ಪರೋಪಕಾರದ ಚಿಂತನೆಗಳನ್ನು ಬಿತ್ತುವ ಸತ್ಕಾರ್ಯಕ್ಕೆ ಪ್ರೇರಣೆಯಾಗೋಣ

KannadaprabhaNewsNetwork |  
Published : May 29, 2026, 02:15 AM IST
ಹಾನಗಲ್ಲ ತಾಲೂಕಿನ ಅಕ್ಕಿಆಲೂರ ಮುತ್ತಿನಕಂತಿಮಠದಲ್ಲಿ  ಶ್ರೀಮಠದ ಅಭಿವೃದ್ಧಿ ಕುರಿತ ಭಕ್ತರ ಪೂರ್ವಭಾವಿ ಸಭೆಯನ್ನು ವಿವಿಧ ಮಠಾಧೀಶರು ಉದ್ಘಾಟಿಸಿದರು. | Kannada Prabha

ಸಾರಾಂಶ

ಸನಾತನ ಸಂಸ್ಕೃತಿಯಲ್ಲಿ ಮಠಗಳ ಪಾತ್ರ ಅತ್ಯಂತ ಪ್ರಮುಖವಾಗಿದ್ದು, ಸಮಾಜ ಮಠಗಳ ಪ್ರಯೋಜನ ಪಡೆದು ಸಾರ್ಥಕ, ಪರೋಪಕಾರದ ಜೀವನಕ್ಕೆ ಮುಂದಾಗುವ ಚಿಂತನೆಗಳನ್ನು ಬಿತ್ತುವ ತೀರ ಅವಶ್ಯಕತೆ ಇದೆ ಎಂದು ಮುತ್ತಿನಕಂತಿಮಠದ ಪೀಠಾಧಿಪತಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಹಾನಗಲ್ಲ: ಸನಾತನ ಸಂಸ್ಕೃತಿಯಲ್ಲಿ ಮಠಗಳ ಪಾತ್ರ ಅತ್ಯಂತ ಪ್ರಮುಖವಾಗಿದ್ದು, ಸಮಾಜ ಮಠಗಳ ಪ್ರಯೋಜನ ಪಡೆದು ಸಾರ್ಥಕ, ಪರೋಪಕಾರದ ಜೀವನಕ್ಕೆ ಮುಂದಾಗುವ ಚಿಂತನೆಗಳನ್ನು ಬಿತ್ತುವ ತೀರ ಅವಶ್ಯಕತೆ ಇದೆ ಎಂದು ಮುತ್ತಿನಕಂತಿಮಠದ ಪೀಠಾಧಿಪತಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.ಹಾನಗಲ್ಲ ತಾಲೂಕಿನ ಅಕ್ಕಿಆಲೂರು ಮುತ್ತಿನಕಂತಿಮಠದ ಆವರಣದಲ್ಲಿ ನಿರ್ಮಾಣ ಪೂರ್ಣಗೊಳ್ಳುತ್ತಿರುವ ಭ್ರಮರಾಂಭ ಮತ್ತು ಮಲ್ಲಿಕಾರ್ಜುನ ದೇವಸ್ಥಾನ, ಪಂಡಿತಾರಾಧ್ಯ ಮಂಗಲ ಭವನದ ಉದ್ಘಾಟನೆಯ ಕುರಿತು ಭಕ್ತರ ಪೂರ್ವಭಾವಿ ಸಭೆ ಸಭೆಯನ್ನುದ್ದೇಶಿಸಿ ಮಾತನಾಡಿದರು. ಸುಮಾರು ೧೮ ಕೋಟಿ ರು. ವೆಚ್ಚದಲ್ಲಿ ದೇವಸ್ಥಾನ ಮತ್ತು ಮಂಗಲ ಭವನ ನಿರ್ಮಾಣವಾಗುತ್ತಿದೆ. ಕಾಮಗಾರಿ ಪೂರ್ಣಗೊಳ್ಳಲು ಇನ್ನೂ ೨ ಕೋಟಿ ರು. ಅಗತ್ಯವಾಗಿದೆ. ಭಕ್ತರ ದಾನ ದೇಣಿಗೆಯಿಂದ ಮಾತ್ರ ಧರ್ಮ ಕೇಂದ್ರಗಳ ನಿರ್ಮಾಣ ಸಾಧ್ಯ. ೨೦೨೭ರ ಫೆಬ್ರವರಿ ತಿಂಗಳಲ್ಲಿ ದೇವಸ್ಥಾನ ಮತ್ತು ಮಂಗಲ ಭವನ ಉದ್ಘಾಟನೆಯ ಸಮಯ ನಿಗದಿ ಮಾಡುವ ಉದ್ದೇಶವಿದ್ದು, ಮಠದ ಅಭಿವೃದ್ಧಿಗೆ ಭಕ್ತರು ಕೈಜೋಡಿಸಬೇಕು ಎಂದು ಮನವಿ ಮಾಡಿದರು.