌಪತಾಂಭ ಜಯಂತಿ ಸರ್ಕಾರದಿಂದಲೇ ಆಚರಿಸಲು ಕ್ರಮ ಕೈಗೊಳ್ಳಬೇಕು ಎಂದು ಸಮುದಾಯದ ಮುಖಂಡ ಎಲ್.ಎ. ಮಂಜುನಾಥ್ ಅಸಮಾಧಾನ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ವಹ್ನಿಕುಲ ತಿಗಳ ಸಮನ್ವಯ ಸಮಿತಿ ಜಿಲ್ಲಾಧ್ಯಕ್ಷ ವೆಂಕಟೇಶ್, ಗೌರವಾಧ್ಯಕ್ಷ ಪಲ್ಲವಿ ಮಣಿ, ಕಾರ್ಯದರ್ಶಿ ಫಲ್ಗುಣ, ಸಮುದಾಯದ ಮುಖಂಡರಾದ ವೆಂಕಟೇಶಪ್ಪ, ಎಚ್.ಆರ್ ನಾರಾಯಣಪ್ಪ, ಬಿ.ಎಂ ಶ್ರೀನಿವಾಸ್, ಜಿ. ಶ್ರೀನಿವಾಸ್, ವಿ.ಪಿ ಪ್ರಕಾಶ್, ಮೋಹನ್ ಬಾಬು, ಮುನಿಯಪ್ಪ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು