ಕನ್ನಡಪ್ರಭ ವಾರ್ತೆ ಮಂಡ್ಯ
ವಿದ್ಯಾರ್ಥಿಗಳು ಪಠ್ಯ ವಿಷಯದ ಜೊತೆಗೆ ಕ್ರೀಡಾ ಚಟುವಟಿಕೆಯಲ್ಲೂ ಆಸಕ್ತಿ ವಹಿಸುವುದು ಅವಶ್ಯ. ಫುಟ್ಬಾಲ್ ಕ್ರೀಡೆಗೆ ಹೆಚ್ಚು ಮಹತ್ವ ನೀಡುವಂತೆ ಎಂದು ಬಿಜೆಪಿ ಜಿಲ್ಲಾ ನಗರ ಘಟಕದ ಅಧ್ಯಕ್ಷ ವಸಂತ್ ಕುಮಾರ್ ಸಲಹೆ ನೀಡಿದರು.ನಗರದ ಬಿ.ಜಿ.ದಾಸೇಗೌಡ ಕ್ರೀಡಾಂಗಣದಲ್ಲಿ ಯುವ ಸಬಲೀಕರಣ ಕ್ರೀಡಾ ಇಲಾಖೆ, ಸ್ವರ್ಣ ಫುಟ್ಬಾಲ್ ಅಭಿವೃದ್ಧಿ ಸಂಸ್ಥೆ, ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್‌ನಿಂದ ಆಯೋಜಿಸಿದ್ದ ರಾಜ್ಯಮಟ್ಟದ 5–ಎಸ್ ಫುಟ್ಬಾಲ್ ಪಂದ್ಯಾವಳಿ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಿ ಮಾತನಾಡಿದರು.
ಫುಟ್ಬಾಲ್‌ನಲ್ಲಿ ಎರಡೂ ತಂಡಗಳ ನಡುವಿನ ರೋಚಕ ಹಣಾಹಣಿ ಪ್ರೇಕ್ಷಕರಿಗೆ ಸಂತಸ ನೀಡಿದೆ. ಇದರಲ್ಲಿ ಎರಡೂ ತಂಡಗಳು ಸಮಬಲದ ಹೋರಾಟದಲ್ಲಿ ನಿರತರಾಗಿ ಅದನ್ನು ಕೊನೆವರೆಗೂ ಉಳಿಸಿಕೊಂಡು ಹೋಗಿದ್ದು ಕುತೂಹಲಕಾರಿ ಬೆಳವಣಿಗೆಯಂತೆ ಕಂಡಿತು. ಇಂತಹ ಆಸಕ್ತಿದಾಯಕ ಆಟಗಳು ಗ್ರಾಮೀಣ ಭಾಗದಲ್ಲಿಯೂ ಹೆಚ್ಚು ನಡೆಯಬೇಕು ಎಂದು ತಿಳಿಸಿದರು.ಮಂಡ್ಯದ ನೇತಾಜಿ ಫುಟ್ಬಾಲ್ ತಂಡವು ಪ್ರಥಮ ಬಹುಮಾನ ಗಳಿಸಿದರೆ ಮೈಸೂರಿನ ವೀನಸ್ ಫುಟ್ಬಾಲ್ ತಂಡವು ದ್ವಿತೀಯ ಬಹುಮಾನ ಗಳಿಸಿತು. ಕಾರ್ಯಕ್ರಮದಲ್ಲಿ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪ್ರವೀಣ್, ಫುಟ್ಬಾಲ್ ಮಾಜಿ ಆಟಗಾರರಾದ ಆಟೋ ನಾಗರಾಜ್, ವೆಂಕಟ್, ವೇಣುಗೋಪಾಲ್, ಮುಖಂಡರಾದ ಕೃಷ್ಣಪ್ಪ, ನಟರಾಜು, ರವಿಚಂದ್ರ ಭಾಗವಹಿಸಿದ್ದರು.ಮಾನಸಿಕ ಆರೋಗ್ಯಕ್ಕೆ ಕ್ರೀಡೆ ಸಹಕಾರಿ
ಮಂಡ್ಯ:ಕ್ರೀಡಾ ಕೌಶಲ್ಯಗಳಿಂದ ದೈಹಿಕ ಬಲ ಹೆಚ್ಚುವ ಜೊತೆಗೆ ಮಾನಸಿಕ ಆರೋಗ್ಯಕ್ಕೂ ಸಹಕಾರಿಯಾಗಲಿದೆ ಎಂದು ಸ್ವರ್ಣ ಫುಟ್ಬಾಲ್ ಅಭಿವೃದ್ಧಿ ಸಂಸ್ಥೆ ಉಪಾಧ್ಯಕ್ಷ ಡಾ. ಆದರ್ಶ ಅಭಿಪ್ರಾಯಪಟ್ಟರು.
ನಗರದ ಅರ್ಕೇಶ್ವರನಗರ ಬಡಾವಣೆಯ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ಸ್ವರ್ಣ ಫುಟ್ಬಾಲ್ ಅಭಿವೃದ್ಧಿ ಸಂಸ್ಥೆ ಹಾಗೂ ಜಿಲ್ಲಾ ಪುಟ್‌ಬಾಲ್ ಅಸೋಸಿಯೇಷನ್ ವತಿಯಿಂದ ನಡೆದ 2 ದಿನದ ರಾಜ್ಯಮಟ್ಟದ 5 ಎಸ್ ಪುಟ್‌ಬಾಲ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.ಕ್ರೀಡೆಯು ಮನೋಸ್ಥೈರ್‍ಯ ಹೆಚ್ಚಿಸುವ ಜೊತೆಗೆ ಆರೋಗ್ಯಕರ ಪೈಪೋಟಿಗೆ ಒತ್ತು ನೀಡುತ್ತದೆ. ದೇಹವನ್ನು ಉಲ್ಲಾಸಿತವಾಗಿಡಲು ಸಹಕರಿಸುತ್ತದೆ. ಕ್ರೀಡೆಯಿಂದ ಮತ್ತಷ್ಟು ಗ್ರಾಮೀಣ ಕ್ರೀಡಾಪಟುಗಳು ಹೊರಹೊಮ್ಮಬೇಕು. ಒಲಂಪಿಕ್‌ನಂತಹ ದೊಡ್ಡ ಮಟ್ಟದ ಪಂದ್ಯಾವಳಿಯಲ್ಲಿ ಸಾಧನೆ ಮಾಡಬೇಕು ಎಂದರು.
ರಾಜ್ಯಮಟ್ಟದ ಫುಟ್ಬಾಲ್ ಪಂದ್ಯಾವಳಿಯಲ್ಲಿ ರಾಜ್ಯದಾದ್ಯಂತ 22 ತಂಡಗಳು ಆಗಮಿಸಿದ್ದು, ಗೆಲವಿಗಾಗಿ ತೀವ್ರ ಸೆಣಸಾಟ ನಡೆಸಲಿವೆ. ಸಮಾರಂಭದಲ್ಲಿ ಸಂಸ್ಥೆ ಗೌರವಾಧ್ಯಕ್ಷ ಆಟೋ ನಾಗರಾಜ್, ಅಧ್ಯಕ್ಷ ವೆಂಕಟ್, ಪದಾಧಿಕಾರಿಗಳಾದ ವೇಣುಗೋಪಾಲ್, ಹರ್ಷಿತ್, ಗುರು, ಸಂದೇಶ್, ಪ್ರಸಾದ್ ಭಾಗವಹಿಸಿದ್ದರು.