ಕನ್ನಡಪ್ರಭ ವಾರ್ತೆ ಭಟ್ಕಳ
ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತಟ್ಟಿಹಕ್ಕಲು ದುರಂತದಿಂದ ಆದ 11 ಜನರ ಸಾವಿನ ಬಗ್ಗೆ ಸಾರ್ವಜನಿಕ ವಲಯದಲ್ಲಿ ನಾನಾ ರೀತಿಯ ಅಭಿಪ್ರಾಯ ಕೇಳಿ ಬಂದಿದೆ. ಈ ದುರಂತ ಅದೇ ದಿನ ಬೆಳಗಿನ ಜಾವ ಭಾರೀ ಪ್ರಮಾಣದಲ್ಲಿ ಮಳೆ ಸುರಿದು ಹೊಳೆಯಲ್ಲಿ ಕೆಸರಿನಿಂದ ಆಗಿದೆಯೋ, ರೆಸಾರ್ಟ್ ಮಾಡಲು ಸೇತುವೆಗಾಗಿ ಮಣ್ಣು ತುಂಬಿದ್ದರಿಂದ ನೀರು ಒಂದು ಕಡೆಯಲ್ಲಿ ನಿಂತ ಪರಿಣಾಮದಿಂದ ಆಗಿದೆಯೋ ಅಥವಾ ಸಹಜವಾಗಿಯೇ ಆಗಿದೆಯೋ ಎನ್ನುವುದರ ಬಗ್ಗೆ ಕೂಲಂಕುಶವಾದ ತನಿಖೆ ನಡೆಸುವ ಅಗತ್ಯವಿದೆ. ಈ ಬಗ್ಗೆ ಜಿಲ್ಲಾಡಳಿತವನ್ನು ಒತ್ತಾಯಿಸಲಿದ್ದೇನೆ ಎಂದ ಅವರು ಮೃತರ ಕುಟುಂಬದವರಿಗೆ ಸರಕಾರದಿಂದ ಏನೇನು ಸೌಲಭ್ಯ ಸಿಗಬೇಕೋ ಮತ್ತು ಸಾಮಾಜಿಕವಾಗಿ ಏನು ಸಹಾಯ ಮಾಡಬೇಕೋ ಅದನ್ನು ಮಾಡುವ ಕೆಲಸ ಮಾಡುತ್ತೇವೆ ಎಂದರು. ಇಂತಹ ದುರಂತದಿಂದ ನೋವಾಗಿದೆ. ಮೃತರ ಮನೆಗಳಿಗೆ ಖುದ್ದು ಭೇಟಿ ನೀಡಿದ್ದೇನೆ. ನಮ್ಮಿಂದ ಆಗುವ ಸಹಾಯ ಖಂಡಿತ ಮಾಡುತ್ತೇವೆ ಎಂದರು.ಭಟ್ಕಳ ದುರಂತ: ಮೃತರ ಕುಟುಂಬದವರಿಗೆ ಕಾಗೇರಿ ಸಾಂತ್ವನ
ಇತ್ತೀಚೆಗೆ ಶಿರಾಲಿಯ ತಟ್ಟಿಹಕ್ಲು ಹೊಳೆಯಲ್ಲಿ ಕಪ್ಪೆ ಚಿಪ್ಪು ಸಂಗ್ರಹಿಸುವಾಗ ನಡೆದ ದುರಂತದಿಂದ ಮೃತಪಟ್ಟವರ ಮನೆಗೆ ಬುಧವಾರ ಬೆಳಗ್ಗೆ ಸಂಸದ ವಿಶ್ವೇಶ್ಬರ ಹೆಗಡೆ ಕಾಗೇರಿ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.ದುರಂತದಿಂದ ಎಲ್ಲರಿಗೂ ನೋವಾಗಿದೆ. ಕೇಂದ್ರ ಸರಕಾರದಿಂದ ಈಗಾಗಲೇ ಪರಿಹಾರ ಘೋಷಣೆ ಆಗಿದ್ದು, ಸರಕಾರದಿಂದ ಮತ್ತಷ್ಟು ಸೌಲಭ್ಯ ಒದಗಿಸಲು ಪ್ರಯತ್ನಿಸಲಾಗುವುದು. ಮೃತಪಟ್ಟವರ ಮನೆಯವರು ದು:ಖದಲ್ಲಿದ್ದಾರೆ. ಕೆಲವರು ಆಹಾರವನ್ನೂ ಸರಿಯಾಗಿ ಸೇವಿಸದ ಹಿನ್ನೆಲೆ ಸಂಸದರು ಕುಟಂಬದ ಸದಸ್ಯರ ಆರೋಗ್ಯದ ಹಿತದೃಷ್ಟಿಯಿಂದ ಈ ಭಾಗಕ್ಕೆ ವೈದ್ಯರನ್ನು ಕರೆಯಿಸಿ ತಪಾಸಣೆ ನಡೆಸುವಂತೆ ಸೂಚಿಸಿದರು.ಈ ಸಂದರ್ಭ ಮಾಜಿ ಸಚಿವ ಶಿವಾನಂದ ನಾಯ್ಕ, ಮಾಜಿ ಶಾಸಕ ಸುನೀಲ ನಾಯ್ಕ, ಬಿಜೆಪಿ ಮಂಡಲಾಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ, ಊರಪ್ರಮುಖರಾದ ಕೃಷ್ಣಾ ನಾಯ್ಕ, ಪೃಥ್ವಿ ಸೇರಿದಂತೆ ಹಲವು ಮುಖಂಡರು ಇದ್ದರು.