ಜಂಗಮರು ಇತರ ಸಮಾಜಕ್ಕೆ ಮಾದರಿಯಾಗಲಿ: ಮುಕ್ತಿಮಂದಿರ ಶ್ರೀ

KannadaprabhaNewsNetwork |  
Published : May 29, 2026, 02:15 AM IST
ಪೊಟೋ- ಜಂಗಮ ಸಂಘದವತಿಯಿಂದ ಸಾಧಕರಿನೆ ನಡೆದ ಸನ್ಮಾನ ಸಮಾರಂಭ. | Kannada Prabha

ಸಾರಾಂಶ

ಸಾಧಕರಿಗೆ ಹಾಗೂ ಹೆಚ್ಚಿನ ಅಂಕಗಳನ್ನು ಗಳಿಸಿದ ಸಮಾಜದ ವಿದ್ಯಾರ್ಥಿಗಳಿಗೆ ಸನ್ಮಾನಿಸುವುದು ಶ್ಲಾಘನೀಯ ಕಾರ್ಯ. ಎಲ್ಲ ಕ್ಷೇತ್ರಗಳಲ್ಲಿ ಸಮಾಜದವರು ಮುಂದೆ ಬರಬೇಕು. ಎಲ್ಲ ಸಮಾಜರೊಂದಿಗೆ ಸ್ನೇಹದಿಂದ ಜೀವನ ನಡೆಸಬೇಕು.

ಲಕ್ಷ್ಮೇಶ್ವರ: ಜಂಗಮ ಸಮಾಜ ಇತರೆ ಸಮಾಜಕ್ಕೆ ಮಾದರಿಯಾಗಿರಬೇಕು. ಜಂಗಮರು ಆದಿ ಅನಾದಿ ಕಾಲದಿಂದಲೂ ಧಾರ್ಮಿಕ ಪದ್ಧತಿ ಅಳವಡಿಸಿಕೊಂಡು ಬಂದಿದ್ದಾರೆ ಎಂದು ಮುಕ್ತಿಮಂದಿರದ ವಿಮಲರೇಣುಕ ವೀರಮುಕ್ತಿಮುನಿ ಸ್ವಾಮಿಗಳು ತಿಳಿಸಿದರು.

ಗುರುವಾರ ಪಟ್ಟಣದ ಹಳ್ಳದಕೇರಿಯ ಕರೆವಾಡಿಮಠದಲ್ಲಿ ತಾಲೂಕು ಜಂಗಮ ಕ್ಷೇಮಾಬಿವೃದ್ಧಿ ಸಂಘದ ವತಿಯಿಂದ ಸಾಧಕರಿಗೆ ಸನ್ಮಾನ, ಎಸ್ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಶೇ. 90ಕ್ಕೂ ಹೆಚ್ಚು ಅಂಕ ಗಳಿಸಿದ ಜಂಗಮ ಸಮಾಜದ ವಿದ್ಯಾರ್ಥಿಗಳಿಗೆ ನಡೆದ ಸನ್ಮಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.ಸಾಧಕರಿಗೆ ಹಾಗೂ ಹೆಚ್ಚಿನ ಅಂಕಗಳನ್ನು ಗಳಿಸಿದ ಸಮಾಜದ ವಿದ್ಯಾರ್ಥಿಗಳಿಗೆ ಸನ್ಮಾನಿಸುವುದು ಶ್ಲಾಘನೀಯ ಕಾರ್ಯ. ಎಲ್ಲ ಕ್ಷೇತ್ರಗಳಲ್ಲಿ ಸಮಾಜದವರು ಮುಂದೆ ಬರಬೇಕು. ಎಲ್ಲ ಸಮಾಜರೊಂದಿಗೆ ಸ್ನೇಹದಿಂದ ಸಹಜೀವನ ನಡೆಸಬೇಕು ಎಂದರು.

