ವಿಶೇಷಚೇತನರು ಮುಖ್ಯವಾಹಿನಿಗೆ ಬರಲಿ

KannadaprabhaNewsNetwork |  
Published : Jan 12, 2025, 01:16 AM IST
10ಜಿಡಿಜಿ7 | Kannada Prabha

ಸಾರಾಂಶ

ವಿಶೇಷ ಮಕ್ಕಳು ವಿಶೇಷ ಪ್ರತಿಭೆ ಉಳ್ಳವರು. ಅವರಿಗೆ ಪ್ರೋತ್ಸಾಹ ದೊರೆತಲ್ಲಿ ಅವರೂ ಸಾಧಿಸಬಲ್ಲರು. ಮುಖ್ಯವಾಗಿ ಅವರಿಗೆ ಪ್ರೋತ್ಸಾಹ ಹಾಗೂ ಪ್ರೇರಣೆಬೇಕು

ಗದಗ: ವಿದ್ಯಾರ್ಥಿಗಳಲ್ಲಿ ಕಂಡು ಬರುವ ನೂನ್ಯತೆಗಳನ್ನು ಪಾಲಕರು ಬಾಲ್ಯದಲ್ಲಿಯೇ ಗುರುತಿಸಿ ತಜ್ಞ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ನೀಡಿದಲ್ಲಿ ಮಕ್ಕಳು ಸುಧಾರಣೆಗೊಂಡು ಸಾಮಾನ್ಯ ಮಕ್ಕಳಾಗುವ ಸಾಧ್ಯತೆಯಿದೆ ಎಂದು ಗದಗ ಬೆಟಗೇರಿ ಲಯನ್ಸ್ ಕ್ಲಬ್ ಅಧ್ಯಕ್ಷ ನಿತೀಶ್ ಸಾಲಿ ಹೇಳಿದರು.

ಅವರು ಗುರುವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಗದಗ ಬೆಟಗೇರಿ ಲಯನ್ಸ್ ಕ್ಲಬ್‌ಗಳ ಸಂಯುಕ್ತ ಆಶ್ರಯದಲ್ಲಿ ಗದಗ ಒಕ್ಕಲಗೇರಿಯ ಸರ್ಕಾರಿ ಶಾಲೆಗಳಲ್ಲಿ ನಡೆದ ವಿಶೇಷ ಚೇತನ ಮಕ್ಕಳಿಗಾಗಿ ಪರಿಸರ ನಿರ್ಮಾಣ ಹಾಗೂ ಸಮನ್ವಯತೆ ಕುರಿತು ನಡೆದ ಅರಿವು ಸಮಾರಂಭದಲ್ಲಿ ಭಿತ್ತಿ ಪತ್ರ ಉದ್ಘಾಟಿಸಿ ಮಾತನಾಡಿದರು.

ವಿಶೇಷಚೇತನರು ಸಮಾಜದ ಮುಖ್ಯವಾಹಿನಿಗೆ ಬರಬೇಕು.ಅವರಿಗೆ ಪ್ರೋತ್ಸಾಹದ ಅಗತ್ಯವಿದೆ. ಸರ್ಕಾರದ ಸೌಲಭ್ಯಗಳೊಂದಿಗೆ ಸೂಕ್ತ ವಾತಾವರಣ ಅವಶ್ಯ. ಸಮುದಾಯವು ಈ ಮಕ್ಕಳ ಶ್ರೇಯೋಭಿವೃದ್ಧಿಗೆ ಕೈ ಜೋಡಿಸಬೇಕು ಎಂದರು.

ಸಂಪನ್ಮೂಲ ವ್ಯಕ್ತಿ ಕವಿತಾ ಬೆಲೇರಿ ಮಾತನಾಡಿ, ವಿಶೇಷ ಮಕ್ಕಳು ವಿಶೇಷ ಪ್ರತಿಭೆ ಉಳ್ಳವರು. ಅವರಿಗೆ ಪ್ರೋತ್ಸಾಹ ದೊರೆತಲ್ಲಿ ಅವರೂ ಸಾಧಿಸಬಲ್ಲರು. ಮುಖ್ಯವಾಗಿ ಅವರಿಗೆ ಪ್ರೋತ್ಸಾಹ ಹಾಗೂ ಪ್ರೇರಣೆಬೇಕು. ಜತೆಗೆ ಕಲಿಕಾ ಪೂರಕ ವಾತಾವರಣ ಅವರಿಗಾಗಿಯೇ ಅನುಕೂಲಕರ ವಾತಾವರಣ, ಉತ್ತಮ ಪರಿಸರ ನಿರ್ಮಾಣ ಕಾರ್ಯ ನಡೆಯಬೇಕು, ಅಂದಾಗ ಈ ಮಕ್ಕಳು ಕಲಿಕೆಯಲ್ಲಿ ಪ್ರಗತಿ ಕಂಡು ಸಾಧಿಸಬಲ್ಲರು ಎಂದರು.

ಶಾಲಾ ಮುಖ್ಯೋಪಾಧ್ಯಾಯ ವೈ.ಎಚ್. ಹನುಮಂತಗೌಡ್ರ ಮಾತನಾಡಿ, ಸಂಘ ಸಂಸ್ಥೆಗಳು ಸರ್ಕಾರಿ ಶಾಲೆಗಳತ್ತ ಬಂದು ವಿಶೇಷಚೇತನರ ಬಗೆಗೆ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ನೀಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಗದಗ-ಬೆಟಗೇರಿ ಲಯನ್ಸ ಕ್ಲಬ್‌ನ ಸದಸ್ಯರು ಹಾಗೂ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!