ಪೋಷಕರು, ಶಿಕ್ಷಕರು ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಸಂಕಲ್ಪ ಮಾಡಲಿ: ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ

KannadaprabhaNewsNetwork |  
Published : Feb 06, 2024, 01:31 AM IST
4ಎಚ್‌ವಿಆರ್‌3 | Kannada Prabha

ಸಾರಾಂಶ

ಪೋಷಕರು, ಶಿಕ್ಷಕರು ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಸಂಕಲ್ಪ ಮಾಡಬೇಕು.

ಕನ್ನಡಪ್ರಭ ವಾರ್ತೆ ಹಾವೇರಿ

ಪೋಷಕರು, ಶಿಕ್ಷಕರು ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಸಂಕಲ್ಪ ಮಾಡಬೇಕು. ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದಾಗ ಮಾತ್ರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುತ್ತದೆ ಎಂದು ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.

ತಾಲೂಕಿನ ಹೊಂಬರಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ತಾಯಂದಿರು ಸಂಸ್ಕೃತಿಯ ಹರಿಕಾರರು, ಮನೆಯೇ ಮೊದಲ ಪಾಠಶಾಲೆ ಎಂಬ ಮಾತಿನಂತೆ ಮಕ್ಕಳಿಗೆ ಇತಿಹಾಸ ಪುಟಗಳಲ್ಲಿ ಸಾಧಕರು ಜೀವನ ಚರಿತ್ರೆಯನ್ನು ತಾಯಂದಿರು ಮತ್ತು ಶಿಕ್ಷಕರು ಮಕ್ಕಳಿಗೆ ಮನ ಮುಟ್ಟುವಂತೆ ತಿಳಿಸಬೇಕು. ಕನ್ನಡ ಶಾಲೆಗಳಲ್ಲಿ ಉತ್ತಮ ಸಮರ್ಥ ಶಿಕ್ಷಕರು ಇದ್ದು ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಮೂಲಸೌಕರ್ಯವನ್ನು ಶಾಲೆಗಳು ಹೊಂದಿವೆ. ಪಾಲಕರು ತಮ್ಮ ಮಕ್ಕಳನ್ನು ಕನ್ನಡ ಶಾಲೆಗಳಿಗೆ ಸೇರಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂಸಿ ಅಧ್ಯಕ್ಷ ಶರಣಬಸವನಗೌಡ ಚನ್ನಗೌಡ್ರ ಮಾತನಾಡಿ, ದುಬಾರಿಯಾದ ಶಾಲೆಗಳಲ್ಲಿ ಮಕ್ಕಳಿಗೆ ಶಿಕ್ಷಣ ಕೊಡುವುದಕ್ಕಿಂತ ಗುಣಮಟ್ಟದ ಶಿಕ್ಷಣ ವ್ಯವಸ್ಥೆ ಹೊಂದಿರುವ ಹಳ್ಳಿಯ ಶಾಲೆಗಳಲ್ಲಿ ಕಲಿಸಬೇಕು. ಶಾಲಾ ಅಭಿವೃದ್ಧಿಯೇ ನಮ್ಮ ಗುರಿ ಎಂಬ ಘೋಷಣೆಯೊಂದಿಗೆ ನಮ್ಮ ಸದಸ್ಯರ ಜೊತೆ ಕೈಜೋಡಿಸಿ ಎಂದು ಗ್ರಾಮಸ್ಥರಲ್ಲಿ ಮನವಿ ಮಾಡಿದರು.

ಶಾಲೆಯ ಶೈಕ್ಷಣಿಕ ಚಟುವಟಿಕೆಯ ಕಿರು ಹೊತ್ತಿಗೆ ಬಿಡುಗಡೆಯನ್ನು ಗ್ರಾಪಂ ಉಪಾಧ್ಯಕ್ಷೆ ಗಂಗಮ್ಮ ಮುದಿಮಲ್ಲಣ್ಣನವರ ನೆರವೇರಿಸಿದರು. ಶಾಲೆಗೆ ಭೂಮಿ ದಾನ ಮಾಡಿದ ಫಕ್ಕೀರಗೌಡ್ರ ಪಾಟೀಲ ಅವರನ್ನು ಸನ್ಮಾನಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಾದ ಭಾಗ್ಯ ಹಳೆಮನಿ, ಕವಿತಾ ಚನ್ನಗೌಡ್ರ, ದರ್ಶನ ಅವರಿಗೆ ಜಿಲ್ಲಾ ಮತ್ತು ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ನಗದು ರೂಪದಲ್ಲಿ ಬಹುಮಾನ ವಿತರಿಸಲಾಯಿತು.

ಗ್ರಾಪಂ ಸದಸ್ಯರಾದ ಚನ್ನಬಸನಗೌಡ ಹಂಚಿನಮನಿ, ಮಹಾದೇವಪ್ಪ ಬಿಸ್ಟಕ್ಕನವರ, ಸುಶಿಲವ್ವ ಕುಳೆನೂರ, ಶೈನಾಜಬಿ ಉಪ್ಪುಣಸಿ, ಹಾಗೂ ಹೇಮನಗೌಡ ಹುಡೇದ, ಶಂಕರಪ್ಪ ಬಿದರಕಟ್ಟಿ, ಗಿರೀಶ್ ಶಿವಪುರ, ಗೀತಾ ಮುದಿಮಲ್ಲಣ್ಣನವರ, ವೀರೇಶ ಹಂಚಿನಮನಿ, ಗುಡ್ಡಪ್ಪ ಬಿಸ್ಟಕ್ಕನವರ, ಶಂಕ್ರಪ್ಪ ಬಿದರಿಕಟ್ಟಿ, ಮಹಬೂಬಲಿ ಕ್ವಾಟಿ, ಹನುಮಪ್ಪ ಕಿಳ್ಳಿಕ್ಯಾತರ, ವೀರೇಶ ಹಾದರಗೇರಿ, ವೀರೇಶ ಪೂಜಾರ, ಹುಸೇನಬಿ ಅತ್ತಾರ, ಪುಷ್ಪಾ ಯಣ್ಣಿ, ಅನ್ನಪುರ್ಣ, ಮಾಜಾನಬಿ ರಸೂಲ್‌ಸಾಬ್ ಇತರರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