ಕನ್ನಡಪ್ರಭ ವಾರ್ತೆ ಹೊಸಕೋಟೆ
ನಗರದ ಅಂಬೇಡ್ಕರ್ ಭವನದಲ್ಲಿ ಭೀಮ ಕೋರೆಗಾಂವ್ ವಿಜಯೋತ್ಸವ ಅಂಗವಾಗಿ ಆಯೋಜಿಸಿದ್ದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭೀಮ ಕೋರೆಗಾಂವ್ ಯುದ್ಧ ಧಮನಿತ ವರ್ಗಗಳ ಸ್ವಾಭಿಮಾನ, ಸಮಾನತೆ, ನ್ಯಾಯಕ್ಕಾಗಿ ನಡೆದ ಯುದ್ಧವಾಗಿತ್ತು. ಪೇಶ್ವೆಗಳ ಆಡಳಿತದಲ್ಲಿದ್ದ ಜಾತಿ, ಅಸೃಶ್ಯತೆ, ಮೇಲು- ಕೀಳುಗಳ ವಿರುದ್ಧ ಸೆಟೆದು ನಿಂತು ಮಾನವೀಯ ಮೌಲ್ಯಗಳನ್ನು ಪಡೆದುಕೊಳ್ಳಲು ಹಂಬಲಿಸಿದ ಮಹರ್ ಸೈನಿಕರ ಧೈರ್ಯ, ಸಾಹಸಕ್ಕೆ ಹಿಡಿದ ಕೈಗನ್ನಡಿಯಾಗಿತ್ತು. ಇತಿಹಾಸ ಸೃಷ್ಟಿಸಿದ ಈ ಯುದ್ಧದ ವಿಜಯೋತ್ಸವ ದಿನವನ್ನು ಸರ್ಕಾರದಿಂದ ಮುಂದಿನ ದಿನಗಳಲ್ಲಿ ಆಚರಿಸಬೇಕು. ಇದರ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಸಹ ಆಗಬೇಕು ಎಂದರು.ಕರ್ನಾಟಕ ಅಹಿಂದ ರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಕಿರಣ್ ಮಾತನಾಡಿ, ಕೋರೆಗಾಂವ್ ವಿಜಯೋತ್ಸವದ ಮೂಲಕ ತಾಲೂಕಿನಲ್ಲಿ ದಲಿತರೆಲ್ಲಾ ಒಗ್ಗಟ್ಟಾಗಿದ್ದೇವೆ ಎಂಬುದನ್ನು ಸಾಬೀತು ಮಾಡಿದ್ದೇವೆ. 2026ರಲ್ಲಿ ಬೃಹತ್ ಕಾರ್ಯಕ್ರಮ ಮಾಡುವ ಮೂಲಕ ಎಡ ಮತ್ತು ಬಲ ಪಂಗಡ ಕೂಡ ಒಗ್ಗಟ್ಟಾಗಿದ್ದೇವೆ ಎಂದು ಇತಿಹಾಸ ಸೃಷ್ಟಿಸುವ ಕೆಲಸ ಮಾಡುತ್ತೇವೆ ಎಂದರು.
ಇದಕ್ಕೂ ಮುನ್ನ ನಗರ ಕೆಇಬಿ ವೃತ್ತದಿಂದ ತಾಲೂಕು ಕಚೇರಿ ವೃತ್ತದವರೆಗೆ ಭೀಮ ಕೋರೆಗಾಂವ್ ಸ್ಥೂಪದ ಮೆರವಣಿಗೆ ನಡೆಸಲಾಯಿತು. ತಾಲೂಕು ಕಚೇರಿ ಮುಂಭಾಗದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.ತಾಪಂ ಇಒ ಮುನಿಯಪ್ಪ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಸಿದ್ದರಾಜು, ತಾಪಂ ಮಾಜಿ ಅಧ್ಯಕ್ಷ ದಲಿತ ಸಂಘರ್ಷ ಸೇನೆ ರಾಜ್ಯಾಧ್ಯಕ್ಷ ಜಿ.ಆನಂದ್, ಕರ್ನಾಟಕ ಮಹಾಜನ ಸೇನೆ ರಾಜ್ಯಾಧ್ಯಕ್ಷ ಮಂಜುನಾಥ್, ಭೀಮ್ ಸೇವಾ ಸಮಿತಿ ರಾಜ್ಯಾಧ್ಯಕ್ಷ ಶ್ರೀಕಾಂತ್ ರಾವಣ್, ಭಾರತೀಯ ಸಮತಾ ಸೈನಿಕ ದಳದ ರಾಜ್ಯಾಧ್ಯಕ್ಷೆ ಸಾವಿತ್ರಿ, ಭಾರತೀಯ ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ಶಿವಕುಮಾರ್ ಚಕ್ರವರ್ತಿ, ದಸಸಂಕ ಜಿಲ್ಲಾ ಸಂಚಾಲಕ ಲೋಕೇಶ್, ಕದಸಂಸ ಅಂಬೇಡ್ಕರ್‌ವಾದ ಜಿಲ್ಲಾ ಸಂಚಾಲಕ ಕೊರಳೂರು ಶ್ರೀನಿವಾಸ್, ದಲಿತ ಮುಖಂಡರಾದ ಅಭಿಮಾನಿ ಮುನಿರಾಜು, ದರ್ಶನ್, ಅಣ್ಣಯ್ಯಪ್ಪ, ಎಎಸ್‌ಐ ದೇವರಾಜ್ ಗೊಟ್ಟಿಪುರ ಚಂದ್ರು ಹಾಜರಿದ್ದರು.