ಕನ್ನಡಪ್ರಭ ವಾರ್ತೆ ಅಥಣಿ
ಪಟ್ಟಣದಲ್ಲಿ ಜೈನ ಸಮಾಜ ಹಾಗೂ ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಅಭಿನಂದನಾ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಮಹಾವೀರರು ಕೇವಲ ಒಂದು ಧರ್ಮ ಮತ್ತು ಜಾತಿಗೆ ಸೀಮಿತವಾಗದೇ ವಿಶ್ವಕ್ಕೆ ಶಾಂತಿ ಮತ್ತು ಅಹಿಂಸಾ ಮಾರ್ಗ ಅನುಸರಿಸುವಂತೆ ಸಾರಿದ ಮಹಾನ್ ವ್ಯಕ್ತಿಯಾಗಿದ್ದಾರೆ.
ಮಾಜಿ ಶಾಸಕ ಶಹಜಾನ ಡೊಂಗರಗಾಂವ ಮಾತನಾಡಿ, ದೇಶದಲ್ಲಿ ಅನೇಕ ಮಹಾಪುರುಷರು ಇಡೀ ಮನುಕುಲದ ಏಳಿಗೆಗಾಗಿ ಶ್ರಮಿಸಿದ್ದಾರೆ. ಮಹಾವೀರರು ನೀಡಿದ ತತ್ವ ಆದರ್ಶಗಳು ಎಲ್ಲ ಧರ್ಮಿಯರಿಗೂ ಆದರ್ಶವಾಗಿವೆ. ಆದರೆ, ಇಂದು ಅವರನ್ನು ಒಂದು ಜಾತಿ ಅಥವಾ ಸಮುದಾಯಕ್ಕೆ ಸೀಮಿತಗೊಳಿಸುವ ಸಂಕುಚಿತ ಸ್ವಭಾವ ದೂರಾಗಬೇಕು ಎಂದು ತಿಳಿಸಿದರು.ಅಥಣಿ ಪುರಸಭೆ ಉಪಾಧ್ಯಕ್ಷೆ ಭುವನೇಶ್ವರಿ ಯಕ್ಕಂಚಿ ಮಹಾವೀರರ ಭಾವಚಿತ್ರಕ್ಕೆ ಪೂಜಿಸಲ್ಲಿಸಿ ಶೋಭಾ ಯಾತ್ರೆಗೆ ಚಾಲನೆ ನೀಡಿ ಮಾತನಾಡಿ, ಮಹಾವೀರರು ಹಾಕಿಕೊಟ್ಟ ಜೀವನಾದರ್ಶ ಇಂದಿಗೂ ಪ್ರಸ್ತುವಾಗಿದೆ. 2500 ವರ್ಷಗಳ ಹಿಂದೆ ಅನೇಕ ಸಮಸ್ಯೆಗಳನ್ನು ಎದುರಿಸಿಯೂ ವಿಶ್ವಕ್ಕೆ ಶಾಂತಿ ಬೋಧಿಸಿದ ಮಹಾವೀರರು ಮೋಕ್ಷ ಮಾರ್ಗದೆಡೆ ಸಾಗಲು ಅಹಿಂಸೆಯೇ ಮೂಲಮಂತ್ರ ಎಂದು ಬೋಧಿಸಿದ್ದಾರೆ ಎಂದು ವಿವರಿಸಿದರು.
ಭಾರತೀಯ ಜೈನ ಸಂಘಟನೆಯ ರಾಜ್ಯ ಸಂಚಾಲಕ ಅರುಣ ಯಲಗುದ್ರಿ ಮಾತನಾಡಿದರು.
ಪಟ್ಟಣದಲ್ಲಿ ಸಮಸ್ತ ಅಥಣಿ ಜೈನ ಸಮಾಜ ಹಾಗೂ ತಾಲೂಕು ಆಡಳಿತದಿಂದ ಮಹಾವೀರ ತೀರ್ಥಂಕರ ಪಲ್ಲಕ್ಕಿ ಉತ್ಸವ ಹಾಗೂ ಶೋಭಾಯಾತ್ರೆ ಅದ್ಧೂರಿಯಾಗಿ ಹಮ್ಮಿಕೊಳ್ಳಲಾಗಿತ್ತು. ಬುಧವಾರ ಪೇಟೆಯಲ್ಲಿರುವ ಜೈನ ಬಸದಿಯಿಂದ ಆರಂಭವಾದ ಮೆರವಣಿಗೆಯಲ್ಲಿ ತಹಸೀಲ್ದಾರ್ ಸಿದ್ದರಾಯ ಬೋಸಗಿ, ಪುರಸಭೆ ಉಪಾಧ್ಯಕ್ಷ ಭುವನೇಶ್ವರಿ ಯಕ್ಕಂಚಿ ಮಹಾವೀರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಶೋಭಾಯಾತ್ರೆಗೆ ಚಾಲನೆ ನೀಡಿದರು. ನೂರಾರು ಶ್ರಾವಕಿಯರು ಕುಂಭದೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಮೆರವಣಿಗೆಯು ಮುಖ್ಯ ಬೀದಿಯ ಮೂಲಕ ಡಾ.ಅಂಬೇಡ್ಕರ್ ವೃತ್ತ, ವೀರರಾಣಿ ಚನ್ನಮ್ಮ ವೃತ್ತ, ಶಿವಯೋಗಿ ವೃತ್ತದ ಮೂಲಕ ತರಕಾರಿ ಮಾರುಕಟ್ಟೆಯಲ್ಲಿರುವ ಹಾಸ್ಟೆಲ್ ಬಸದಿಯಲ್ಲಿ ಸಮಾರೋಪಗೊಂಡಿತು. ಮಧ್ಯಾಹ್ನ ಅನ್ನ ಸಂತರ್ಪಣೆ ಕಾರ್ಯಕ್ರಮ ಜರುಗಿತು.