ಸಹಕಾರ ಸಂಘದ ಯೋಜನೆಗಳು ಸದ್ವಿನಿಯೋಗ ಆಗಲಿ

KannadaprabhaNewsNetwork |  
Published : May 29, 2026, 02:15 AM IST
ಪೊಟೋ ಪೈಲ್ ನೇಮ್ ೨೮ಎಸ್‌ಜಿವಿ೨   ಕೆಸಿಸಿ ಬ್ಯಾಂಕ್ ನಿರ್ದೇಶಕ ಸಂಗಮೇಶ್ವರ ಕಂಬಾಳಿಮಠ ತಾಲೂಕಿನ ಕುನ್ನೂರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ನಿರ್ದೇಶಕರಿಗೆ ಸನ್ಮಾನ ಸಮಾರಂಭ ಎರ್ಪಡಿಸಿದರು. ೨೮ಎಸ್‌ಜಿವಿ೨-೧   ಕುನ್ನೂರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿAದ ಕೆಸಿಸಿ ಬ್ಯಾಂಕ್ ನಿರ್ದೇಶಕ ಸಂಗಮೇಶ್ವರ ಕಂಬಾಳಿಮಠ ಅವರನ್ನು ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿದರು.೨೮ಎಸ್‌ಜಿವಿ೨-೨ ಕೆಎಂಎಫ್ ನಿರ್ದೇಶಕ ತಿಪ್ಪಣ್ಣಾ ಸಾತಣ್ಣವರ ಅವರನ್ನು ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿದರು. | Kannada Prabha

ಸಾರಾಂಶ

ಸರ್ಕಾರ ಹಾಗೂ ಸಹಕಾರ ಒಂದಕ್ಕೊಂದು ಸಂಬಂಧವಿದೆ. ಆದೆ ನಮ್ಮ ರಾಜ್ಯದ ಕೆಲವು ಭಾಗಗಳಲ್ಲಿ ಸಹಕಾರವು ಸರಕಾರವನ್ನು ಕೈಗೆ ತಗೆದುಗೊಂಡಿದೆ. ಆದರೆ ನಮ್ಮ ಜಿಲ್ಲೆಯಲ್ಲಿ ಸರಕಾರವು ಸಹಕಾರವನ್ನು ತೆಗೆದುಕೊಂಡಿದೆ. ಸಹಕಾರ ಸಂಘದಿಂದ ಸಾಕಷ್ಟು ಪ್ರಮಾಣದ ಯೋಜನೆಗಳಿದ್ದು ಅವುಗಳನ್ನು ಸದ್ವಿನಿಯೋಗವನ್ನು ಮಾಡಿಕೊಳ್ಳಬೇಕು ಎಂದು ಕೆಎಂಎಫ್ ನಿರ್ದೇಶಕ ತಿಪ್ಪಣ್ಣಾ ಸಾತಣ್ಣವರ ಹೇಳಿದರು.

