ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನಗರದ ಬಿಳೂರು ಗುರುಬಸವ ಅಜ್ಜನವರ ದೇವಸ್ಥಾನದಿಂದ ಆರಂಭಗೊಂಡ ತಿರಂಗಾ ಯಾತ್ರೆಗೆ ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಚಾಲನೆ ನೀಡಿ ಮಾತನಾಡಿದರು. ರಾಷ್ಟ್ರ ಗೌರವದ ಸಂಕೇತವಾಗಿರುವ ತ್ರಿವರ್ಣ ಧ್ವಜವು ಪ್ರತಿಯೊಬ್ಬ ಭಾರತೀಯನಲ್ಲೂ ಐಕ್ಯತೆ, ಹೆಮ್ಮೆ ಹಾಗೂ ದೇಶಭಕ್ತಿಯ ಭಾವನೆಯನ್ನು ಮೂಡಿಸುತ್ತದೆ ಎಂದರು.
500 ಮೀಟರ್ ಉದ್ದದ ಬೃಹತ್ ತಿರಂಗಾ ಆಕರ್ಷಣೆ: ಯಾತ್ರೆಯಲ್ಲಿ ಸುಮಾರು 500 ಮೀಟರ್ ಉದ್ದದ ಬೃಹತ್ ತಿರಂಗಾ ಧ್ವಜ ಪ್ರಮುಖ ಆಕರ್ಷಣೆಯಾಗಿದ್ದು, ಸಾರ್ವಜನಿಕರ ಗಮನ ಸೆಳೆಯಿತು. ರಾಷ್ಟ್ರಧ್ವಜವನ್ನು ಎತ್ತಿ ಹಿಡಿದು ದೇಶಭಕ್ತಿ ಘೋಷಣೆಗಳೊಂದಿಗೆ ಸಾಗಿದ ಕಾರ್ಯಕರ್ತರು ಹಾಗೂ ನಾಗರಿಕರು ಯಾತ್ರೆಗೆ ಮೆರುಗು ತಂದರು.ತಿರಂಗಾ ಯಾತ್ರೆಯು ಬಸವೇಶ್ವರ ವೃತ್ತ, ಮಹಾತ್ಮಾ ಗಾಂಧಿ ರಸ್ತೆ, ಕಿಲ್ಲಾ ಅಂಬಾಭವಾನಿ ದೇವಸ್ಥಾನ, ಹಳೆ ಪೋಸ್ಟ್ ಮಾರ್ಗವಾಗಿ ಸರದಾರ ವಲ್ಲಭಭಾಯಿ ಪಟೇಲ್ ಚೌಕ್ನಲ್ಲಿ ಸಮಾರೋಪಗೊಂಡಿತು. ನಂತರ ನಡೆದ ಬಹಿರಂಗ ಸಭೆ ಜರುಗಿತು. ಮಾಜಿ ಸೈನಿಕರಾದ ಕ್ಯಾಪ್ಟನ್ ಅರ್ಜುನ ಕೋರಿ, ಸುಬೇದಾರ ಮೇಜರ್ ಗದಿಗೆಪ್ಪ ಅರಕೇರಿ, ಸುಬೇಧಾರ್ ಶಂಕ್ರಪ್ಪ ಬಾರಕೇರ, ಹವಾಲ್ದಾರ ವಿನೋಧ ಮುಧೋಳಿ, ನಂದು ಗಾಯಕವಾಡ, ಬಸವರಾಜ ಯಂಕಂಚಿ, ಕುಮಾರಸ್ವಾಮಿ ಹಿರೇಮಠ, ಎಸ್ಟಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ಬಸರಾಜ ಹುನಗುಂದ, ಸುರೇಶ ಕೊಣ್ಣುರ, ಡಾ.ರವಿ ಕೋಟೆನ್ನವರ, ಸುರೇಶ ಮಜ್ಜಗಿ, ಕಲ್ಲಪ್ಪ ಭಗವತಿ, ಮಲ್ಲೇಶ ವಿಜಾಪುರ, ಉಮೇಶ ಹಂಚಿನಾಳ, ಶ್ರೀಧರ ನಾಗರಬೇಟ್ಟ, ರಾಜು ರೇವಣಕರ, ಸತ್ಯನಾರಾಯಣ ಹೆಮಾದ್ರಿ, ಶಶಿಕಲಾ ಮಜ್ಜಗಿ ಭಾಗೀರಥಿ ಪಾಟೀಲ, ಜಯಶ್ರೀ ಭದ್ರಶೆಟ್ಟಿ, ಶಿವಲೀಲಾ ಸಂಬನ್ನವರ, ಸುಜಾತಾ ಶಿಂಧೆ, ಲಕ್ಷ್ಮೀ ತಳವಾರ, ಸಂಚಾಲಕರಾದ ಶಂಕರ ಗಲಗ, ಚಂದ್ರಕಾಂತ ಖಾತೆದಾರ, ಮಾನೇಶ ಅಂಬಿಗೇರ, ದುಂಡಪ್ಪ ಏಳಮ್ಮಿ, ನಾಗರಾಜ ನಾರಾಯಣಕರ್, ವಿಲಾಸ ಒಂದಕುದರಿ, ಆಕಾಶ ಚವ್ಹಾಣ, ಸೇರಿದಂತೆ ಎನ್.ಸಿ,ಸಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.ರಾಷ್ಟ್ರಧ್ವಜದ ಗೌರವ, ದೇಶದ ಏಕತೆ ಹಾಗೂ ಅಖಂಡತೆಯ ಸಂದೇಶ ಸಾರಿದ ಯಾತ್ರೆಯಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ರಾಷ್ಟ್ರಧ್ವಜವನ್ನು ಎತ್ತಿ ಹಿಡಿಯೋಣ, ವಿಕಸಿತ ಭಾರತದೆಡೆಗೆ ಒಂದಾಗಿ ಮುನ್ನಡೆಯೋಣ ಎಂಬ ಸಂಕಲ್ಪದೊಂದಿಗೆ ತಿರಂಗಾ ಯಾತ್ರೆ ಯಶಸ್ವಿಯಾಗಿ ನಡೆಯಿತು.
-ಡಾ.ವೀರಣ್ಣ ಚರಂತಿಮಠ, ಮಾಜಿ ಶಾಸಕ