ಶಿಕ್ಷಕರು ಮಕ್ಕಳ ಮನಸ್ಸು ಅರಿತು ಬೋಧನೆ ಮಾಡಲಿ

KannadaprabhaNewsNetwork |  
Published : Sep 16, 2024, 01:59 AM IST
(15ಎನ್.ಆರ್.ಡಿ3 ಶಿಕ್ಷಕರ ದಿನಾಚಾರಣಿ ಕಾರ್ಯಕ್ರಮದಲ್ಲಿ ಬ್ರ. ಪ್ರಭಕ್ಕನವರು ಮಾತನಾಡುತ್ತಿದ್ದಾರೆ.)  | Kannada Prabha

ಸಾರಾಂಶ

ನಮ್ಮ ಶಿಕ್ಷಣದ ಪದವಿಗಿಂತ ಅಧ್ಯಾತ್ಮಿಕ ಶಿಕ್ಷಣದ ಪದವಿ ಪರಮಾತ್ಮನಿಂದ ಮಾತ್ರ ಸಾಧ್ಯ ಅವನ ಸಾನ್ನಿಧ್ಯ ದಲ್ಲಿ ಎಲ್ಲರೂ ಬೆಳಗಬೇಕು

ನರಗುಂದ: ಶಿಕ್ಷಕರು ಮಕ್ಕಳ ಮನಸ್ಸು ಅರಿತು ಬೋಧನೆ ಮಾಡಬೇಕು ಎಂದು ಬ್ರಹ್ಮಕುಮಾರಿ ಪ್ರಭಕ್ಕನವರ ಹೇಳಿದರು.

ಅವರು ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಏಕಮುಖ ಶಿಕ್ಷಣ ನೀಡದೇ ಪಂಚಮುಖಿ ರೂಪದಲ್ಲಿ ಶಿಕ್ಷಕರು ಶಿಕ್ಷಣ ನೀಡಬೇಕಿದೆ. ದೈಹಿಕ, ಮಾನಸಿಕ,ಸಾಮಾಜಿಕ, ಸಾಂಸ್ಕೃತಿಕ, ಅಧ್ಯಾತ್ಮಿಕ ಶಿಕ್ಷಣ ಬೋಧಿಸಿ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಕಾರಣವಾಗಬೇಕು.ನಿತ್ಯ, ಪರಮಾತ್ಮ, ರೈತ, ಪಂಚಭೂತ ನೆನೆದು ಸಂಬಂಧಿಗಳಿಗೆ ಹಾಗೂ ಲೋಕಕ್ಕೆ ಒಳಿತಾಗಲಿ ಎಂಬುದರ ಬಗ್ಗೆ ಶಿಕ್ಷಕರು ಚಿಂತನೆ ನಡೆಸಬೇಕು. ಅಧ್ಯಾತ್ಮ ಕೇಂದ್ರವಾದ ಇಲ್ಲಿ ಪರಮಾತ್ಮನೇ ಶಿಕ್ಷಕನಾಗಿದ್ದಾನೆ. ಅವನ ಅಡಿಯಲ್ಲಿ ಪ್ರತಿಯೊಬ್ಬರು ಶಿಕ್ಷಣ ಪಡೆದು ಮಕ್ಕಳಿಗೂ ಬೋಧಿಸಬೇಕು. ಮೌಲ್ಯಾಧಾರಿತ ಶಿಕ್ಷಣ ಭವಿಷ್ಯ ದಲ್ಲಿ ಪ್ರತಿಯೊಬ್ಬ ಶಿಕ್ಷಕರು ಮನದಲ್ಲಿ ಉಳಿಯುವಂತೆ ಬಾಳಬೇಕು. ನಮ್ಮ ನಡೆನುಡಿ ಮಕ್ಕಳು ವೀಕ್ಷಿಸಿ ಅನುಸರಿಸುತ್ತಾರೆ ಎಂಬ ಎಚ್ಚರಿಕೆಯೊಂದಿಗೆ ಪಾಠ ಮಾಡಬೇಕು ಎಂದರು.

ಹುಬ್ಬಳ್ಳಿಯ ಸಂಪನ್ಮೂಲ ವ್ಯಕ್ತಿ ಮಹಾಂತೇಶ ಮಾತನಾಡಿ, ನಮ್ಮ ಶಿಕ್ಷಣದ ಪದವಿಗಿಂತ ಅಧ್ಯಾತ್ಮಿಕ ಶಿಕ್ಷಣದ ಪದವಿ ಪರಮಾತ್ಮನಿಂದ ಮಾತ್ರ ಸಾಧ್ಯ ಅವನ ಸಾನ್ನಿಧ್ಯ ದಲ್ಲಿ ಎಲ್ಲರೂ ಬೆಳಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಕನ್ನಡ ಉಪನ್ಯಾಸಕ ಡಾ. ಬಸವರಾಜ ಹಲಕುರ್ಕಿ ಮಾತನಾಡಿ, ಶಿಕ್ಷಕರಾದವರು ಪ್ರಚಲಿತ ವಿದ್ಯಮಾನದೊಂದಿಗೆ ಮಕ್ಕಳ ಮನಮುಟ್ಟುವಂತೆ ಶಿಕ್ಷಣ ನೀಡಬೇಕು. ತಾಳ್ಮೆ,ಶಾಂತಿ,ಸತ್ಯ, ಪ್ರಾಮಾಣಿಕತೆಯೊಂದಿಗೆ ಪಾಠ ಮಾಡಿ ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸಬೇಕು ಎಂದರು. ಇದೇ ಸಂದರ್ಭದಲ್ಲಿ ತಾಲೂಕಿನ ವಿವಿಧ ಶಾಲೆಗಳ 75 ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ವೇದಿಕೆಯಲ್ಲಿ ಜಿ.ಎನ್.ದೊಡನಿಂಗಪ್ಪನವರ, ಸಂತೋಷ ತುರನೂರ, ಎಚ್.ಎಸ್. ಬೆಳಕೊಪ್ಪದ, ಗುಗ್ಗರಿ, ಹೊನ್ಧಬಿಂದಗಿ, ಕುಂದರಗಿ, ಡಿ.ಬಿ. ಪಾಟೀಲ, ವಿ.ಎನ್. ಕೊಳ್ಳಿ, ವೈದ್ಯ ಡಾ. ವೀರನಗೌಡ್ರ, ಶಿವಲೀಲಾ ಕೊಳ್ಳಿ, ಚಿತ್ರ ಕಲಾ ಶಿಕ್ಷಕ ಎಂ.ಹನಮಂತಪ್ಪ ಸೇರಿದಂತೆ ಮುಂತಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೂಡುಬಿದಿರೆ ತಾಲೂಕು ಪತ್ರಕರ್ತರ ಸಂಘದ ಪದಾಧಿಕಾರಿಗಳ ಪದಗ್ರಹಣ
ಉಡುಪಿ ಪರ್ಯಾಯಕ್ಕೆ ಜಿಲ್ಲೆಯ ಶಾಸಕರಿಂದ 5 ಕೋ. ರು. ಅನುದಾನ