ರಾಮನಗರ: ನಗರದ ಹೋಲಿ ಕ್ರೆಸೆಂಟ್ ಸಮೂಹ ಶಿಕ್ಷಣ ಸಂಸ್ಥೆಯ ರೋಟರಿ ಇನ್‌ಟ್ರಾಕ್ಟ್ ಕ್ಲಬ್‌ನ ಮಕ್ಕಳು ಶನಿವಾರ ನಂದಗೋಕುಲ ವೃದ್ಧಾಶ್ರಮಕ್ಕೆ ಭೇಟಿ ನೀಡಿ ವಯೋವೃದ್ಧರ ಯೋಗಕ್ಷೇಮ ವಿಚಾರಿಸಿ, ಎರಡು ಡೈನಿಂಗ್ ಟೇಬಲ್‌ಗಳನ್ನು ಹಾಗೂ 2 ಸಾವಿರ ನಗದು ನೀಡಿದರು.
ಸಂಸ್ಥೆ ಕಾರ್ಯದರ್ಶಿ ಅಲ್ತಾಫ್ ಅಹಮ್ಮದ್ ಮಾತನಾಡಿ, ಮಕ್ಕಳಲ್ಲಿ ವೃದ್ಧರನ್ನು ಗೌರವಿಸುವ ಮನೋಭಾವ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ. ಹಾಗಾಗಿ ನಮ್ಮ ಸಂಸ್ಥೆಯ ಮಕ್ಕಳಿಗೆ ಇಂತಹ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಲು ಕ್ರಮವಹಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆ ಅಧ್ಯಕ್ಷ ಡಾ.ಶಾಜಿಯಾ ಮಾತನಾಡಿ, ವೃದ್ಧರು ದೇವರ ಸಮಾನ, ವೃದ್ಧರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ. ಅವರ ಆರೋಗ್ಯ ವಿಚಾರಿಸಿ ಮನೋಸ್ಥೈರ್ಯ ನೀಡಿದರು.ಈ ಸಂದರ್ಭದಲ್ಲಿ ಮುಖ್ಯಶಿಕ್ಷಕಿ ಲತಾ ಆನಂದ್ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ರಾಮನಗರದ ಹೋಲಿ ಕ್ರೆಸೆಂಟ್ ಶಿಕ್ಷಣ ಸಂಸ್ಥೆಯ ರೋಟರಿ ಇನ್ ಟ್ರಾಕ್ಟ್ ಕ್ಲಬ್ ನ ಮಕ್ಕಳು ನಂದಗೋಕುಲ ವೃದ್ಧಾಶ್ರಮಕ್ಕೆ ಡೈನಿಂಗ್ ಟೇಬಲ್ ಗಳನ್ನು ನೀಡಿದರು.