ಕನ್ನಡಪ್ರಭ ವಾರ್ತೆ ದಾವಣಗೆರೆ
ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭೂಮಾಪಕರ ಹುದ್ದೆ ಮತ್ತು ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆ ಕುರಿತಂತೆ ನಡೆಸಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅ.2ರಂದು ನಡೆಯುವ ಭೂಮಾಪಕರ ಹುದ್ದೆಗಳ ನೇರ ನೇಮಕಾತಿ ಪರೀಕ್ಷೆಯು ನಗರದ 6 ಕೇಂದ್ರಗಳಲ್ಲಿ ನಡೆಯಲಿದೆ 3773 ಅಭ್ಯರ್ಥಿಗಳು ಪರೀಕ್ಷೆಯನ್ನು ಬರೆಯುವರು, ಹಾಗೂ ಅ.4ರಂದು ನಡೆಸುವ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇರ ನೇಮಕಾತಿ ಪರೀಕ್ಷೆಯು 22 ದಾವಣಗೆರೆ ಕೇಂದ್ರಗಳಲ್ಲಿ ಹಾಗೂ 2 ಹರಿಹರ ಕೇಂದ್ರಗಳಲ್ಲಿ 13344 ಅಭ್ಯರ್ಥಿಗಳು ಪರೀಕ್ಷೆಯನ್ನು ಬರೆಯುವರು ಎರಡು ಪರೀಕ್ಷೆಯು 2 ಅವಧಿಯಲ್ಲಿ ನಡೆಯಲಿದೆ ಎಂದು ತಿಳಿಸಿದರು.
ಪರೀಕ್ಷಾ ಕೇಂದ್ರಗಳಲ್ಲಿ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಕಟ್ಟುನಿಟ್ಟಿನ ತಪಾಸಣೆ (ಈಡಿisಞiಟಿg) ನಡೆಸಬೇಕು. ಎಲೆಕ್ಟ್ರಾನಿಕ್ ಸಾಧನಗಳ ಬಳಕೆಗೆ ಸಂಪೂರ್ಣ ತಡೆ ಒಡ್ಡಬೇಕು. ಅಭ್ಯರ್ಥಿಗಳನ್ನು ತಪಾಸಣೆ ಮಾಡುವಾಗ ಜನಿವಾರ, ಶಿವಲಿಂಗ, ತಾಳಿ ಮುಂತಾದ ಧಾರ್ಮಿಕ ಸಂಕೇತಗಳ ವಿಷಯದಲ್ಲಿ ಸೂಕ್ಷ್ಮವಾಗಿ ನಡೆದುಕೊಳ್ಳಬೇಕು. ಯಾರ ಧಾರ್ಮಿಕ ಭಾವನೆಗಳಿಗೂ ಧಕ್ಕೆಯಾಗದಂತೆ ಗೌರವಯುತವಾಗಿ ತಪಾಸಣೆ ನಡೆಸಬೇಕು ಎಂದರು.ಪರೀಕ್ಷೆಯ ಹಿಂದಿನ ದಿನವೇ ಪರೀಕ್ಷಾ ಕೊಠಡಿಗಳು, ಸಿಸಿಟಿವಿ ಕ್ಯಾಮೆರಾಗಳು ಹಾಗೂ ಗೋಡೆ ಗಡಿಯಾರಗಳನ್ನು ಪರಿಶೀಲಿಸಬೇಕು. ಕೊಠಡಿಗಳನ್ನು ಸರಿಯಾಗಿ ಸೀಲ್ ಮಾಡಿ, ಕೀಲಿ ಕೈಗಳನ್ನು ಜವಾಬ್ದಾರಿಯುತ ಅಧಿಕಾರಿಗಳ ವಶದಲ್ಲೇ ಇಟ್ಟುಕೊಳ್ಳಬೇಕು ಪರೀಕ್ಷಾ ಕೇಂದ್ರಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಪರೀಕ್ಷಾ ಕೇಂದ್ರಗಳ ಮೇಲ್ವಿಚಾರಕರು ಹಾಗೂ ಸಿಬ್ಬಂದಿಗಳು ಪರೀಕ್ಷಾರ್ಥಿಗಳ ತಪಾಸಣೆ ವೇಳೆಯಲ್ಲಿ ವಿನಾಕಾರಣ ವಿಳಂಬ ಮಾಡದೆ, ಸಮಯಪ್ರಜ್ಞೆ ಹಾಗೂ ಸೌಜನ್ಯದಿಂದ ಕಾರ್ಯನಿರ್ವಹಿಸಬೇಕು ಎಂದು ನಿರ್ದೇಶನ ನೀಡಿದರು.
ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲೂ 200 ಮೀಟರ್ ಪ್ರದೇಶ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ಕೊಠಡಿ ಮೇಲ್ವಿಚಾರಕರು ಎಲ್ಲ ಮಾರ್ಗಸೂಚಿಗಳನ್ನು ಅರಿತು, ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು.ಪರೀಕ್ಷೆ ಗಳಲ್ಲಿ ಕೈಗಡಿಯಾರ, ಕ್ಯಾಲ್ಕುಲೇಟರ್, ಬ್ಲುಟೂಥ್ ಡಿವೈಸ್, ಮೋಬೈಲ್, ಇಯರ್ ಫೋನ್,ಮೈಕ್ರೋಫೋನ್ ಸಾಧನಗಳನ್ನು ಬಳಸುವುದಕ್ಕೆ ನಿಷೇಧವಿದೆ ಈ ಕುರಿತು ತೀವ್ರ ನಿಗಾ ಇಡುವಂತೆ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಭೂಮಾಪಕರ ಹುದ್ದೆ- ಪರೀಕ್ಷಾ ಕೇಂದ್ರಗಳು (6-ದಾವಣಗೆರೆ):
1) ದಾವಣಗೆರೆಯ ಹಡಡಿ ಮುಖ್ಯ ರಸ್ತೆಯ ಜಿಲ್ಲಾ ಕ್ರೀಡಾಂಗಣದ ಬಳಿ ಇರುವ ಡಿ.ಆರ್.ಎಂ. ವಿಜ್ಞಾನ ಪದವಿಪೂರ್ವ ಕಾಲೇಜು. 2) ಪಿ.ಜೆ. ಬಡಾವಣೆಯ ಅಕ್ಕಮಹಾದೇವಿ ರಸ್ತೆಯಲ್ಲಿರುವ ಎ.ವಿ.ಕಮಲಮ್ಮ ಪದವಿ ಪೂರ್ವ ಕಾಲೇಜು. 3) ಪಿ.ಜೆ. ಬಡಾವಣೆಯಲ್ಲಿರುವ ಮೋತಿವೀರಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜು. 4) ಕೆ.ಆರ್. ರಸ್ತೆಯ ಸಿ.ಎಸ್.ಐ. ಜಿಯಾನ್ ಚರ್ಚ್ ಹತ್ತಿರವಿರುವ ಸರ್ಕಾರಿ ಎಕ್ಸ್-ಮುನಿಸಿಪಲ್ ಪದವಿಪೂರ್ವ ಕಾಲೇಜು. 5) ಪಿ.ಜೆ. ಬಡಾವಣೆಯಲ್ಲಿರುವ ಎ.ಆರ್.ಜಿ. ಕಲಾ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜು. 6) ಪಿ.ಜೆ. ಬಡಾವಣೆಯಲ್ಲೇ ಇರುವ ರಾಜನಹಳ್ಳಿ ಸೀತಮ್ಮ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು. 7) ನಿಜಲಿಂಗಪ್ಪ ಬಡಾವಣೆಯ ಶ್ರೀ ಗುರುಬಕ್ಕೇಶ್ವರ ಛತ್ರದ ಬಳಿಯಿರುವ ಎಸ್.ಎಲ್. ಪದವಿಪೂರ್ವ ಕಾಲೇಜು. 8) ಹದಡಿ ವಿದ್ಯಾನಗರ ರಸ್ತೆಯ ಅನುಭವ ಮಂಟಪದ ಹತ್ತಿರದ ಶ್ರೀ ತರಳಬಾಳು ಜಗದ್ಗುರು ಸಂಯುಕ್ತ ಪದವಿಪೂರ್ವ ಕಾಲೇಜು. 9) ಪಿ.ಜೆ. ಬಡಾವಣೆಯ ಸಾಯಿ ರಾಮ ಪಾರ್ಕ್ ಹತ್ತಿರದ 2ನೇ ಮುಖ್ಯ ರಸ್ತೆ, 2ನೇ ಕ್ರಾಸ್‌ನಲ್ಲಿರುವ ಎಸ್.ಎ.ಜಿ.ಬಿ. ಸಂಯುಕ್ತ ಪದವಿಪೂರ್ವ ಕಾಲೇಜು. 10) ಎಸ್.ಎಸ್.