ಈ ವೇಳೆ ನರಸಾಪುರ ಹಾಗೂ ಕದಂಪುರ ಮಠದ ವೀರಭದ್ರ ಶಿವಾಚಾರ್ಯರು ಆರ್ಶಿವಚನ ನೀಡಿ, ಸಮಾಜದ ಮಕ್ಕಳಲ್ಲಿ ಸಾಧನೆ ಮಾಡುವ ವಿಚಾರ ಬರಬೇಕು. ಅದಕ್ಕೆ ಗುರಿ ಇಟ್ಟು ಶ್ರಮ ಪಡಬೇಕು. ಪಾಲಕರು ಮಕ್ಕಳಿಗೆ ವಿದ್ಯಾಭ್ಯಾಸ ಜತೆಗೆ ಒಳ್ಳೆಯ ಸಂಸ್ಕಾರ ಕಲಿಸಬೇಕು. ಜಂಗಮರ ಮಕ್ಕಳಿಗೆ ಆಚಾರ ವಿಚಾರ, ಧರ್ಮದ ಸಂಸ್ಕಾರ ಕಲಿಸಬೇಕು. ಅಂದಾಗ ಮಾತ್ರ ಇತರರಿಗೆ ಧಾರ್ಮಿಕ ಸಂಸ್ಕಾರ ಹೇಳಿ ಕೊಡಲು ಸಾಧ್ಯ ಎಂದರು.ಕರೆವಾಡಿಮಠದ ಮಳೆಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಹಾಗೂ ಕರೆವಾಡಿಮಠದ ನಿಯೋಜಿತ ಉತ್ತರಾಧಿಕಾರಿ ಮಂಜುನಾಥ ದೇವರು ಆಶೀರ್ವಚನ ನೀಡಿದರು.

ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಅಖಿಲ ಭಾರತಿಯ ಜಂಗಮ ಸೇವಾ ಸಮಿತಿ ಜಿಲ್ಲಾ ಉಪಾಧ್ಯಕ್ಷ ಕೆ.ವಿ. ಹಿರೇಮಠ ಮಾತನಾಡಿದರು. ವೀರಭದ್ರಯ್ಯ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿರಹಟ್ಟಿ ತಾಲೂಕು ಪ್ರಾಶಾಶಿಸಂ ಅಧ್ಯಕ್ಷ ಶರಣಬಸಪ್ಪ ಪಾಟೀಲ, ಲಕ್ಷ್ಮೇಶ್ವರ ತಾಲೂಕು ಪ್ರಾಶಾಶಿಸಂ ನಿರ್ದೇಶಕಿ ಸುನಂದಾ ಹಿರೇಮಠ ಅವರನ್ನು ಸನ್ಮಾನಿಸಲಾಯಿತು. ಶಂಕ್ರಯ್ಯ ಪೂಜಾರ ಹಾಗೂ ಮುರುಗೇoದ್ರ ಹಿರೇಮಠ ಅವರಿಂದ ವೇದ ಘೋಷಣೆ ನಡೆಯಿತು.ಈ ವೇಳೆ ಮಹೇಶ ಲಿಂಬಯ್ಯಸ್ವಾಮಿಮಠ, ಶಿವಯೋಗಿ ಗಡ್ಡದೇವರಮಠ, ಪಂಚಯ್ಯ ಸಾಲಿಮಠ, ರುದ್ರಮುನಿಸ್ವಾಮಿ ಘಂಟಾಮಠ, ಎಸ್.ಪಿ. ಸಭಾವಡೆಮಠ, ನೀಲಕಂಠಯ್ಯ ಹಿರೇಮಠ, ಶಿವರಾಜ ಕರೆವಾಡಿಮಠ, ಜಿಲ್ಲಾ ಅಖಿಲ ಭಾರತಿಯ ಜಂಗಮ ಸೇವಾ ಸಮಿತಿಯ ವೀರಯ್ಯ ಹೊಸಮಠ, ತೋಟಪಯ್ಯ ಗುಡ್ಡಿಮಠ, ಕುಮಾರಸ್ವಾಮಿ ಹಿರೇಮಠ, ಸಂತೋಷ ಹಿರೇಮಠ, ಅನ್ನಪೂರ್ಣ ಹಿರೇಮಠ ಪ್ರಾರ್ಥಿಸಿದರು. ಸತೀಶ ಪಶುಪತಿಹಾಳ ಸ್ವಾಗತಿಸಿದರು. ರುದ್ರಮುನಿಸ್ವಾಮಿ ಹಾವೇರಿಮಠ, ಬಿ.ಟಿ. ಪಾಟೀಲ, ಎಂ.ಕೆ. ಕಳ್ಳಿಮಠ, ಪಾರ್ವತಿ ಕಳ್ಳಿಮಠ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಕ್ಷತೆ, ಪಾರದರ್ಶಕತೆ ಇದ್ದರೆ ಸಂಘಟನೆ ಪ್ರಗತಿ: ಮಲ್ಲಿಕಾರ್ಜುನ ಬಳ್ಳಾರಿ
ಫಾಸ್ಟ್‌ಫುಡ್‌ ಬದಲು ತರಕಾರಿ, ಹಣ್ಣು ದೇಹಕ್ಕೆ ಉತ್ತಮ