ಸಂವಿಧಾನದ ಆಶಯದಂತೆ ನಾವೆಲ್ಲರೂ ಕರ್ತವ್ಯ ನಿರ್ವಹಿಸೋಣ-ಡಾ. ಚಂದ್ರಶೇಖರ

KannadaprabhaNewsNetwork | Published : Nov 27, 2024 1:02 AM

ಸಾರಾಂಶ

ಡಾ. ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ಜಗತ್ತಿನಲ್ಲಿಯೇ ಅತಿದೊಡ್ಡ ಲಿಖಿತ ಸಂವಿಧಾನ ಭಾರತದಲ್ಲಿ ರಚನೆಯಾಗಿದ್ದು, ಸಂವಿಧಾನದ ಅಡಿಯಲ್ಲಿ ಅದರ ಆಶಯದಂತೆ ನಾವೆಲ್ಲರೂ ಕರ್ತವ್ಯ ನಿರ್ವಹಿಸೋಣ ಎಂದು ಹಾವೇರಿಯ ಲೋಕಾಯುಕ್ತ ಡಿ.ವೈ.ಎಸ್‌.ಪಿ ಡಾ. ಬಿ.ಪಿ. ಚಂದ್ರಶೇಖರ ಹೇಳಿದರು.

ರಟ್ಟೀಹಳ್ಳಿ: ಡಾ. ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ಜಗತ್ತಿನಲ್ಲಿಯೇ ಅತಿದೊಡ್ಡ ಲಿಖಿತ ಸಂವಿಧಾನ ಭಾರತದಲ್ಲಿ ರಚನೆಯಾಗಿದ್ದು, ಸಂವಿಧಾನದ ಅಡಿಯಲ್ಲಿ ಅದರ ಆಶಯದಂತೆ ನಾವೆಲ್ಲರೂ ಕರ್ತವ್ಯ ನಿರ್ವಹಿಸೋಣ ಎಂದು ಹಾವೇರಿಯ ಲೋಕಾಯುಕ್ತ ಡಿ.ವೈ.ಎಸ್‌.ಪಿ ಡಾ. ಬಿ.ಪಿ. ಚಂದ್ರಶೇಖರ ಹೇಳಿದರು.

ಪಟ್ಟಣದ ಕುಮಾರೇಶ್ವರ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಸಂವಿಧಾನ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಡಾ. ಬಾಬಾಸಾಹೇಬರು ನೀಡಿದ ಅವಕಾಶಗಳನ್ನು ಎಲ್ಲರೂ ಸದ್ವಿನಿಯೋಗ ಮಾಡಿಕೊಳ್ಳಬೇಕು. ಅಂಬೇಡ್ಕರ್‌ ರಚಿಸಿದ ಸಂವಿಧಾನವು ನಮ್ಮ ಜೀವನ ಬದಲಾದಂತೆ ನಮ್ಮ ಸಂವಿಧಾನವು ನಮಗೆ ತಕ್ಕಂತೆ ತಿದ್ದುಪಡಿ ಮಾಡಿಕೊಳ್ಳಬಹುದಾಗಿದೆ. ಭಾರತ ದೇಶದ ಭವಿಷ್ಯದ ದೂರ ದೃಷ್ಟಿವುಳ್ಳ ಅವರ ಕಲ್ಪನೆ ನಮಗೆ ದಾರಿದೀಪವಾಗಿದೆ ಎಂದರು.

ನಮ್ಮ ಪ್ರಜಾಪ್ರಭುತ್ವ ರಾಷ್ಟ್ರದ ಮೂಲಭೂತ ಮೌಲ್ಯಗಳಿಗೆ ಬದ್ದರಾಗಿದ್ದು, ನ್ಯಾಯ, ಸಮಾನತೆ, ಸ್ವತಂತ್ರ, ಭ್ರಾತೃತ್ವದ ತತ್ವಗಳನ್ನು ಗೌರವಿಸುವುದು ನಮ್ಮೇಲ್ಲರ ಆದ್ಯ ಕರ್ತವ್ಯ. ನಮ್ಮ ಸಂವಿಧಾನವು ಅತ್ಯಂತ ಕಠಿಣವೂ ಅಲ್ಲ ಸಮ್ಯವು ಅಲ್ಲದಾಗಿದ್ದು ಕಾರಣ ಭಾರತ ಪ್ರತಿಯೊಬ್ಬ ಪ್ರಜೆಯೂ ಸಂವಿಧಾನವನ್ನು ಅರಿತು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.