ಶಿಗ್ಗಾಂವಿ: ಸರ್ಕಾರ ಹಾಗೂ ಸಹಕಾರ ಒಂದಕ್ಕೊಂದು ಸಂಬಂಧವಿದೆ. ಆದೆ ನಮ್ಮ ರಾಜ್ಯದ ಕೆಲವು ಭಾಗಗಳಲ್ಲಿ ಸಹಕಾರವು ಸರಕಾರವನ್ನು ಕೈಗೆ ತಗೆದುಗೊಂಡಿದೆ. ಆದರೆ ನಮ್ಮ ಜಿಲ್ಲೆಯಲ್ಲಿ ಸರಕಾರವು ಸಹಕಾರವನ್ನು ತೆಗೆದುಕೊಂಡಿದೆ. ಸಹಕಾರ ಸಂಘದಿಂದ ಸಾಕಷ್ಟು ಪ್ರಮಾಣದ ಯೋಜನೆಗಳಿದ್ದು ಅವುಗಳನ್ನು ಸದ್ವಿನಿಯೋಗವನ್ನು ಮಾಡಿಕೊಳ್ಳಬೇಕು ಎಂದು ಕೆಎಂಎಫ್ ನಿರ್ದೇಶಕ ತಿಪ್ಪಣ್ಣಾ ಸಾತಣ್ಣವರ ಹೇಳಿದರು.ತಾಲೂಕಿನ ಕುನ್ನೂರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ನಿರ್ದೇಶಕರಿಗೆ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.ಕೇವಲ ಬಡ್ಡಿ ರಹಿತ ಸಾಲವನ್ನು ಪಡೆಯಲು ಮಾತ್ರ ಸಹಕಾರಿ ಸಂಘಕ್ಕೆ ಹೋಗುತ್ತೇವೆ. ಆದರೆ ಸಂಘದಿಂದ ಸಾಲ ಪಡೆದ ನಂತರ ರಾಷ್ಟ್ರೀಯ ಬ್ಯಾಂಕಗಳ ಕಡೆ ಹೋಗುತ್ತೇವೆ. ಆದ್ದರಿಂದ ಎಲ್ಲಾ ರೈತ ಮಹೋದಯರು ಸಂಘದ ಅಭಿವೃದ್ಧಿಗೆ ಸಾಲ ಪಡೆದು ಆರ್ಥಿಕವಾಗಿ ಅಭಿವೃದ್ಧಿ ಹೊಂದಿ ಮರುಪಾವತಿ ಮಾಡಬೇಕು ಅಲ್ಲದೆ ಕೇವಲ ಕೃಷಿ ಮುಖ್ಯವಾಗಿ ಇರದೆ ಹೈನುಗಾರಿಕೆಗೂ ಹೆಚ್ಚಿನ ಒತ್ತು ನೀಡುವುದು ಅವಶ್ಯವಾಗಿದೆ ಎಂದರು.ಕೆಸಿಸಿ ಬ್ಯಾಂಕ್ ನಿರ್ದೇಶಕ ಸಂಗಮೇಶ್ವರ ಕಂಬಾಳಿಮಠ ಮಾತನಾಡಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿಂದ ನೂತನ ನಿರ್ದೇಶಕರುಗಳಿಗೆ ಅಭಿನಂದನಾ ಸಮಾರಂಭವು ತಡವಾಗಿದ್ದು ಎಲ್ಲಾ ಸಂಘಗಳು ಚುನಾವಣೆ ಮುಗಿದ ನಂತರ ಇದನ್ನು ಏರ್ಪಡಿಸಲಾಗಿದೆ. ಸಹಕಾರಿ ಸಂಘದಿಂದ ಸಾಕಷ್ಟು ಪ್ರಮಾಣದಲ್ಲಿ ಬೆಳೆ ಸಾಲವನ್ನು ನೀಡುತ್ತಿದ್ದು ಅಲ್ಲದೆ ವಿವಿಧ ಕೃಷಿ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಿ ಸಾಲವನ್ನು ನೀಡಲಾಗುತ್ತದೆ ಆದ್ದರಿಂದ ಪ್ರತಿಯೊಬ್ಬರು ಸಾಲವನ್ನು ಪಡೆಯುವುದರ ಜತೆಗೆ ಕೆಸಿಸಿ ಬ್ಯಾಂಕ್‌ಗೆ ಡಿಪಾಜಿಟ್ ಮಾಡುವುದಕ್ಕೆ ಮುಂದಾಗಬೇಕು ಎಂದರು.ಸಹಕಾರಿ ಸಂಘದ ನೂತನ ನಿರ್ದೇಶಕ ಬಿ.ಎಸ್. ಹಿರೇಮಠ ಮಾತನಾಡಿ, ಕುನ್ನೂರ ಸಹಕಾರಿ ಸಂಘಕ್ಕೆ ಕೇವಲ ಗೋದಾಮು ಇದ್ದು, ನೂತನವಾಗಿ ಕಚೇರಿ ಕಟ್ಟಡದ ನಿರ್ಮಾಣಕ್ಕೆ ಶಾಸಕ ಯಾಸೀರ ಅಹ್ಮದಖಾನ ಪಠಾಣ ಅವರಿಗೂ ಹಿಂದಿನ ಸಮಿತಿ ಮನವಿ ಮಾಡಿದ್ದು ನಿರ್ದೇಶಕರಾದ ಕಂಬಾಳಿಮಠವರು, ಸಾತಣ್ಣವರು ಸಹಕಾರವನ್ನು ಮಾಡಿ ನಮ್ಮ ಸಂಘಕ್ಕೆ ನೂತನ ಕಟ್ಟಡಕ್ಕೆ ಅನುದಾನವನ್ನು ನೀಡಿ ಹೆಚ್ಚಿನ ಅನುಕೂಲತೆಯು ಆಗಲಿದೆ ಎಂದು ಮನವಿ ಮಾಡಿದರು.ಅಲ್ಲದೆ ಹಿಂದಿನ ಕೆಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಗಂಗಾಧರ ಸಾತಣ್ಣವರ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುನ್ನೂರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಲ್.ಆರ್. ಪಾಟೀಲ ವಹಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಕೆಸಿಸಿ ಬ್ಯಾಂಕ್ ನಿರೀಕ್ಷರಾದ ಶಿವರಾಜ ರಾಯಣ್ಣವರ, ಸತೀಶ ಕೋಟೆಣ್ಣವರ, ಗ್ರಾ.ಪಂ. ಮಾಜಿ ಸದಸ್ಯ ಡಿ.ಆರ್.ಬೊಮ್ಮನಹಳ್ಳಿ ಸೇರಿದಂತೆ ಹಲವರು ಮಾತನಾಡಿದರು.ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಂ. ಪಾಟೀಲ, ಎಸ್.ಬಿ. ಪಾಟೀಲ, ಗಂಗಯ್ಯ ಹಿರೇಮಠ, ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಹನುಮಂತಪ್ಪ ಲಮಾಣಿ, ಬಸಪ್ಪ ಬಾರ್ಕಿ, ಈರಪ್ಪ ಸೋಗಲಿ, ಇಮಾಮಹುಸೇನ ಕುರಟ್ಟಿ, ಶಿವಪ್ಪ ಕೊಟಗಾರ, ವೀರಭದ್ರಪ್ಪ ಕರೆಪ್ಪನವರ, ಬಸವಣ್ಣೆವ್ವ ಪಾಟೀಲ, ಕಮಲವ್ವ ಅಕ್ಕಿ ಸೇರಿದಂತೆ ಹಲವರು ಇದ್ದರು.ಬ್ಯಾಂಕ್ ಸಿಬ್ಬಂದಿ ಬಿ.ಎನ್. ಪಾಟೀಲ ಸ್ವಾಗತಿಸಿದರು. ಸುರೇಶ ಬೆಂಡಿಗೇರಿ ಕಾರ್ಯಕ್ರಮ ನಿರುಪಿಸಿದರು. ಜೈಲಾನಿ ಮತ್ತೆಖಾನ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಕ್ಷತೆ, ಪಾರದರ್ಶಕತೆ ಇದ್ದರೆ ಸಂಘಟನೆ ಪ್ರಗತಿ: ಮಲ್ಲಿಕಾರ್ಜುನ ಬಳ್ಳಾರಿ
ಫಾಸ್ಟ್‌ಫುಡ್‌ ಬದಲು ತರಕಾರಿ, ಹಣ್ಣು ದೇಹಕ್ಕೆ ಉತ್ತಮ