ಗದಗ: ಶರಣೆ ಅಕ್ಕಮಹಾದೇವಿಯ ವಚನಗಳು ಮಹಿಳೆಯರ ಬದುಕು ಬದಲಿಸುವಂತ ಮತ್ತು ಸರ್ವರ ಬದುಕಿಗೆ ತಿರುವು ನೀಡುವಂತಗಳಾಗಿವೆ. ಆದ್ದರಿಂದ ಅಕ್ಕನ ವಚನಗಳ ಜೀವಂತಿಕೆಗೆ ಅವುಗಳ ತತ್ವಾಚರಣೆಗಳು ಬದುಕಿನಲ್ಲಿ ನಮ್ಮ ಉಸಿರಾಗಿರಬೇಕೆಂದು ಗುರುಬಸವ ಸಿಬಿಎಸ್ಇ ಶಾಲೆಯ ಯೋಗ ಶಿಕ್ಷಕಿ ಸುನಂದಾ ಜ್ಯಾನೋಪಂತರ ಹೇಳಿದರು.
ಅವರು ಸಿದ್ಧಲಿಂಗ ನಗರದಲ್ಲಿನ ಬಸವ ಯೋಗ ಮಂದಿರ (ಬಸಪ್ರಭೆ ಕ್ಯಾಂಪಸ್)ದಲ್ಲಿ ಎಸ್.ವೈ.ಬಿ.ಎಂ.ಎಸ್ ಯೋಗ ಪಾಠಶಾಲೆಯ ಬಸವ ಯೋಗ ಕೇಂದ್ರ ಹಾಗೂ ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರಗಳ ಸಹಯೋಗದಲ್ಲಿ ನಡೆದ ಸಾಪ್ತಾಹಿಕ ವಚನ ಶ್ರಾವಣ ಕಾರ್ಯಕ್ರಮದಲ್ಲಿ ಮಾತನಾಡಿದರು.ಅಧ್ಯಕ್ಷತೆ ವಹಿಸಿದ ನಿವೃತ್ತ ಮುಖ್ಯೋಪಾಧ್ಯಾಯ ಶಿವನಗೌಡ ಗೌಡರ ಮಾತನಾಡಿ, ಸಾಪ್ತಾಹಿಕ ವಚನ ಶ್ರಾವಣ ಕಾರ್ಯಕ್ರಮವು ಸಮಾಜಮುಖಿಯಾಗಿರುವ ಕಾರ್ಯಕ್ರಮವಾಗಿದೆ. ವೈಜ್ಞಾನಿಕವಾಗಿ ನಾವು ಎಷ್ಟೇ ಮುಂದುವರಿದರೂ ಇನ್ನೂ ನಮ್ಮ ಭಾವನೆಗಳು ಬದಲಾಗಿರುವುದಿಲ್ಲ. ಸಮಾಜದಲ್ಲಿ ಕಂದಾಚಾರ, ಮೂಢನಂಬಿಕೆ, ಅನೀತಿ-ಅತ್ಯಾಚಾರ ನಡೆಯುತ್ತಲಿವೆ. ಇವುಗಳ ನಿಯಂತ್ರಣಕ್ಕೆ ವಚನ ಶ್ರಾವಣದಂತ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕೆಂದರು.
ಈ ವೇಳೆ ಸಾಪ್ತಾಹಿಕ ವಚನ ಶ್ರಾವಣ ಸೇವಾ ಸಮಿತಿಯ ಅಧ್ಯಕ್ಷ ಡಾ.ಎಸ್.ಕೆ.ನಾಲತ್ವಾಡಮಠ, ಬಸವ ಯೋಗ ಕೇಂದ್ರದ ಪ್ರಾ. ಕೆ.ಎಸ್.ಪಲ್ಲೇದ, ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ಅಧ್ಯಕ್ಷೆ ವಿಜಯಲಕ್ಷ್ಮೀ ಆನೆಹೊಸೂರು ಹಾಗೂ ದಾಸೋಹ ಸೇವಾಕರ್ತ ವೀಣಾ ಗೌಡರ ಮಾತನಾಡಿದರು. ವಚನ ಕಂಠಪಾಠ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಗದು ಬಹುಮಾನ ವಿತರಿಸಲಾಯಿತು.ವಿ.ಎಚ್. ಪಾಟೀಲ, ಅಂದಾನೆಪ್ಪ ವಿಭೂತಿ, ಐ.ಕೆ. ಕಮ್ಮಾರ, ಡಾ. ಎ.ಡಿ. ಹುಳಪಲ್ಲೆ, ಎಸ್.ಎನ್. ಹಕಾರೆ, ಅಮರೇಶ ರಾಂಪೂರ, ಅಂಬಿಕಾ ರೂಡಗೆ, ಜಯಶ್ರೀ ಡಾವಣಗೇರಿ, ಸುಲೋಚನಾ ಐಹೊಳ್ಳಿ, ಕಸ್ತೂರಿ ಮರಿಗೌಡರ, ಶೋಭಾ ಬಾಂಡಗೆ, ಪುಷ್ಪಾ ತಿಪ್ಪಶೆಟ್ಟಿ, ಗಿರಿಜಾ ಅಂಗಡಿ, ಪಾರ್ವತಿ ಭೂಮಾ, ಶಾಂತಾ ಕುಂದಗೋಳ ಇನ್ನಿತರು ಇದ್ದರು.
ಬಸವರಾಜ ತೋಟಿಗೇರಿ ಸ್ವಾಗತಿಸಿದರು. ಡಾ. ಎಂ.ವಿ. ಐಹೊಳ್ಳಿ ನಿರೂಪಿಸಿದರು. ಚೇತನ ಚುಂಚಾ ವಂದಿಸಿದರು.