ರಟ್ಟೀಹಳ್ಳಿ ಹಿರೇಕೆರೂರು ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಶ್ರೀಧರ ಮಾತನಾಡಿ, ನಮ್ಮ ದೇಶವು ಅತ್ಯಂತ ಪ್ರಗತಿ ಹಾಗೂ ಬಲಿಷ್ಠವಾಗಲು ಡಾ. ಬಾಬಾಸಾಹೇಬ್ ಅಂಬೇಡ್ಕರ್‌ ಅವರು ನಮಗೆ ನೀಡಿದ ಸಂವಿಧಾನವೇ ಪ್ರಮುಖ ಕಾರಣ, ಸಂವಿಧಾನವನ್ನು 2 ವರ್ಷ, 11 ತಿಂಗಳು, 18 ದಿನಗಳ ಕಾಲ ರಚಿಸಿ ನ. 26ರಂದು ನಮಗೆ ನೀಡಿದ ದಿನ ನಮಗೆಲ್ಲ ಅವಿಸ್ಮರಣೀಯ ಎಂದರು.

ಭಾರತದ ಒಕ್ಕೂಟ ವ್ಯವಸ್ಥೆಗೂ ಮತ್ತು ಜಗತ್ತಿನ ಬೇರೆ ಬೇರೆ ದೇಶಗಳ ಒಕ್ಕೂಟ ವ್ಯವಸ್ಥೆಗೂ ಇರುವ ಅಂತರ ಮತ್ತು ವ್ಯತ್ಯಾಸವನ್ನು ಅಂಬೇಡ್ಕರ್ ಅವರು ಸ್ಪಷ್ಟವಾಗಿ ಗುರುತಿಸಿದ್ದು ಒಕ್ಕೂಟ ವ್ಯವಸ್ಥೆ ಮತ್ತದರ ಸ್ವಾತಂತ್ರ್ಯದ ಬಗ್ಗೆ ಅಂಬೇಡ್ಕರ್ ಅವರ ದೂರ ದೃಷ್ಠಿ ರಚನೆಯ ಗೌರವ ಅವರಿಗೆ ಸಲ್ಲುತ್ತದೆ ಎಂದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಸಂವಿಧಾನದ ಭಾಷಣ ಎರ್ಪಡಿಸಲಾಗಿತ್ತು. ಶಿಕ್ಷಕ ತ್ಯಾಗರಾಜ ಯಲಿವಾಳ ಸಂವಿಧಾನದ ಪೀಠಿಕೆಯನ್ನು ವಾಚಿಸಿದರು.

ಕುಮಾರೇಶ್ವರ ಬಾಲಿಕಾ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಎಂ. ಕುಬೇರಪ್ಪ, ಬಾಲಕರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಲಿಂಗರಾಜ ಎಂ.ಎಚ್., ಅಕ್ಷರ ದಾಸೋಹ ನಿರ್ದೇಶಕ ಎಚ್ ಎಚ್. ಜಾಡರ, ಸಿ.ಆರ್.ಪಿ ಜಗದೀಶ ಕಠಾರೆ, ರಾಘವೇಂದ್ರ ಕುಲಕರ್ಣಿ ಮುಂತಾದವರು ಇದ್ದರು.

ಪಟ್ಟಣ ಪಂಚಾಯತ: ಡಾ. ಬಿ.ಆರ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಲ್ಲಿ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಹಾಗೂ ಸಮಾನತೆಯ ಅಡಿಯಲ್ಲಿ ರಚಿತವಾದ ಸಂವಿಧಾನ ನಮ್ಮ ಬಾಳಿಗೆ ಭದ್ರ ಬುನಾದಿಯಾಗಿದೆ ಎಂದು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸಂತೋಷ ಚಂದ್ರಕೇರ ಹೇಳಿದರು.

ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ನೌಕರ ರಾಜಕುಮಾರ ಸಂವಿಧಾನ ದಿನಾಚರಣೆ ಅಂಗವಾಗಿ ಪ್ರತಿಜ್ಞಾವಿಧಿ ಬೋಧಿಸಿದರು.

ಪ್ರಥಮ ದರ್ಜೆ ಕಂದಾಯ ನಿರೀಕ್ಷಕ ವಿನೂತಾ, ಪಟ್ಟಣ ಪಂಚಾಯತ್ ಎಂಜಿನಿಯರ್ ವಿನಾಯಕ ಬತ್ತಿಕೊಪ್ಪ ಪರಮೇಶಪ್ಪ ಅಂತರವಳ್ಳಿ, ಸಂತೋಷ ಬಿಳಚಿ, ನಿಖಿಲ್ ಅರ್ಕಾಚಾರಿ, ಬಸವರಾಜ ಕವಲೆತ್ತ, ಬಸವರಾಜ ಕಟ್ಟೇಕಾರ್, ಬಸವರಾಜ ಹಿರೇಮಠ, ಬಸವರಾಜ ಚಲವಾದಿ, ಮಾರುತಿ ಜಾಧವ ಮುಂತಾದವರು ಇದ್ದರು.

Share this article