ಬಡಾವಣೆ ''''ಎ'''' ಬ್ಲಾಕ್‌ನ ಕುಂದವಾಡ ಕೆರೆ ಹತ್ತಿರವಿರುವ ಅಥಣಿ ಸಂಯುಕ್ತ ಪದವಿಪೂರ್ವ ಕಾಲೇಜು. 11) ವಿಶ್ವವಿದ್ಯಾನಿಲಯದ ಪಕ್ಕದ ತೊಳಹುಣಸೆ ಶಿವಗಂಗೋತ್ರಿಯ ಬಾಪೂಜಿ ಎಸ್‌ಪಿಎಸ್‌ಎಸ್ ಪದವಿಪೂರ್ವ ಕಾಲೇಜು. 12) ಪಿ.ಜೆ. ಬಡಾವಣೆಯ ರೈಲ್ವೆ ನಿಲ್ದಾಣದ ಹತ್ತಿರವಿರುವ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜು. 13) ವಿದ್ಯಾನಗರದ ಈಶ್ವರ ಪಾರ್ವತಿ ದೇವಾಲಯದ ಎದುರಿಗಿರುವ ಮಗನೂರು ಬಸಪ್ಪ ಪದವಿಪೂರ್ವ ಕಾಲೇಜು. 14) ಶಿವಕುಮಾರ ಸ್ವಾಮಿ ಬಡಾವಣೆಯಲ್ಲಿರುವ ಸೆಂಟ್ ಜಾನ್ಸ್ ವಿಜ್ಞಾನ ಪದವಿಪೂರ್ವ ಕಾಲೇಜು. 15) ಸಿದ್ಧಲಿಂಗೇಶ್ವರ ನಗರದ ಡಾಂಗೆ ಪಾರ್ಕ್ ಹತ್ತಿರವಿರುವ ಶ್ರೀ ಸಿದ್ಧಗಂಗಾ ಪದವಿಪೂರ್ವ ಕಾಲೇಜು. 16) ಎಸ್. ನಿಜಲಿಂಗಪ್ಪ ಬಡಾವಣೆಯ ಅಮೃತ ಪದವಿಪೂರ್ವ ಕಾಲೇಜು. 17) ಎಸ್.ಎಸ್.ಬಡಾವಣೆಯ ಎಂ.ಬಿ.ಎ. ಮೈದಾನದ ಬಾಪೂಜಿ ಬ್ಯಾಂಕ್ ಸಮುದಾಯ ಭವನದ ಹಿಂಭಾಗದಲ್ಲಿರುವ ಡಾ.ಶಾಮನೂರು ಶಿವಶಂಕರಪ್ಪ ಪದವಿಪೂರ್ವ ಕಾಲೇಜು. 18) ಎಸ್.ಎಸ್.ಬಡಾವಣೆ ''''ಎ'''' ಬ್ಲಾಕ್‌ನ ಕುಂದವಾಡ ಕೆರೆ ಹತ್ತಿರವಿರುವ ಎಸ್.ಬಿ.ಸಿ. ಪ್ರಥಮ ದರ್ಜೆ ಮಹಿಳಾ ಕಾಲೇಜು. 19) ಎಂ.ಸಿ.ಸಿ. ''''ಬಿ'''' ಬ್ಲಾಕ್‌ನ ಯು.ಬಿ.ಡಿ.ಟಿ. ಬಾಲಕರ ವಸತಿ ನಿಲಯದ ಬಳಿ ಇರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರ. 20) ಎಸ್. ಎಸ್. ಬಡಾವಣೆ ''''ಎ'''' ಬ್ಲಾಕ್‌ನ ಒಳಾಂಗಣ ಕ್ರೀಡಾಂಗಣದ ಹತ್ತಿರವಿರುವ ಬಿ.ಎಸ್. ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜು. 21) ಶಾಮನೂರು ರಸ್ತೆಯಲ್ಲಿರುವ ಬಾಪೂಜಿ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆ (ಬಿಐಇಟಿ). 22) ಬಾಡ ಕ್ರಾಸ್‌ನ ವೀರೇಶ್ವರ ಪುಣ್ಯಾಶ್ರಮದ ಹತ್ತಿರವಿರುವ ಜೈನ್ ಪಾಲಿಟೆಕ್ನಿಕ್ ಕಾಲೇಜು. 23) ಹರಿಹರದ ವಾಗೀಶ ನಗರದಲ್ಲಿರುವ ಎಸ್.ಜೆ.ವಿ.ಪಿ. ಪದವಿ ಪೂರ್ವ ಕಾಲೇಜು ಹಾಗೂ 24) ಹರಿಹರದ ಜೆ.ಸಿ.ಬಡಾವಣೆಯ ನೀರಿನ ಟ್ಯಾಂಕ್ ಹತ್ತಿರವಿರುವ ಡಿ.ಆರ್.ಎಂ. ಸರ್ಕಾರಿ ಪದವಿಪೂರ್ವ ಕಾಲೇಜು.