ಮಣಕವಾಡದ ಅಭಿನವ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ನಶಿಸುವ ಹಂತದಲ್ಲಿದ್ದ ಈ ಮಠವನ್ನು ಶ್ರೆಯೋಭಿವೃದ್ಧಿಯ ಉತ್ತಂಗಕ್ಕೆ ತಂದವರು ಚಂದ್ರಶೇಖರ ಶಿವಾಚಾರ್ಯರು. ಮಠಗಳಿಗೆ ಸರಕಾರದ ಅನುದಾನ ಸಿಗಬಹುದು, ಆದರೆ ಭಕ್ತರ ನಂಬಿಕೆ, ಗೌರವಗಳು ಮಠವನ್ನು ಸರ್ವಾಂಗೀಣವಾಗಿ ಶ್ರೀಮಂತಗೊಳಿಸುತ್ತವೆ. ಮಠಗಳು ಸಂಕಷ್ಟದಲ್ಲಿದ್ದಾಗ ಭಕ್ತರೇ ಮಠದ ಉದ್ಧಾರಕ್ಕೆ ನಿಂತ ಸಾಕಷ್ಟು ಉದಾಹರಣೆಗಳು ಈ ನಾಡಿನಲ್ಲಿ ಇದೆ ಎಂದರು.ಮಠದ ಭಕ್ತರಾದ ರಾಜಣ್ಣ ಗೌಳಿ, ಸಂಜೀವಕುಮಾರ ನೀರಲಗಿ, ಪ್ರಕಾಶಗೌಡ ಪಾಟೀಲ, ರಾಜಶೇಖರ ಕಟ್ಟೆಗೌಡ್ರ, ಸಿದ್ಧಲಿಂಗಪ್ಪ ಕಮಡೊಳ್ಳಿ, ಸಂದೀಪ ಪಾಟೀಲ ಮತ್ತಿತರರು ಮಾತನಾಡಿ, ಮಠಗಳು ಧರ್ಮ ಜಾಗೃತಿ ಶ್ರದ್ಧಾ ಕೇಂದ್ರಗಳಾಗಿವೆ. ನಮ್ಮ ಸಂಸ್ಕೃತಿಯ ಉಳಿವು ಧರ್ಮಕೇಂದ್ರಗಳಿಂದಲೇ ಉಳಿಯಲು ಸಾರ್ಧಯ. ಅಂತಹ ಶ್ರದ್ಧಾಕೇಂದ್ರಗಳನ್ನು ಸಮಾಜಕ್ಕಾಗಿ ಉಳಿಸುವ ಕೆಲಸಗಳಿಗೆ ಎಲ್ಲ ರೀತಿಯ ಸಹಾಯ ಮಾಡುವುದಾಗಿ ಹೇಳಿದರು.ಹಾವೇರಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ, ಅಕ್ಕಿಆಲೂರ ವಿರಕ್ತಮಠದ ಶಿವಬಸವ ಸ್ವಾಮೀಜಿ, ಕೂಡಲ ಗುರುಮಹೇಶ್ವರ ಸ್ವಾಮೀಜಿ, ಬಿಜಾಪುರದ ಅಭಿನವ ಸಿದ್ಧಾರೂಢ ಸ್ವಾಮೀಜಿ, ತುಪ್ಪದ ಕುರಹಟ್ಟಿಯ ವಾಗೀಶ ಪಂಡಿತಾರಾಧ್ಯ ಸ್ವಾಮೀಜಿ, ಹೇರೂರ ನಂಜುಂಡ ಪಂಡಿತಾರಾಧ್ಯ ಸ್ವಾಮೀಜಿ, ಶಿರಶ್ಯಾಡ ಅಭಿನವ ಮುರುಘೇಂದ್ರ ಸ್ವಾಮೀಜಿ, ನರಗುಂಡ ಪಂಚಗೃಹ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯ, ಶನಿವಾರಸಂತೆಯ ಅಭಿನವ ಸಿದ್ಧಲಿಂಗ ಸ್ವಾಮೀಜಿ, ಧಾರವಾಡ ಹಿರೇಮಠದ ಶಶಾಂಕ ಸ್ವಾಮೀಜಿ ಸಮ್ಮುಖ ವಹಿಸಿದ್ದರು.ಮುಖಂಡರಾದ ಸಿದ್ದಲಿಂಗಪ್ಪ ಶಂಕ್ರಿಕೊಪ್ಪ, ಷಣ್ಮುಖಪ್ಪ ಮುಚ್ಚಂಡಿ, ಎಸ್.ಅಮರೇಂದ್ರ, ರಾಮನಗೌಡ ಪಾಟೀಲ, ಕೃಷ್ಣಾ ಈಳಿಗೇರ, ಅಶೋಕ ಗದ್ದಿಗೌಡ್ರ, ಉದಯ ವಿರುಪಣ್ಣನವರ, ಶೇಖಪ್ಪ ಗೌಳಿ, ಕಲ್ಯಾಣಕುಮಾರ ಶೆಟ್ಟರ, ವಿ.ವಿ.ಹಿರೇಮಠ, ಮಹೇಶ ಹಾವೇರಿ, ಎಂ.ಎಂ.ಹಿರೇಮಠ, ಶಿವಯೋಗಿ ಹಿರೇಮಠ, ಎಸ್.ಎಸ್.ಹಿರೇಮಠ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಕ್ಷತೆ, ಪಾರದರ್ಶಕತೆ ಇದ್ದರೆ ಸಂಘಟನೆ ಪ್ರಗತಿ: ಮಲ್ಲಿಕಾರ್ಜುನ ಬಳ್ಳಾರಿ
ಫಾಸ್ಟ್‌ಫುಡ್‌ ಬದಲು ತರಕಾರಿ, ಹಣ್ಣು ದೇಹಕ್ಕೆ ಉತ್ತಮ