ಕನ್ನಡಪ್ರಭ ವಾರ್ತೆ ಕೋಲಾರಅಡುಗೆ ಸಿಬ್ಬಂದಿ ನೂರಾರು ಮಕ್ಕಳ ಹಸಿವು ನೀಗಿಸುವ ಪುಣ್ಯದ ಕೆಲಸ ಮಾಡುತ್ತಿದ್ದು, ಬಿಸಿಯೂಟ ನಿರ್ವಹಣೆಯಲ್ಲಿ ಬದ್ಧತೆಯಿಂದ ಕೆಲಸ ಮಾಡಿ, ಸ್ವಚ್ಛತೆ, ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು ಎಂದು ಮಧ್ಯಾಹ್ನ ಉಪಹಾರ ಯೋಜನೆ ತಾಲ್ಲೂಕು ಸಹಾಯಕ ನಿರ್ದೇಶಕ ಎಸ್.ಟಿ.ಸುಬ್ರಮಣಿ ಕರೆ ನೀಡಿದರು.ನಗರದ ಅಲಮಿನ್ ಶಾಲೆ ಆವರಣದಲ್ಲಿ ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಹಾಗೂ ಮಧ್ಯಾಹ್ನ ಉಪಹಾರ ಯೋಜನೆ ಇಲಾಖೆಯಿಂದ ಕೋಲಾರ ನಗರ ಕ್ಲಸ್ಟರ್‌ಗಳ ವ್ಯಾಪ್ತಿಯ ಶಾಲೆಗಳ ಬಿಸಿಯೂಟ ನೌಕರರಿಗಾಗಿ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ, ಅಗ್ನಿ ಸುರಕ್ಷತಾ ಪ್ರಾತ್ಯಕ್ಷಿಕೆ ವೀಕ್ಷಿಸಿ ಮಾತನಾಡಿದರು.ಸಾಮಗ್ರಿಗಳ ನಿರ್ವಹಣೆ
ಅಕ್ಷರದಾಸೋಹದಲ್ಲಿ ಅಡುಗೆ ಸಾಮಗ್ರಿಗಳ ನಿರ್ವಹಣೆ, ಲೆಕ್ಕಪತ್ರಗಳನ್ನು ಸರಿಯಾಗಿ ನಿರ್ವಹಿಸಬೇಕು. ಮಕ್ಕಳ ಹಾಜರಾತಿಗೆ ತಕ್ಕಂತೆ ಧಾನ್ಯಗಳ ಬಳಕೆ, ಸಂಗ್ರಹಣೆ ಇರಬೇಕು. ಅಡುಗೆ ಕೋಣೆ ಶುಭ್ರವಾಗಿದ್ದರೆ ಮಾತ್ರ ಅಡುಗೆಯಲ್ಲೂ ಶುಚಿತ್ವ ಕಾಪಾಡಲು ಸಹಕಾರಿಯಾಗುತ್ತದೆ ಎಂದರು.ಅಗ್ನಿಶಾಮಕ ಅಧಿಕಾರಿ ಲೋಕೇಶ್ ವಿ.ಗೌಡ ಸಿಲೆಂಡರ್‌ನಿಂದಾಗುವ ಅಗ್ನಿ ಅನಾಹುತ ತಡೆಯಲು ಕೈಗೊಳ್ಳಬೇಕಾದ ಮುನ್ನಚ್ಚರಿಕಾ ಕ್ರಮಗಳ ಕುರಿತು ಅಲಮಿನ್ ಶಾಲೆ ಆವರಣದಲ್ಲಿ ಪ್ರಾತ್ಯಕ್ಷಿಕೆ ಮೂಲಕ ಅಡುಗೆ ಸಿಬ್ಬಂದಿಗೆ ಮಾರ್ಗದರ್ಶನ ನೀಡಿದರು.
ರೆಗ್ಯುಲೇಟರ್ ಆಫ್ ಮಾಡಿಇಂಡಿಯನ್ ಆಯಿಲ್ ಕಾರ್ಪೋರೇಷನ್‌ನ ಕೇದಾರ್ ಗ್ಯಾಸ್ ಏಜೆನ್ಸಿಯ ರೂಪೇಶ್ ಮಾತನಾಡಿ, ಸುರಕ್ಷತೆಗೆ ಒತ್ತು ನೀಡಿ, ನಿಗಧಿತ ಅವಧಿಗೆ ಸ್ಟೋವ್‌ಗೆ ಒದಗಿಸಿರುವ ಅನಿಲ್ ಪೈಪ್ ಬದಲಾಯಿಸಿ, ಅಡುಗೆ ಮುಗಿಸಿ ಮನೆಗೆ ಹೋಗುವ ಮುನ್ನಾ ಸಿಲೆಂಡರ್‌ನ ರೆಗ್ಯುಲೇಟರ್ ಆಫ್ ಮಾಡಿ ಎಂದು ಸಲಹೆ ನೀಡಿದರು.ಕಾರ್ಯಾಗಾರಕ್ಕೂ ಮುನ್ನಾ ಜಿಲ್ಲಾ ಬಿಸಿಯೂಟ ಶಿಕ್ಷಣಾಧಿಕಾರಿ ತಿಮ್ಮರಾಯಪ್ಪ ಆಗಮಿಸಿ ಮಾರ್ಗದರ್ಶನ ನೀಡಿದರು. ಮಧ್ಯಾಹ್ನ ಉಪಹಾರ ಯೋಜನೆ ಇಲಾಖೆಯ ಹೇಮಂತ್ ಜುಹಳ್ಳಿ, ರೆಹಮತ್ ನಗರ,ದರ್ಗಾ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳಾದ ಮುಜಾಹಿದ್ ಪಾಷಾ, ಆರಿಫ್ ಗಿಲಾನಿ ಇದ್ದರು.